ಚಾಣಕ್ಯನ ಪ್ರಕಾರ ಎಷ್ಟೇ ಅಂದ ಇರ್ಲಿ, ಚಂದ ಇರ್ಲಿ ಈ ಹುಡುಗಿಯನ್ನು ಮದುವೆಯಾಗಬಾರದು!
ಚಾಣಕ್ಯ ಮದುವೆಯ ಬಗ್ಗೆಯೂ ಮಾತನಾಡಿದ್ದಾರೆ. ದಾಂಪತ್ಯದಲ್ಲಿ ಗಂಡ ಹೆಂಡತಿ ಹೇಗಿರಬೇಕು? ಯಾವ ರಹಸ್ಯಗಳನ್ನು ಕಾಪಾಡಿಕೊಳ್ಳಬೇಕು? ಇತ್ಯಾದಿ. ಬನ್ನಿ ಎಂಥ ಹುಡುಗಿಯನ್ನು ಮದುವೆಯಾಗಲೇಬಾರದು ಎಂದು ಚಾಣಕ್ಯ ಹೇಳಿದ್ದಾರೆ.
ಚಾಣಕ್ಯ ಮದುವೆಯ ಬಗ್ಗೆಯೂ ಮಾತನಾಡಿದ್ದಾರೆ. ದಾಂಪತ್ಯದಲ್ಲಿ ಗಂಡ ಹೆಂಡತಿ ಹೇಗಿರಬೇಕು? ಯಾವ ರಹಸ್ಯಗಳನ್ನು ಕಾಪಾಡಿಕೊಳ್ಳಬೇಕು? ಇತ್ಯಾದಿ. ಬನ್ನಿ ಎಂಥ ಹುಡುಗಿಯನ್ನು ಮದುವೆಯಾಗಲೇಬಾರದು ಎಂದು ಚಾಣಕ್ಯ ಹೇಳಿದ್ದಾರೆ.
ಮದುವೆಯನ್ನು ಜೀವನದ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಸಂತೋಷ ಮತ್ತು ಒಡನಾಟಕ್ಕಾಗಿ ಮದುವೆಯಾಗುತ್ತಾರೆ. ಇದು ಪ್ರತಿಯೊಬ್ಬ ವ್ಯಕ್ತಿಗೂ- ಪುರುಷ ಅಥವಾ ಮಹಿಳೆಗೆ- ಬೇಕಾದುದೇ ಆಗಿದೆ. ಇಂದು ಹೆಚ್ಚಿನ ಪುರುಷರು ಸುಂದರ ಮಹಿಳೆಯರನ್ನು ಮದುವೆಯಾಗಲು ಯೋಚಿಸುತ್ತಾರೆ. ಬಾಹ್ಯವಾಗಿ ಸುಂದರವಾಗಿ ಕಾಣುವವರು ಅವರನ್ನು ಸಂತೋಷವಾಗಿರಿಸುತ್ತಾರೆ ಎಂದು ಅವರು ಭಾವಿಸುತ್ತಾರೆ. ಆದರೆ ಇದು ತಪ್ಪಾಗಿರಬಹುದು. ಹೊರನೋಟಕ್ಕೆ ಸುಂದರವಾಗಿ ಕಾಣುವ ಮಹಿಳೆಯರು ಒಳಗೂ ಸುಂದರವಾಗಿರುತ್ತಾರೆ ಎಂದೇನಿಲ್ಲ. ಪುರುಷರು ಈ ರೀತಿಯ ಮಹಿಳೆಯರನ್ನು ಮದುವೆಯಾಗಬಾರದು ಎಂದು ಸಲಹೆ ನೀಡುತ್ತಾರೆ. ಇದರ ವೈಸ್ ವರ್ಸಾ ಕೂಡ ನಿಜ. ಚಂದವಾಗಿರುವ, ಆದರೆ ಸ್ಮಾರ್ಟ್‌ನೆಸ್ ಇಲ್ಲದ ಪುರುಷರನ್ನು ಮದುವೆಯಾಗುವುದು ಅಪಾಯ.
ಕುಟುಂಬದ ಹಿನ್ನೆಲೆ ಚೆನ್ನಾಗಿರಬೇಕು. ಒಳ್ಳೆಯ ಸಂಸಾರದಿಂದ ಬರದ ಹೆಣ್ಣನ್ನು ಸುಂದರವಾಗಿದ್ದರೂ ಮದುವೆಯಾಗಬಾರದು ಎಂದು ಚಾಣಕ್ಯ ನೀತಿ ಹೇಳುತ್ತದೆ. ಅಂತಹ ಮಹಿಳೆಯ ಕುಟುಂಬದವರಿಂದ ಮುಂದೆ ಸಂಕಷ್ಟ ಎದುರಿಸಬೇಕಾಗಬಹುದು. ರೌಡಿ ಹಿನ್ನೆಲೆಯ ಮಾವ ಅಥವಾ ಭಾವ ನಿಮ್ಮ ದಾಂಪತ್ಯವನ್ನು ನಿಯಂತ್ರಿಸುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ!
ಮಹಿಳೆ ಅಸಭ್ಯ ಮತ್ತು ಅಸಹ್ಯಕರವಾಗಿದ್ದರೆ, ಅವಳು ಸುಂದರವಾಗಿದ್ದರೂ ಸಹ ಪುರುಷ ಅವಳನ್ನು ಮದುವೆಯಾಗಬಾರದು. ಚಾಣಕ್ಯ ನೀತಿಯ ಪ್ರಕಾರ ಅಂತಹ ಮಹಿಳೆ ತನ್ನ ಪತಿಯನ್ನು ತನಗೆ ಬೇಕಾದುದನ್ನು ಮಾಡುವಂತೆ ಬೆದರಿಸಬಹುದು. ಸಾರ್ವಜನಿಕವಾಗಿ ಪತಿಯ ಮಾನ ತೆಗೆಯಬಹುದು. ಅನೀತಿಯತ ಕೆಲಸ ಮಾಡುವಂತೆ ಪ್ರೇರೇಪಿಸಬಹುದು.
ಸುಂದರ ಮಹಿಳೆ ಕೆಟ್ಟ ಸ್ವಭಾವವನ್ನು ಹೊಂದಿದ್ದರೆ, ಚಾಣಕ್ಯ ನೀತಿಯ ಪ್ರಕಾರ ಪುರುಷನು ಅಂತಹ ಮಹಿಳೆಯನ್ನು ಮದುವೆಯಾಗಬಾರದು. ಇಲ್ಲಿ ಕೆಟ್ಟ ಸ್ವಭಾವ ಎಂದರೆ ದಾಂಪತ್ಯವನ್ನು ಮುರಿದು ಹೋಗಬಹುದಾದ ಚೆಲ್ಲುತನ. ಈಕೆ ಯಾವಾಗ ಬೇಕಿದ್ದರೂ ಗಂಡನನ್ನು ಉಲ್ಲಂಘಿಸಿ ಅನ್ಯರತ್ತ ಕೈಚಾಚಬಹುದಾಗಿದೆ. ಇಂಥ ಹೆಣ್ಣಿನ ಸಹವಾಸ ಬೇಡವೆನ್ನುತ್ತಾನೆ ಕೌಟಿಲ್ಯ.
ಸುಳ್ಳು ಹೇಳುವ ಮಹಿಳೆ ತನ್ನ ಗಂಡನ ವಿರುದ್ಧ ಅದನ್ನು ಬಳಸುತ್ತಾಳೆ. ಆದ್ದರಿಂದ, ಅವಳು ಅಂತಿಮವಾಗಿ ಕುಟುಂಬವನ್ನು ನಾಶ ಮಾಡುತ್ತಾಳೆ. ಆದ್ದರಿಂದ, ಪುರುಷನು ಅಂತಹ ಮಹಿಳೆಯನ್ನು ಮದುವೆಯಾಗಬಾರದು. ನಿತ್ಯ ಸುಳ್ಳು ಹೇಳುವ ವ್ಯಕ್ತಿ ಪಕ್ಕದಲ್ಲಿ ಇದ್ದರೆ ನಿಮ್ಮ ಮನಶ್ಶಾಂತಿ ಏನಾದೀತು ಎಂದು ಊಹಿಸಿಕೊಳ್ಳಿ.
ತನ್ನ ಕುಟುಂಬ ಸದಸ್ಯರಿಗೆ ವಿಶ್ವಾಸದ್ರೋಹ ಮಾಡುವ ಮಹಿಳೆಯನ್ನು ನೆಚ್ಚಿಕೊಳ್ಳಕೂಡದು. ಈಕೆ ತನ್ನ ಪತಿಗೂ ವಿಶ್ವಾಸದ್ರೋಹಿಯಾಗಬಹುದು. ಅವಳು ನಂತರ ಜೀವನದಲ್ಲಿ ಅವನಿಗೆ ಮೋಸ ಮಾಡಬಹುದು. ಆದ್ದರಿಂದ, ಚಾಣಕ್ಯ ನೀತಿಯ ಪ್ರಕಾರ ಪುರುಷನು ಅಂತಹ ಮಹಿಳೆಯನ್ನು ಮದುವೆಯಾಗಬಾರದು.
ಚಾಣಕ್ಯನ ಪ್ರಕಾರ, ಮನೆಗೆಲಸದ ಬಗ್ಗೆ ಹೆಚ್ಚು ತಿಳಿದಿಲ್ಲದ ಮಹಿಳೆಯನ್ನು ಮದುವೆಯಾಗಬಾರದು. ಇಂದು ಈ ಸೂತ್ರ ಔಟ್‌ಡೇಟೆಡ್ ಅನಿಸುತ್ತದೆ. ಅಂದು ಮಹಿಳೆಯೇ ಎಲ್ಲಾ ಮನೆಕೆಲಸಗಳನ್ನು ಮಾಡುತ್ತಿದ್ದುದರಿಂದ ಚಾಣಕ್ಯ ಹಾಗೆ ಬರೆದಿರಬಹುದು.
ಚಾಣಕ್ಯ ಹೇಳುವಂತೆ ಪುರುಷನು ಧಾರ್ಮಿಕ ಅಥವಾ ಧರ್ಮನಿಷ್ಠಳಲ್ಲದ ಮಹಿಳೆಯನ್ನು ಮದುವೆಯಾಗಬಾರದು. ಚಾಣಕ್ಯನ ಪ್ರಕಾರ, ಮಹಿಳೆ ಕೆಲವು ವ್ರತಗಳನ್ನು ಮಾಡಬೇಕು ಮತ್ತು ನಿಯಮಿತವಾಗಿ ಭಗವಂತನನ್ನು ಪ್ರಾರ್ಥಿಸಬೇಕು. ಇಂದು ಧರ್ಮನಿಷ್ಠ ಆಸ್ತಿಕ ಪುರುಷರು ಮಾತ್ರ ಇದನ್ನು ಪರಿಗಣಿಸಬಹುದೋ ಏನೋ.