ಈ ಆರು ಅಭ್ಯಾಸಗಳು ಶೀಘ್ರದಲ್ಲೇ ನಿಮ್ಮನ್ನ ಶ್ರೀಮಂತರನ್ನಾಗಿಸುತ್ತೆ…

First Published | Jan 14, 2024, 3:47 PM IST

ಆಚಾರ್ಯ ಚಾಣಕ್ಯನು ಅನೇಕ ಅಭ್ಯಾಸಗಳ ಬಗ್ಗೆ ತಿಳಿಸಿದ್ದಾರೆ, ಅವುಗಳನ್ನು ಅಭ್ಯಸಿಸೋದರಿಂದ ಒಬ್ಬ ವ್ಯಕ್ತಿಯನ್ನು ಅಲ್ಪಾವಧಿಯಲ್ಲಿ ಶ್ರೀಮಂತನನ್ನಾಗಿ ಮಾಡುತ್ತದೆ. ಈ ಅಭ್ಯಾಸಗಳನ್ನು ಹೊಂದಿರುವ ಜನರು ಎಂದಿಗೂ ಆರ್ಥಿಕವಾಗಿ ತೊಂದರೆಗೊಳಗಾಗುವುದಿಲ್ಲ.
 

ಜೀವನದಲ್ಲಿ ಅದೆಷ್ಟೋ ಒಳ್ಳೆಯ ಕೆಲಸಗಳಿವೆ. ಅವುಗಳನ್ನು ಮಾಡೋದರಿಂದ ಜೀವನದಲ್ಲಿ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ. ಅಂತಹ ಕೆಲವೊಂದು ಕೆಲಸಗಳ ಬಗ್ಗೆ ಆಚಾರ್ಯ ಚಾಣಕ್ಯ (Acharya Chanakya) ತಿಳಿಸಿದ್ದಾರೆ. ಈ ಕೆಲಸಗಳನ್ನು ಮಾಡಿದ್ರೆ , ಅಥವಾ ಅಭ್ಯಾಸಗಳನ್ನು ಪಾಲಿಸಿದ್ರೆ ಕಡಿಮೆ ಸಮಯದಲ್ಲೇ ಶ್ರೀಮಂತನಾಗಲು ಸಾಧ್ಯವಂತೆ.
 

ಆಚಾರ್ಯ ಚಾಣಕ್ಯನ ಪ್ರಕಾರ ಪ್ರತಿಯೊಬ್ಬರೂ ಬೆಳಗ್ಗೆ ಬೇಗ ಎದ್ದೇಳುವ (wake up early) ಅಭ್ಯಾಸ ಮಾಡಬೇಕು. ಯಾವ ವ್ಯಕ್ತಿ ಬೆಳಗ್ಗಿನ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುತ್ತಾನೆ, ಅವನಿಗೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುವುದು. 
 

Tap to resize

ವ್ಯಕ್ತಿಯೂ ಪರಿಶ್ರಮಿಯಾಗಬೇಕು ಎಂದು ಆಚಾರ್ಯ ಚಾಣಕ್ಯ ಹೇಳ್ತಾರೆ. ನೀವು ಶ್ರಮಪಟ್ಟು ಕೆಲಸ ಮಾಡಿದಾಗ ಮಾತ್ರ ಜೀವನದಲ್ಲಿ ಬೇಗನೆ ಯಶಸ್ಸು ಪ್ರಾಪ್ತಿಯಾಗಲು ಸಾಧ್ಯ. ಇದರಿಂದ ನೀವು ಶ್ರೀಮಂತನಾಗೋದು ಸಹ ಸುಲಭ. 
 

ಮನುಷ್ಯ ಯಾವತ್ತೂ ಸೋಮಾರಿಯಾಗಬಾರದು (lazyness). ಈಗ ಮಾಡುವ ಕೆಲಸವನ್ನು ಈಗಲೇ ಮುಗಿಸಿಬಿಡಬೇಕು. ಇಲ್ಲವಾದರೆ, ಸೋಮಾರಿತನ ಮಾಡಿದರೆ ಆತ ಎಂದಿಗೂ ಯಶಸ್ಸನ್ನು ಪಡೆಯೋದಕ್ಕೆ ಸಾಧ್ಯವೇ ಇಲ್ಲ. 
 

ಚಾಣಕ್ಯ ಹೇಳುವಂತೆ ಜನರಿಗೆ ಯಾವಾಗಲೂ ಹಣವನ್ನು ಉಳಿತಾಯ (savings) ಮಾಡುವಂತಹ ಮಾರ್ಗ ತಿಳಿದಿರಬೇಕು. ಹಾಗೆ ಉಳಿತಾಯ ಮಾಡಿದರೆ, ಕಷ್ಟಕಾಲದಲ್ಲಿ ಯಾವತ್ತೂ ಸಮಸ್ಯೆ ಆಗೋದೆ ಇಲ್ಲ. ಕಷ್ಟಗಳೆಲ್ಲ ಸುಲಭವಾಗಿ ಪರಿಹಾರವಾಗುತ್ತದೆ. 
 

ಯಾವುದೇ ಮನುಷ್ಯನಿಗೆ ಹಣದ ಅಥವಾ ಶ್ರೀಮಂತಿಕೆಯ ಮದ, ಅಹಂಕಾರ ಯಾವತ್ತೂ ಇರಬಾರದು. ಹಾಗೇ ಅಹಂಕಾರ ಇದ್ದರೆ ಅಂತಹ ವ್ಯಕ್ತಿಯ ಕೈಯಲ್ಲಿ ಹಣ ಹೆಚ್ಚಿನ ಸಮಯ ಉಳಿಯೋದೆ ಇಲ್ಲ. 

ಆಚಾರ್ಯ ಚಾಣಕ್ಯ ನೀಡುವ ಮುಖ್ಯ ಸಲಹೆ ಎಂದರೆ ಯಾವತ್ತೂ ನಿಮ್ಮ ಗುರಿ ಏನು ಎಂಬುದನ್ನು ಯಾರ ಬಳಿಯೂ ಹೇಳಬಾರದು. ಹಾಗೇ ಹೇಳಿದರೆ ಆ ಗುರಿ ತಲುಪುವಲ್ಲಿ ನೀವು ಸಫಲರಾಗೋದಿಲ್ಲ. ಹಾಗಾಗಿ ಗುರಿ ತಲುಪುವವರೆಗೆ ಸುಮ್ಮನಿರಿ. ನಿಮ್ಮ ಕೆಲಸವೇ ಮಾತನಾಡಲಿ. 
 

Latest Videos

click me!