Blue Moon:ಇಂದು ರಾತ್ರಿ 'ಒನ್ಸ್ ಇನ್ ಎ ಬ್ಲೂ ಮೂನ್' ರಾತ್ರಿ! ನಿಮ್ಮ ಈಡೇರದ ಆಸೆಗಳನ್ನು ಬ್ರಹ್ಮಾಂಡವು ಹೇಗೆ ಪೂರೈಸುತ್ತದೆ ಎಂಬುದನ್ನು ತಿಳಿಯಿರಿ. ಅಷ್ಟೇ ಅಲ್ಲ ನೀವು ನಿದ್ರಿಸುವ ಈ ಮೂರು ಮಾಂತ್ರಿಕ ಪದಗಳನ್ನು ಹೇಳಿ/ ಅವು ಬಡವರನ್ನು ಸಹ ಶ್ರೀಮಂತರನ್ನಾಗಿ ಮಾಡುವ ಶಕ್ತಿಯನ್ನು ಹೊಂದಿವೆ.
ಬಹಳ ಅಪರೂಪದ ಘಟನೆಯನ್ನು ವಿವರಿಸಲು ನಾವು "once in a blue moon" ಎಂಬ ನಾಲ್ನುಡಿಯನ್ನು ಹೆಚ್ಚಾಗಿ ಬಳಸುತ್ತೇವೆ. ಇಂದು ರಾತ್ರಿ, ಈ ನಾಲ್ನುಡಿ ನಿಜವಾಗಲಿದೆ, ಯಾಕಂದ್ರೆ ಕೆಲವು ವರ್ಷಗಳಿಗೊಮ್ಮೆ ಮಾತ್ರ ಆಕಾಶದಲ್ಲಿ ಕಾಣುವ ಅದ್ಭುತ "blue moon" ಇಂದು ರಾತ್ರಿ ಪ್ರಕಾಶಮಾನವಾಗಿ ಹೊಳೆಯುವುದನ್ನು ನೀವು ಕಾಣಬಹುದು.
26
ವಿಜ್ಞಾನ ಮತ್ತು ಜ್ಯೋತಿಷ್ಯ ಶಾಸ್ತ್ರ
ಕ್ಯಾಲೆಂಡರ್‌ನ ನಿರ್ದಿಷ್ಟ ಗಣಿತ ಶಾಸ್ತ್ರದ ಪ್ರಕಾರ, ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆಗಳು ಸಂಭವಿಸಿದಾಗ, ಎರಡನೇ ಹುಣ್ಣಿಮೆಯನ್ನು 'ಬ್ಲೂ ಮೂನ್' ಎಂದು ಕರೆಯಲಾಗುತ್ತದೆ. ಇಂತಹ ಅಪರೂಪದ ಘಟನೆಯು ಪ್ರತಿ 2 ರಿಂದ 3 ವರ್ಷಗಳಿಗೊಮ್ಮೆ ಮಾತ್ರ ಸಂಭವಿಸುತ್ತದೆ.
36
ಬಯಕೆಗಳ ಈಡೇರಿಕೆಯ 'ಮಹಾ ರಾತ್ರಿ'
ಆಧ್ಯಾತ್ಮಿಕತೆ ಮತ್ತು ಲಾ ಆಫ್ ಅಟ್ರಾಕ್ಷನ್ ಈ ರಾತ್ರಿಯನ್ನು 'ಕಾಸ್ಮಿಕ್ ರೀಬೂಟ್' ಎಂದು ಹೇಳುತ್ತದೆ. ಚಂದ್ರನು ಮನಸ್ಸಿನ ಅಧಿಪತಿಯಾಗಿರುವುದರಿಂದ, ಈ ರಾತ್ರಿ ನಮ್ಮ ಆಸೆಗಳನ್ನು ವಿಶ್ವಕ್ಕೆ ತಿಳಿಸುವ ಶಕ್ತಿ ಹತ್ತು ಪಟ್ಟು ವರ್ಧಿಸುತ್ತದೆ.
ಇಂದು ರಾತ್ರಿ, ಮಲಗುವ ಮುನ್ನ, ಉಳಿದೆಲ್ಲ ಯೋಚನೆಗಳನ್ನು ಬಿಟ್ಟು ಶಾಂತ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ನಿಮ್ಮ ಹಾಸಿಗೆಯ ಮೇಲೆ ಮಲಗಿ, ಕಣ್ಣು ಮುಚ್ಚಿ, ಮತ್ತು ಆ ಈಡೇರದ ಆಸೆಯನ್ನು ಮನಸ್ಸಿಗೆ ತನ್ನಿ . ಅದು ಈಡೇರಿದಂತೆ ನೀವು ಕನಸು ಕಾಣಬೇಕು. ಅದು ನಿಜವಾದಾಗ ಏನೆಲ್ಲಾ ಆಗುತ್ತದೆಯೋ, ಅದೆಲ್ಲವೂ ನಿಮ್ಮ ಮನಸ್ಸಿನಲ್ಲಿ ಮೂಡಬೇಕು.
56
ಈ 3 ಮಾಂತ್ರಿಕ ಪದಗಳನ್ನು ಹೇಳಿ
ನಿಮ್ಮ ಮನಸ್ಸಿನಲ್ಲಿ ಆ ನಿರ್ದಿಷ್ಟ ಆಸೆಯನ್ನು ಇಟ್ಟುಕೊಂಡು, ಸಂಪೂರ್ಣ ನಂಬಿಕೆಯಿಂದ, ಮ್ಯಾನಿಫೆಸ್ಟ್, ಅಲೈನ್, ರಿಸೀವ್ ಈ 3 ಪದಗಳನ್ನು 11 ಬಾರಿ ಪುನರಾವರ್ತಿಸಿ. ಇವುಗಳನ್ನು ಹೇಳುವಾಗ, ನಿಮ್ಮ ಈಡೇರದ ಆಸೆ ಈ ಕ್ಷಣವೇ ಈಡೇರುತ್ತದೆ ಹಾಗೂ ಬ್ರಹ್ಮಾಂಡದ ಮಾಂತ್ರಿಕ ಶಕ್ತಿಗಳು ನಿಮ್ಮ ಜೀವನವನ್ನು ಸಂತೋಷದಿಂದ ತುಂಬುತ್ತಿವೆ ಎಂದು ಕಲ್ಪಿಸಿಕೊಳ್ಳಿ.
66
ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ
ಇವತ್ತಿನ ರಾತ್ರಿ ನೀವು ಈ ಎಲ್ಲಾ ಮ್ಯಾನಿಫೆಸ್ಟೇಷನ್ ಮಾಡಿಕೊಳ್ಳಲು ಅತ್ಯದ್ಭುತವಾದ ದಿನ. ಇವತ್ತು ನೀವು ಈ ಅವಕಾಶವನ್ನು ಮಿಸ್ ಮಾಡಿಕೊಂಡರೆ, ಮತ್ತೆ ಮೂರು ವರ್ಷಗಳ ಕಾಲ ನೀವು ಈ ಬ್ಲೂ ಮೂನ್ ಗೆ ಕಾಯಬೇಕು. ಹಾಗಾಗಿ ಈ ಪವರ್ ಫುಲ್ ಮ್ಯಾನಿಫೇಸ್ಟೇಶನ್ ದಿನವನ್ನು ಮಿಸ್ ಮಾಡ್ಬೇಡಿ.