Chanakya Niti: ಕಾಗೆಯ ಈ ಗುಣವನ್ನು ಜೀವನದಲ್ಲಿ ಪಾಲಿಸಿದ್ರೆ ಖಂಡಿತಾ ಯಶಸ್ವಿಯಾಗ್ತೀರಿ!

First Published | Feb 29, 2024, 3:31 PM IST

ಆಚಾರ್ಯ ಚಾಣಕ್ಯ ಹೇಳುವಂತೆ ಕಾಗೆಯ ಈ ಗುಣಗಳನ್ನು ಪಾಲಿಸುವುದರಿಂದ ಬೇಗನೆ ಶ್ರೀಮಂತರಾಗಬಹುದಂತೆ. ಅದಕ್ಕಾಗಿ ಸರಿಯಾದ ಸಮಯದಲ್ಲಿ ನಿಯಮಗಳನ್ನು ಪಾಲಿಸೋದು ಮುಖ್ಯ. 
 

ಆಚಾರ್ಯರ ಚಾಣಕ್ಯರ (Ahcarya Chanakya)ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ, ಅವರ ಪ್ರತಿಯೊಂದು ನೀತಿಯೂ ಜನರಿಗೆ ಜೀವನ ಪಾಠ ಕಲಿಸುತ್ತದೆ. ಚಾಣಕ್ಯರು ಕಾಗೆಯಿಂದ ಕಲಿಯಬಹುದಾದ ಜೀವನ ಪಾಠಗಳ ಬಗ್ಗೆಯೂ ತಿಳಿಸಿದ್ದಾರೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿದ್ರೆ ನಾವು ಶ್ರೀಮಂತರಾಗೋದು ಗ್ಯಾರಂಟಿ, ಆದ್ರೆ ಅದಕ್ಕಾಗಿ ನಾವು ಸರಿಯಾದ ಸಮಯದಲ್ಲಿ ನಿಯಮಗಳ ಪಾಲನೆ ಮಾಡಬೇಕು.

ಚಾಣಕ್ಯನ (Chanakya Niti) ಅನುಸಾರ ಕಾಗೆ ಯಾವಾಗಲೂ ತನ್ನ ಆಹಾರವನ್ನು ಒಬ್ಬನೇ ಹೋಗಿ ಹುಡುಕಿ ತಂದು ತಿನ್ನುತ್ತದೆ. ಹುಡುಕಾಟಕ್ಕಾಗಿ ಕೆಲಸಕ್ಕಾಗಿ ಅದು ಯಾವತ್ತೂ ಸೋಮಾರಿಯಂತೆ ವರ್ತಿಸೋದಿಲ್ಲ, ತುಂಬಾನೆ ಆಕ್ಟೀವ್ ಆಗಿರುತ್ತೆ. ಅದರಂತೆ ನಾವು ಸಹ ಆಕ್ಟೀವ್ ಆಗಿರಬೇಕು. 

Tap to resize

ಆಚಾರ್ಯ ಚಾಣಕ್ಯ ಹೇಳುವಂತೆ ಜೀವನದಲ್ಲಿ ಯಶಸ್ಸು ಸಾಧಿಸೋದಕ್ಕೆ ಕಾಗೆಯ (crow)ಈ ಗುಣವನ್ನು ಪ್ರತಿಯೊಬ್ಬರು ಪಾಲಿಸಲೆಬೇಕು ಎಂದು ಹೇಳುತ್ತಾರೆ. ನೀವು ಇದನ್ನು ಪಾಲಿಸುವುದರಿಂದ ಜೀವನದಲ್ಲಿ ನೀವು ಅಂದುಕೊಂಡ ಕೆಲಸಗಳು ಸುಗಮವಾಗುತ್ತದೆ ಎನ್ನಲಾಗುತ್ತದೆ. 

ಆಚಾರ್ಯ ಚಾಣಕ್ಯರ ಅನುಸಾರ ಒಂದು ವೇಳೆ ಮನುಷ್ಯರು ಕಾಗೆಯಂತೆ ಶ್ರಮ ಜೀವಿಗಳಾದರೆ (hardworker) ಯಾವುದೇ ವಿಷಯದಲ್ಲಿ ಆಗಿರಲಿ ಅಥವಾ ಯಾರಿಂದಲೇ ಆಗಲಿ ನೀವು ಹಿಂದೆ ಉಳಿಯಲು ಸಾಧ್ಯವೇ ಇಲ್ಲ. ಯಾಕಂದ್ರೆ ಪರಿಶ್ರಮ ಪಟ್ಟರೆ ಸಿಗದಿರುವಂತದ್ದು ಏನೂ ಇಲ್ಲ. 
 

ಚಾಣಕ್ಯ ಹೇಳುವಂತೆ ಆಲಸ್ಯ ಅಥವಾ ಸೋಮರಿತನ ಮನುಷ್ಯನನ್ನು ಯಾವತ್ತೂ ಜೀವನದಲ್ಲಿ ಮುಂದೆ ಸಾಗೋದಕ್ಕೆ ಬಿಡೋದೆ ಇಲ್ಲ. ಆದರೆ ನೀವು ಶ್ರಮಜೀವಿಗಳಾದರೆ ಯಶಸ್ಸು (success) ಸಿಗೋದು ಖಚಿತ. 

ಪರಿಶ್ರಮಿ ಜೀವಿಯನ್ನು ನೋಡಿದ್ರೆ ತಾಯಿ ಲಕ್ಷ್ಮೀ ದೇವಿಯೂ (Goddess Lakshmi) ಸಂತಸಪಡುತ್ತಾಳೆ. ಆದರೆ ಸೋಮಾರಿಯನ್ನು ನೋಡಿದರೆ ಧನಲಕ್ಷ್ಮೀ ಕೋಪಗೊಳ್ಳುವುದು ಖಚಿತ. ಹಾಗಾಗಿ ಸೋಮಾರಿಗಳಾಗಬೇಡಿ ಎನ್ನುತ್ತಾರೆ ಚಾಣಕ್ಯ. ‘
 

ಇಷ್ಟೇ ಅಲ್ಲ ಕಾಗೆ ಸುಲಭವಾಗಿ ಯಾರನ್ನೂ ನಂಬೋದು ಇಲ್ಲ. ಕಾಗೆಯ ಈ ಗುಣವನ್ನು ಸಹ ಮನುಷ್ಯರು ಪಾಲಿಸಬೇಕು ಎಂದು ಚಾಣಕ್ಯ ಹೇಳುತ್ತಾರೆ. ಯಾವ ಜನರು ಸುಲಭವಾಗಿ ಇತರರನ್ನು ನಂಬುತ್ತಾರೆ, ಅವರು ಜೀವನದಲ್ಲಿ ಯಾವಾಗ ಬೇಕಾದರೂ ಮೋಸ ಹೋಗಬಹುದು. ಹಾಗಾಗಿ ಜನರು ಒಂದೇ ಸಲಕ್ಕೆ ಯಾರ ಮೇಲೂ ಭರವಸೆ ಇಡಬಾರದು. 
 

Latest Videos

click me!