ಪ್ರಧಾನಿ ಮೋದಿ ರೀತಿ 9 ದಿನ ನವರಾತ್ರಿ ಉಪವಾಸ ಕುಳಿತರೆ ಒಲಿಯುತ್ತಾ ರಾಜಯೋಗ? ಉಪವಾಸದ 9 ದಿನ ಮೋದಿ ದಿನಚರಿ ಹೇಗಿರುತ್ತೆ?ಇದೆಂತಾ ಕಠಿಣ ವೃತ? ಈ ರೀತಿ ಉಪವಾಸ ಕುಳಿತರೆ ರಾಜಯೋಗ ಒಲಿಯುತ್ತಾ?
ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ದೇಶಾದ್ಯಂತ ಅದ್ಧೂರಿಯಾಗಿ ನವರಾತ್ರಿ ಹಬ್ಬ ಆಚರಿಸಲಾಗುತ್ತಿದೆ. ಹಿಂದೂ ಸಂಪ್ರದಾಯ ಪ್ರಕಾರ ನವರಾತ್ರಿಯ 9 ದಿನ ಉಪವಾಸ, ಕಠಿಣ ವೃತಗಳನ್ನು ಕೈಗೊಂಡು ದೇವರ ಕೃಪೆಗೆ ಪಾತ್ರರಾಗುತ್ತಾರೆ. ಹಲವು ಕಠಿಣ ವೃತಗಳನ್ನು ಕೈಗೊಳ್ಳುತ್ತಾರೆ. 75 ವರ್ಷದ ಪ್ರಧಾನಿ ಮೋದಿ ಈಗಲೂ ನವರಾತ್ರಿಯ 9 ದಿನವೂ ಉವಾಸ ವೃತ ಕೈಗೊಳ್ಳುತ್ತಾರೆ.
25
ಪ್ರಧಾನಿ ಮೋದಿ ಕೈಗೊಳ್ಳುತ್ತಾರೆ ಕಠಿಣ ವೃತ
ಪ್ರಧಾನಿ ಮೋದಿ ಕೈಗೊಳ್ಳುತ್ತಾರೆ ಕಠಿಣ ವೃತ
ನವರಾತ್ರಿಯ 9 ದಿನ ಪ್ರಧಾನಿ ನರೇಂದ್ರ ಮೋದಿ ಕಠಿಣ ಉಪವಾಸ ವೃತ ಕೈಗೊಳ್ಳುತ್ತಾರೆ. ಈ ಉಪವಾಸ ವೃತದ ಸಮಯದಲ್ಲಿ ಊಟ, ಚಪಾತಿ ಸೇರಿದಂತೆ ಆಹಾರ ಪದಾರ್ಥಗಳ ಸೇವಿಸುವುದಿಲ್ಲ. ಉಗುರು ಬೆಚ್ಚಗಿನ ನೀರು ಹಾಗೂ ಯಾವುದಾದರು ಒಂದು ಬಗೆಯ ಹಣ್ಣು ಸೇವಿಸುತ್ತಾರೆ. ಇದನ್ನು ಹೊರತುಪಡಿಸಿ ಇನ್ಯಾವುದೇ ರೀತಿಯ ಆಹಾರ ಸೇವಿಸುವುದಿಲ್ಲ.
35
ನವರಾತ್ರಿ ಉಪವಾಸದ ದೈವೀಕ ಪ್ರಯೋಜನ
ನವರಾತ್ರಿ ಉಪವಾಸದ ದೈವೀಕ ಪ್ರಯೋಜನ
ದೈವೀಕವಾಗಿ ನೋಡುವುದಾದರೆ, ನವರಾತ್ರಿ ಉಪವಾಸ ಕುಳಿತರೆ ದುರ್ಗಾ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಅನ್ನೋ ನಂಬಿಕೆ ಇದೆ.ಪ್ರಮುಖವಾಗಿ ಎಲ್ಲಾ ಉತ್ತಮ ಕಾರ್ಯದಲ್ಲೂ ಯಶಸ್ಸು ಸಿಗುತ್ತದೆ ಅನ್ನೋದು ಹಿಂದೂ ಧಾರ್ಮಿಕ ನಂಬಿಕೆ. ಇದೇ ಕಾರಣದಿಂದ
ನವರಾತ್ರಿ ಸಂದರ್ಭದಲ್ಲಿ ಉಪವಾಸ ಕುಳಿತರೆ ರಾಜಯೋಗ ಒಲಿಯಲಿದೆ ಅನ್ನೋದು ಭಕ್ತರ ಬಲವಾದ ನಂಬಿಕೆಯಾಗಿದೆ.
ಪ್ರಮುಖವಾಗಿ ಮನಸ್ಸು ಶಾಂತಗೊಳ್ಳುತ್ತದೆ, ಏಕಾಗ್ರತೆ, ಕೆಲಸದಲ್ಲಿ ಹುಮ್ಮಸ್ಸು, ಆಸಕ್ತಿ ಹೆಚ್ಚುತ್ತದೆ. ಲಘು ಹಾಗೂ ಪೌಷ್ಠಿಕಾಂಶಗಳ ಆಹಾರದ ಮೂಲಕ ದೇಹದ ಶಕ್ತಿ ವೃದ್ಧಿಸುತ್ತದೆ. ಕೇವಲ ಆಹಾರ ಪದ್ಧತಿ ಮಾತ್ರವಲ್ಲ, ಆರಾಧಾನೆ, ಭಜನೆ ಮೂಲಕ ಮನಸ್ಸು ಹಗುರವಾಗಲಿದೆ. ಪಾಸಿಟೀವ್ ಎನರ್ಜಿ ತುಂಬಿಕೊಳ್ಳಲಿದೆ.
55
ಉಪವಾಸದ ವೇಳೆ ಮೋದಿ ಆಹಾರ ಪಪ್ಪಾಯ
ಉಪವಾಸದ ವೇಳೆ ಮೋದಿ ಆಹಾರ ಪಪ್ಪಾಯ
ನವರಾತ್ರಿಯ 9 ದಿನ ಉಪವಾಸದ ವೇಳೆ ಪ್ರಧಾನಿ ಮೋದಿ ಪಪ್ಪಾಯ ಹಣ್ಣು ಹೆಚ್ಚಾಗಿ ಸೇವಿಸುತ್ತಾರೆ. ದೇಹಕ್ಕೆ ಇತರ ಆಹಾರಗಳಿಲ್ಲದ ವೇಳೆ ಪೌಷ್ಠಿಕಾಂಶದ ಕೊರತೆ, ಆಯಾಸ ಸೇರಿದಂತೆ ಹಲವು ಸವಾಲು ಎದುರಾಗಲಿದೆ. ಹೀಗಾಗಿ ಪಪ್ಪಾಯ ಉತ್ತಮ ಹಣ್ಣಾಗಿದೆ. ಪಪ್ಪಾಯ ಉತ್ತಮ ಪೌಷ್ಠಿಕಾಂಶ ಆಹಾರ ನಿಜ. ಆದರೆ ಪ್ರತಿಯೊಬ್ಬರ ದೇಹ ಕೇವಲ ಒಂದು ಹಣ್ಣಿನಿಂದ ಆರೋಗ್ಯವಾಗಿರಲು ಸಾಧ್ಯವಿಲ್ಲ.