ಬೇಲೂರು ಪಟ್ಟಣದಲ್ಲಿರುವ ಶ್ರೀ ಚನ್ನಕೇಶವ ದೇವಾಲಯ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ಮೊದಲನೇ ವರ್ಷದ ಜಾತ್ರಾ ಮಹೋತ್ಸವದ ಕಾರ್ಯಕ್ರಮ ಕಳೆದ 9 ದಿನಗಳಿಂದಲೇ ಆರಂಭಗೊಂಡು ,ಶಾಸ್ತ್ರೀಯ ವಿಧಿ ವಿಧಾನಗಳೊಂದಿಗೆ ನಿತ್ಯ ರಾತ್ರಿ ವೇಳೆ ಪ್ರಮುಖ ಉತ್ಸವಗಳಾದ ಕಲ್ಯಾಣೋತ್ಸವ, ಚಂದ್ರ ಮಂಡಲೊತ್ಸವ, ಸೂರ್ಯ ಮಂಡಲೋತ್ಸವ,ಹಂಸ ಉತ್ಸವ,ಬೆಳ್ಳಿ ಮಂಟಪೋತ್ಸವ, ಹನುಮಂತೋತ್ಸವ, ಗರುಡೋತ್ಸವ,ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಅದ್ದೂರಿಯಾಗಿ ನೆರವೇರಿದವು . ದಿವ್ಯ ಬ್ರಹ್ಮ ರಥೋತ್ಸವ ಹಿನ್ನೆಲೆ ಶುಕ್ರವಾರ ಸಂಜೆ ಯಿಂದಲೆ ರಾಜ್ಯ ಹೊರ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು ಮತ್ತು ಪ್ರವಾಸಿಗರು ನಗರದ ವಸತಿಗೃಹಗಳಲ್ಲಿ ಮತ್ತು ದೇವಾಲಯದ ಒಳ ಮತ್ತು ಹೊರ ಭಾಗದ ಆವರಣದ ಬಳಿ ತಂಗಿದ್ದರು.