ಈ ಜನರನ್ನು ಎಂದಿಗೂ ಮನೆಯಿಂದ ಖಾಲಿ ಕೈಯಲ್ಲಿ ಕಳುಹಿಸಬಾರದು!

First Published | Jan 12, 2024, 5:41 PM IST

ಮನೆಗೆ ನೆಂಟರಿಷ್ಟರು, ಸಂಬಂಧಿಗಳು ಯಾರಾದರೂ ಬರುತ್ತಲೇ ಇರುತ್ತಾರೆ. ಎಲ್ಲರಿಗೂ ನಾವು ಎಲ್ಲವನ್ನೂ ನೀಡಲು ಸಾಧ್ಯವಿಲ್ಲ. ಆದರೆ ಕೆಲವರು ಮನೆಗೆ ಬಂದರೆ ಅವರನ್ನು ಎಂದಿಗೂ ಖಾಲಿ ಕೈಯಲ್ಲಿ ಕಳುಹಿಸಲೇಬಾರದು ಎಂದು ಹೇಳಲಾಗುತ್ತದೆ. 
 

ಮನೆ ಎಂದಮೇಲೆ ಅತಿಥಿಗಳು (guest) ಬರೋದು ಹೋಗೋದು ಇದ್ದೇ ಇರುತ್ತೆ. ಆದರೆ ಕೆಲವು ವಿಶೇಷ ಅತಿಥಿಗಳು ಮನೆಗೆ ಬಂದರೆ ಅವರನ್ನು ಎಂದಿಗೂ ಖಾಲಿ ಕೈಯಲ್ಲಿ ಕಳುಹಿಸಲೇಬಾರದು. ಹಾಗೇ ಬರಿ ಕೈಯಲ್ಲಿ ಕಳುಹಿಸೋದು ತಪ್ಪು ಎಂದು ಹೇಳಲಾಗುತ್ತೆ. 
 

ಅಳಿಯ (Son in Law)
ಮನೆಗೆ ಅಳಿಯ ಬರೋದು ಶುಭ ಸಂಕೇತ. ಅಳಿಯ ಮನೆಗೆ ಬಂದ್ರೆ ಅವರಿಗೆ ಎಲ್ಲಾ ರೀತಿಯ ಉಪಚಾರ ಮಾಡಬೇಕು. ಅಷ್ಟೆ ಅಲ್ಲ ಅಳಿಯನನ್ನು ಯಾವತ್ತೂ ಮನೆಯಿಂದ ಬರಿಗೈಯಲ್ಲಿ ಕಳುಹಿಸಲೇಬಾರದು. 

Tap to resize

ತಂಗಿಯ ಮಗ 
ಗ್ರಂಥಗಳಲ್ಲಿ ತಂಗಿಯ ಮಗನಿಗೆ ವಿಶೇಷ ಮಹತ್ವ ನೀಡಲಾಗಿದೆ. ಹಲವು ಶುಭ ಕಾರ್ಯಗಳಲ್ಲಿ ತಂಗಿಯ ಮಗನಿಗೆ ವಿಶೇಷ ಸ್ಥಾನವನ್ನು ನೀಡಲಾಗುತ್ತದೆ. ತಂಗಿಯ ಮಗ ಮನೆಗೆ ಬಂದಾಗ ಆತನಿಗೆ ಏನಾದರೂ ಕೊಟ್ಟೆ ಕಳುಹಿಸಬೇಕು. 

ಮಗಳು ಅಥವಾ ಸಹೋದರಿ ಮನೆಗೆ ಬಂದಾಗ
ವಿವಾಹದ ಬಳಿಕ ಮಗಳು ಅಥವಾ ಸಹೋದರಿ ಮನೆಗೆ ಬಂದಾಗ ಅವರನ್ನು ಚೆನ್ನಾಗಿ ನೋಡಿಕೊಳ್ಳೋದು ತುಂಬಾ ಮುಖ್ಯ. ಅವರ ಭಾಗ್ಯದಿಂದಾಗಿ ನಿಮ್ಮ ಅದೃಷ್ಟ ಬೆಳಗುವ ಸಾಧ್ಯತೆ ಇದೆ. ಹಾಗಾಗಿ ಮಗಳು ಮತ್ತು ಸಹೋದರಿಯನ್ನು ಬರಿಗೈಯಲ್ಲಿ ಕಳುಹಿಸಲೇಬೇಡಿ

Hindu beliefs

ಗುರುವಿಗೆ ಸಂಪೂರ್ಣ ಗೌರವ ನೀಡಿ
ಒಂದು ವೇಳೆ ನಿಮ್ಮ ಯಾವುದೇ ಧಾರ್ಮಿಕ ಅಥವಾ ಆಧ್ಯಾತ್ಮಿಕ ಗುರು (spiritual Guru) ನಿಮ್ಮ ಮನೆಗೆ ಬಂದರೆ ಎಲ್ಲಾ ವಿಧಿ ವಿಧಾನಗಳಿಂದ ಅವರಿಗೆ ಗೌರವ ನೀಡಿ. ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಿರಿ. ವಸ್ತ್ರ , ದಕ್ಷಿಣೆ ನೀಡಿ ಅವರನ್ನು ಕಳುಹಿಸಿ ಕೊಡಿ. 

ಹಿಜಡಾಗಳು ಮನೆಗೆ ಬಂದಾಗ ಏನಾದರೂ ಕೊಟ್ಟು ಬಿಡಿ
ಯಾವುದೇ ಸಂದರ್ಭದಲ್ಲಿ ಹಿಜಡಾಗಳು ಮನೆಗೆ ಬಂದರೆ ಅವರನ್ನು ಯಾವತ್ತೂ ಬರಿಗೈಯಲ್ಲಿ ಕಳುಹಿಸಬೇಡಿ. ಯಾಕಂದ್ರೆ ಅವರು ಮನೆಗೆ ಬಂದು ಆಶೀರ್ವಾದ ನೀಡೋದೆ ನಿಮ್ಮ ಶುಭವನ್ನು ತರಲಿದೆ. 

Latest Videos

click me!