ಚಾಣಕ್ಯ ನೀತಿ: ಗೂಢಂ ಚ ಮೈಥುನಂ, ಏಕಾಂತದಲ್ಲಿಯೇ ಮಾಡಿ! ಕಾಗೆಯ ಈ ಐದು ಗುಣಗಳೇ ಮಾದರಿ

Published : Mar 07, 2026, 10:08 AM IST

ಆಚಾರ್ಯ ಚಾಣಕ್ಯರ ನೀತಿಯ ಪ್ರಕಾರ, ಮನುಷ್ಯರು ಪ್ರಾಣಿಗಳಿಂದಲೂ ಪಾಠ ಕಲಿಯಬೇಕು. ಈ ಲೇಖನದಲ್ಲಿ, ಕಾಗೆಯಿಂದ ಕಲಿಯಬಹುದಾದ ಐದು ಪ್ರಮುಖ ಗುಣಗಳು ಮನುಷ್ಯನ ಜೀವನಕ್ಕೆ ಹೇಗೆ ಮಾದರಿಯಾಗಬಲ್ಲದು ಎಂಬುದನ್ನು ಚಾಣಕ್ಯರ ಶ್ಲೋಕದ ಮೂಲಕ ತಿಳಿಸಲಾಗಿದೆ.

PREV
15
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರು, ಜೀವನ ಹೇಗೆ ನಡೆಸಬೇಕು ಎಂಬುದನ್ನು ತಮ್ಮ ನೀತಿಗಳಲ್ಲಿ ವಿವರಿಸಿದ್ದಾರೆ. ಇಂದಿಗೂ ಚಾಣಕ್ಯ ನೀತಿಗಳು ದೈನಂದಿನ ಜೀವನಕ್ಕೆ ಸೂಕ್ತವಾಗಿವೆ ಎಂದು ಹೇಳಬಹುದು. ಕೆಲವೊಂದು ಕೆಲಸಗಳನ್ನು ಏಕಾಂತದಲ್ಲಿಯೇ ಮಾಡಬೇಕೆಂದು ಆಚಾರ್ಯರು ವಿವರಿಸಿದ್ದಾರೆ.

25
ಒಂದೊಂದು ಪಾಠ

ಭೂಲೋಕದಲ್ಲಿ ಮನುಷ್ಯ ಅತ್ಯಂತ ಬುದ್ಧಿವಂತ ಜೀವಿ. ಆದ್ರೂ ಮನುಷ್ಯ ಕೆಲವೊಂದು ಪಾಠಗಳನ್ನು ತನ್ನ ಸುತ್ತಲಿನ ಪ್ರಾಣಿ ಮತ್ತು ಪಕ್ಷಿಗಳಿಂದ ಕಲಿಯಬೇಕು. ಪ್ರತಿಯೊಂದು ಜೀವಿಯೂ ಒಂದೊಂದು ಪಾಠವನ್ನು ಮನುಷ್ಯನಿಗೆ ಹೇಳಿಕೊಡುತ್ತವೆ. ಆದರಲ್ಲಿ ಕಾಗೆ ಬಗ್ಗೆ ಆಚಾರ್ಯ ಚಾಣಕ್ಯರು ಹಲವು ವಿಷಯಗಳನ್ನು ಹೇಳಿದ್ದಾರೆ.

35
ಆಚಾರ್ಯ ಚಾಣಕ್ಯ ಶ್ಲೋಕ ಈ ರೀತಿಯಾಗಿದೆ

ಗೂಢಂ ಚ ಮೈಥುನಂ ಚರಿತ್ವಂ ಕಾಲೇ ಕಾಲೇ ಚ ಸಂಗ್ರಹಂ|

ಅಪ್ರಮತ್ತಮವಿಶ್ವಾಸಂ ಪಂಚ ಶಿಕ್ಷೇಚ್ಚ ವಾಯಸತ್!

ಇದನ್ನೂ ಓದಿ: ಗಂಡ-ಹೆಂಡತಿ ಜಗಳಕ್ಕೆ ಬ್ರೇಕ್ ಹಾಕೋ ಚಾಣಕ್ಯ ನೀತಿ: ಈ ಒಂದು ಮಾತು ಸುಚಿತ್ರಾಳ ಜೀವನವೇ ಬದಲಿಸುತಿತ್ತು!

45
ಏಕಾಂತ, ಆಹಾರ, ಅವಲಂಬನೆ, ನಂಬಿಕೆ ಮತ್ತು ಹಂಚಿಕೆ

ಗೂಢಂ ಚ ಮೈಥುನಂ ಅಂದ್ರೆ ಸಂಭೋಗವನ್ನು ಏಕಾಂತದಲ್ಲಿ ಮಾಡಬೇಕು. ಹಾಗೆಯೇ ಕಾಲ ಕಾಲಕ್ಕೆ ಬೇಕಾದ ಆಹಾರವನ್ನು ಸಂಗ್ರಹಿಸಿಕೊಳ್ಳಬೇಕು. ಹಾಗೆಯೇ ಎಲ್ಲದಕ್ಕೂ ಮತ್ತೊಬ್ಬರ ಮೇಲೆ ಅವಲಂಬನೆ ಮತ್ತು ಅತಿಯಾಗಿ ನಂಬುವ ಕೆಲಸವನ್ನು ಮಾಡಬಾರದು. ಶಿಕ್ಷೇಚ್ಚ ವಾಯಸತ್ ಅಂದ್ರೆ ಸಿಕ್ಕ ಆಹಾರವನ್ನು ಒಬ್ಬರೇ ಮುಚ್ಚಿಟ್ಟು ತಿನ್ನದೇ ಎಲ್ಲರೊಂದಿಗೆ ಹಂಚಿಕೊಂಡು ತಿನ್ನಬೇಕು.

55
ಕಾಗೆಯ ಐದು ಗುಣಗಳು

ಈ ಮೇಲಿನ ಐದು ಗುಣಗಳು ಕಾಗೆಯಲ್ಲಿವೆ. ಒಂದಗಳು ಅನ್ನವನ್ನು ಕಂಡ್ರೆ ತನ್ನೆಲ್ಲಾ ಬಳಗವನ್ನ ಕಾ ಕಾ ಎಂದು ಕರೆಯುತ್ತದೆ. ಇದರರ್ಥ ಕಾಗೆ ಹಂಚಿಕೊಂಡು ತಿನ್ನುವ ಗುಣವನ್ನು ಹೇಳುತ್ತದೆ. ಪಕ್ಷಿಗಳು ಭವಿಷ್ಯಕ್ಕಾಗಿ ಆಹಾರವನ್ನು ಸಂಗ್ರಹಿಸಿಕೊಳ್ಳುತ್ತವೆ. ಕಾಗೆಗಳು ಭವಿಷ್ಯದ ಕಲ್ಪನೆಯನ್ನು ಹೊಂದಿರುತ್ತವೆ ಎಂದು ಆಚಾರ್ಯ ಚಾಣಕ್ಯರು ವಿವರಿಸುತ್ತಾರೆ. ಕಾಗೆಯ ಜೀವನ ಮನುಷ್ಯನಿಗೆ ಮಾದರಿಯಾಗಿದೆ ಎಂಬುದನ್ನು ಹಲವು ಪುರಾಣಗಳಲ್ಲಿಯೂ ಉಲ್ಲೇಖವಿದೆ.

ಇದನ್ನೂ ಓದಿ: Chanakya Niti: ಮನೆ ನಾಶವಾಗುವ ಮೊದಲು ಕಾಣಿಸಿಕೊಳ್ಳುವ 5 ಚಿಹ್ನೆಗಳಿವು, ಆದ್ರೆ ಜನ ನಿರ್ಲಕ್ಷಿಸುತ್ತಾರೆ

Read more Photos on
click me!

Recommended Stories