ಬ್ರಹ್ಮ ಕಮಲ (Saussurea obvallata) ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಬೆಳೆಯುವ ಅಪರೂಪದ ಹಿಮಪುಷ್ಪವಾಗಿದೆ. ಉತ್ತರಾಖಂಡದ ರಾಜ್ಯ ಹೂವಾಗಿಯೂ ಇದು ಖ್ಯಾತಿ ಪಡೆದಿದೆ. ಇದನ್ನು ಬ್ರಹ್ಮನ ಹೂ ಎಂದು ಕರೆಯುವುದಕ್ಕೆ ಕಾರಣವೇನು ಅಂದರೆ, ಪೌರಾಣಿಕವಾಗಿ ಇದನ್ನು ಬ್ರಹ್ಮ ದೇವರ ಆರ್ಶೀರ್ವಾದದ ಚಿಹ್ನೆಯೆಂದು ನಂಬುತ್ತಾರೆ.
24
ಬ್ರಹ್ಮ ಕಮಲದ ಮತ್ತೊಂದು ವಿಶೇಷತೆ ಎಂದರೆ, ಇದು ವರ್ಷದಲ್ಲಿ ಕೇವಲ ಒಂದು ಸಲವಾಗುತ್ತದೆ ಮತ್ತು ಅದು ರಾತ್ರಿ ವೇಳೆ ಮಾತ್ರವಾಗುತ್ತದೆ. ಕೇವಲ ಕೆಲವೇ ಗಂಟೆಗಳ ಕಾಲ ಇದರ ರಮಣೀಯತೆ ಕಾಣಿಸುತ್ತದೆ ಮತ್ತು ಬೆಳಗಿನ ಹೊತ್ತಿಗೆ ಮತ್ತೆ ಮುಚ್ಚಿಕೊಳ್ಳುತ್ತದೆ.
34
ಬ್ರಹ್ಮನ ಆಶೀರ್ವಾದ: ಪೌರಾಣಿಕ ಕಥೆಗಳ ಪ್ರಕಾರ, ಬ್ರಹ್ಮ ದೇವರು ಈ ಹೂವನ್ನು ರಚಿಸಿದ ಎಂದು ನಂಬಿಕೆಯಿದೆ.
ದೇವಾಲಯಗಳಲ್ಲಿ ಬಳಕೆ: ಬದ್ರಿನಾಥ ಮತ್ತು ಕೇದಾರ್ನಾಥದ ದೇವಾಲಯಗಳಲ್ಲಿ ಬ್ರಹ್ಮ ಕಮಲವನ್ನು ದೇವರಿಗೆ ಅರ್ಪಿಸಲಾಗುತ್ತದೆ.
44
ಬ್ರಹ್ಮ ಕಮಲದ ಬೇರುಗಳು ಮತ್ತು ಎಲೆಗಳು ಆಯುರ್ವೇದದಲ್ಲಿ ಔಷಧೀಯ ಗುಣಗಳಿಗಾಗಿ ಬಳಸಲ್ಪಡುತ್ತವೆ. ಇದು ದೇಹದ ಉಷ್ಣತೆಯನ್ನು ಇಳಿಸುತ್ತದೆ ಮತ್ತು ಮನಸ್ಸಿಗೆ ಶಾಂತಿ ನೀಡುತ್ತದೆ ಎಂಬ ನಂಬಿಕೆ ಇದೆ.