'ಭೂತ ಕೋಲ' ಮೇಲೆ ವ್ಯಾಪಾರಕ್ಕಿಳಿದ ಟ್ರಾವೆಲ್‌ ಏಜೆನ್ಸಿ, 'ನಿಮ್ಮ ತೀರ್ಮಾನ ನಾವ್‌ ಮಾಡ್ತೀವಿ' ಎಂದ ಕರಾವಳಿ ಜನರು!

First Published | Dec 1, 2023, 4:33 PM IST

ಕಾಂತಾರ ಚಿತ್ರದ ಮೂಲಕ  ಹೆಮ್ಮೆಯ ಆಚರಣೆ ಭೂತ ಕೋಲ ಇದೀಗ ಜಗತ್ ಪ್ರಸಿದ್ಧಿಯಾಗಿದೆ. ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಕಾಂತಾರ ಚಿತ್ರ ವೀಕ್ಷಿಸಿದ ವಿದೇಶಿಗರು ಕೂಡ ಭೂತ ಕೋಲ ಆಚರಣೆಯ ಕುರಿತ ಮಾತುಗಳನ್ನಾಡುತ್ತಿದ್ದಾರೆ. ಆದರೆ ಇಲ್ಲಿ ಟ್ರಾವೆಲ್​ ಏಜೆನ್ಸಿ ಒಂದು ಕಾಂತಾರ ತೋರಿಸಿ ಹೊಸ ವ್ಯಾಪಾರಕ್ಕಿಳಿದಿದೆ. 

ಕಾಂತಾರ ಸಿನಿಮಾ ಬಳಿಕ ಭೂತಕೋಲ ಕ್ರೇಜ್ ಹೆಚ್ಚಾಗಿದೆ. ಕಾಂತಾರ -1  ಟೀಸರ್ ರಿಲೀಸ್​ ಬೆನ್ನಲ್ಲೆ ಕರಾವಳಿಯಲ್ಲಿ ಹೊಸ ವಿವಾದ ಉಂಟಾಗಿದೆ.ಇಷ್ಟು ದಿನ ಕರಾವಳಿಗರನ್ನಷ್ಟೇ ಸೆಳೆಯುತ್ತಿದ್ದ ಭೂತಕೋಲ ಕಾಂತಾರ ಬಳಿಕ ಭೂತಕೋಲ, ದೈವದ ಬಗ್ಗೆ ಹೆಚ್ಚಿದ ಜನರ ಆಸಕ್ತಿಯನ್ನೇ ಬಂಡವಾಳ ಮಾಡಿಕೊಂಡಿದೆ ಟ್ರಾವೆಲ್ ಏಜೆನ್ಸಿಗಳು.

ಟ್ರಾವೆಲ್​ ಏಜೆನ್ಸಿಗಳಿಂದ ಹೊಸ ಟೂರ್ ಪ್ಯಾಕೇಜ್​ ಆಫರ್ ನೀಡಲಾಗಿದೆ.ದೈವಕೋಲದ ವೀಕ್ಷಣೆಗೆ ಟೂರ್​ ಪ್ಯಾಕೇಜ್​ ಆಫರ್‘ಭೂತ ಕೋಲ’ A night with ancient spirits ಹೆಸರಿನಲ್ಲಿ ಆಫರ್ ನೀಡುವ ಮೂಲಕ ತುಳುನಾಡಿನ ನಂಬಿಕೆಯ ದೈವಾರಾಧನೆ ಹೆಸರಲ್ಲಿ ಹೊಸ ದಂಧೆ ಹುಟ್ಟಿಕೊಂಡಿದೆ.
 

Latest Videos


ಈವೆಂಟ್​ ರೀತಿ ದೈವನರ್ತನ ವೀಕ್ಷಣೆಗೆ ಟಿಕೆಟ್​ ದರ ಫಿಕ್ಸ್ ಮಾಡಲಾಗಿದೆ. travelbuddy ಎಂಬ ಏಜೆನ್ಸಿಯಿಂದ ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ನ್ನು ಬಿಟ್ಟಿದೆ. ಟ್ರಾವೆಲ್​ ಏಜೆನ್ಸಿ ಪೋಸ್ಟರ್ ವಿರುದ್ಧ ಕರಾವಳಿ ಮಂದಿ ಆಕ್ರೋಶ ಹೊರಕಾಕಿದ್ದಾರೆ.
 

ಕರಾವಳಿಯ ಕಲೆ, ಸಂಸ್ಕೃತಿ ವೀಕ್ಷಣೆಗೆ ಟ್ರಾವೆಲ್​ ಪ್ಯಾಕೇಜ್​ ಪ್ರಕಟ ಮಾಡಿದೆ. ಅದರಲ್ಲಿ ದೈವಾರಾಧನೆ ಜತೆ ಪ್ರವಾಸಿತಾಣಗಳನ್ನು ತೋರಿಸುವುದಾಗಿ ಪೋಸ್ಟ್ ಹಾಕಲಾಗಿದ್ದು ,ಪ್ರತಿ ವ್ಯಕ್ತಿಗೆ 2,899ರೂ. ಟಿಕೆಟ್​ ದರ ವಿಧಿಸಿದೆ.
 

2,899ರೂ. ಕೊಟ್ಟರೆ ಕಂಬಳ, ಭೂತಕೋಲ, ಟ್ರೆಕ್ಕಿಂಗ್​ ಸೌಲಭ್ಯ  ನೀಡುವುದಾಗಿ ಪೋಸ್ಟರ್ ಮಾಡಿದ್ದಾರೆ . ಇದರ ವಿರುದ್ದ ತುಳುನಾಡಿನ ದೈವಾರಾಧಕರು  ಸಿಡಿದು ಇಂಥ ಘಟನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

click me!