ದಿನದ ಈ ಸಮಯದಲ್ಲಿ ಗಾಯತ್ರಿ ಮಂತ್ರ ಪಠಿಸೋದು ತುಂಬಾ ಶುಭ !

First Published | Feb 26, 2024, 5:20 PM IST

ಗಾಯತ್ರಿ ಮಂತ್ರ ಮತ್ತು ಅದರ ಮಹತ್ವದ ಬಗ್ಗೆ ನಿಮಗೆ ತಿಳಿದೇ ಇದೆ ಅಲ್ವಾ? ಈ ಗಾಯತ್ರಿ ಮಂತ್ರವನ್ನು ಪ್ರತಿದಿನ ಪಠಿಸೋದರಿಂದ ಏನೆಲ್ಲಾ ಪ್ರಯೋಜನ ಇದೆ ತಿಳಿಯಿರಿ. 
 

ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋ ನಃ ಪ್ರಚೋದಯಾತ್''
ಗಾಯತ್ರಿ ಮಂತ್ರ (gayatri mantra) ಋಗ್ವೇದದ ಒಂದು ಮಂತ್ರವಾಗಿದೆ. ಇದನ್ನು ಅತ್ಯಂತ ಹಳೆಯ ವೇದ ಎನ್ನಲಾಗಿದೆ. 

ಗಾಯತ್ರಿ ಮಂತ್ರವನ್ನ ತುಂಬಾನೆ ಸರಳವಾದ ಆದರೆ ಹೆಚ್ಚು ಶಕ್ತಿಶಾಲಿಯಾದ ಮಂತ್ರ (powerful mantra) ಎಂದು ಕರೆಯಲಾಗುತ್ತದೆ. ಇದನ್ನ ಪಠಿದೋದರಿಂದ ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ನಡೆಯಲು ಮತ್ತು ಫೋಕಸ್ ಆಗಿರಲು ಸಹಾಯ ಮಾಡುತ್ತದೆ‌. 

Tap to resize

ಗಾಯತ್ರಿ ಮಂತ್ರದ ಅರ್ಥವೇನು? 
ನಾವು ಮನುಷ್ಯ ರೂಪದಲ್ಲಿ ಆ ಉಚ್ಛ ಶಕ್ತಿಯನ್ನು ನೆನೆದು ಧ್ಯಾನ (meditation)ಮಾಡಿದರೆ  ಯಾರು ನಮ್ಮನ್ನು ಮತ್ತು ನಮ್ಮ ಸುತ್ತಮುತ್ತಲಿನ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ್ದಾರೋ ಆ ಶಕ್ತಿ  ನಾವು ಭೂಮಿ ಮೇಲೆ ನಡೆಯುವಾಗ ನಮ್ಮನ್ನು ರಕ್ಷಿಸಲಿ ಮತ್ತು ನಮ್ಮನ್ನು ಪ್ರಬುದ್ದರನ್ನಾಗಿಸಲಿ. 

ಗಾಯತ್ರಿ ಮಂತ್ರ ಜಪ ಮಾಡುವಾಗ ಜಪ‌ ಮಾಡುವ ವ್ಯಕ್ತಿ ಮಾತ್ರ ಶುದ್ದನಾಗೋದಿಲ್ಲ, ಅದರ ಜೊತೆ ಜೊತೆಗೆ ಆತನ ಸುತ್ತ ಮುತ್ರಲೂ ಸಹ ಸಕಾರಾತ್ಮಕ ಶಕ್ತಿ (positive power) ಹೆಚ್ಚುತ್ತಲೇ ಹೋಗುತ್ತದೆ. 
 

ಗಾಯತ್ರಿ ಮಂತ್ರವನ್ನು ಪ್ರತಿದಿನ ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ (Bramha Muhurat) ಮಾಡಿದರೆ ಉತ್ತಮ. ಈ ಸಮಯದಲ್ಲಿ ಗಾಯತ್ರಿ ಮಂತ್ರ ಜಪಿಸಿದರೆ ಅದರ ಶಕ್ತಿ ಮತ್ತು ಪರಿಣಾಮ ತುಂಬಾನೆ ಹೆಚ್ಚಾಗಿರುತ್ತದೆ.

ಗಾಯತ್ರಿ ಮಂತ್ರದ ಲಯ, ಶಕ್ತಿ ಮತ್ತು ಕಂಪನ ಮನಸ್ಸನ್ನು ಶಾಂತವಾಗಿರಿಸಲು ಸಹಾಯ ಮಾಡುತ್ತದೆ. ಇದರಿಂದ ಪೂರ್ತಿ ದಿನದ ಮೇಲೆ ಮನಸು ಕೇಂದ್ರೀಕೃತವಾಗಲು (concerntration) ಸಹಾಯ ಮಾಡುತ್ತದೆ‌. ನಿಯಮಿತ ರೂಪದಲ್ಲಿ ಗಾಯತ್ರಿ ಮಂತ್ರ ಪಠಿಸಿದರೆ ಏಕಾಗ್ರತೆ ಹೆಚ್ಚುತ್ತದೆ. 
 

ಗಾಯತ್ರಿ ಮಂತ್ರ ನಮ್ಮ ಶಕ್ತಿಯನ್ನು ರಕ್ಷಿಸುತ್ತದೆ, ಜೊತೆಗೆ ವರ್ತಮಾನ ಮತ್ತು ನಮ್ಮ ಸುತ್ತಮುತ್ತಲು ನಡೆಯುವ ವಿಷಯಗಳ ಬಗ್ಗೆ ಹೆಚ್ಚು ಜಾಗರೂಕರಾಗುವಂತೆ (alert us) ಮಾಡುತ್ತದೆ. 

 ಪರೀಕ್ಷೆ ಸಮಯದಲ್ಲಿ ಗಾಯತ್ರಿ ಮಂತ್ರ ಜಪಿಸುವುದರಿಂದ ಏಕಾಗ್ರತೆಯನ್ನು ಹೆಚ್ಚುತ್ತದೆ. ಅಲ್ಲದೇ ಇದರಿಂದಾಮ ಚೆನ್ನಾಗಿ ಓದಲು ಮತ್ತು ಮಾಹಿತಿಗಳನ್ನು ನೆನಪಿನಲ್ಲಿಟ್ಡುಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಪರೀಕ್ಷೆಯ ಒತ್ತಡ ಮತ್ತು ಭಯ ಸಹ ನಿವಾರಣೆಯಾಗುತ್ತದೆ.

ಗಾಯತ್ರಿ ಮಂತ್ರ ಪಠಿಸುವ ಜೊತೆಗೆ ಧ್ಯಾನ ಮಾಡೋದರಿಂದ ಮನಸ್ಸಿನ ಒತ್ತಡ ದೂರವಾಗಿ ಮನಸ್ಸು ಶಾಂತವಾಗುತ್ತದೆ. ಮನಸ್ಸು ಶಾಂತವಾಗಿದ್ದರೆ ರಕ್ತದೊತ್ತಡ (blood pressure) ಸಮಸ್ಯೆ ಕೂಡ ಕಾಡೋದಿಲ್ಲ.

Latest Videos

click me!