8 ಗಂಟೆ ನಂತರ ಸ್ನಾನ ಮಾಡದಿರಿ! ಸ್ನಾನದ ಮಹತ್ವ ಒಂದೆರಡಲ್ಲ!

First Published | May 19, 2021, 6:24 PM IST

ಹಿಂದೂ ಧರ್ಮಗ್ರಂಥಗಳಲ್ಲಿ 4 ವಿಧದ ಸ್ನಾನದ ಕುರಿತು ಉಲ್ಲೇಖಿಸಲಾಗಿದೆ. ಯಾವಾಗ ಸ್ನಾನ ಮಾಡಬೇಕು ಸ್ನಾನ ಮಾಡಲು ಉತ್ತಮ ಸಮಯ ಯಾವುದು? ಸ್ನಾನದ ಪ್ರಯೋಜನವೇನು..? 4 ವಿಧದ ಸ್ನಾನದಲ್ಲಿ ಯಾವ ಸ್ನಾನ ಉತ್ತಮ? ಇವೆಲ್ಲವನ್ನೂ ತಿಳಿಸುತ್ತದೆ. ಅವುಗಳ ಬಗ್ಗೆ ನೀವೂ ತಿಳಿದುಕೊಂಡರೆ ಉತ್ತಮ. 
 

ಹಿಂದೂ ಸನಾತನ ಧರ್ಮದಲ್ಲಿ ಸ್ನಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಸ್ನಾನವನ್ನು ಮನುಷ್ಯನ ಸಮೃದ್ಧಿಯ ಒಂದು ಅಂಶವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ನಾಲ್ಕು ಬಗೆಯ ಸ್ನಾನಗಳನ್ನು ಉಲ್ಲೇಖಿಸಲಾಗಿದೆ. ಮುನಿ ಸ್ನಾನ, ದೇವ ಸ್ನಾನ, ಮಾನವ ಸ್ನಾನ ಮತ್ತು ರಾಕ್ಷಸಿ ಸ್ನಾನ ಅವುಗಳಲ್ಲಿ ಪ್ರಮುಖವಾಗಿವೆ.
ಮುನಿ ಸ್ನಾನ ಎಲ್ಲಕ್ಕಿಂತ ಉತ್ತಮವಾಗಿದೆ. ಮುನಿ ಸ್ನಾನ ಮಾಡುವ ವ್ಯಕ್ತಿಯು ಎಲ್ಲಾ ರೀತಿಯ ಸಂಕೋಲೆಗಳಿಂದ ಮುಕ್ತನಾಗಿರುತ್ತಾನೆ. ಮುನಿ ಸ್ನಾನ ಹಿಂದೂ ಧರ್ಮದ ಅತ್ಯುತ್ತಮ ಸ್ನಾನವೆಂದು ಪರಿಗಣಿಸಲಾಗಿದೆ.
Tap to resize

ಧರ್ಮಗ್ರಂಥಗಳ ಪ್ರಕಾರ, ಸ್ನಾನ ಮಾಡುವುದರಿಂದ ವ್ಯಕ್ತಿಯ ಮನಸ್ಸು ಮತ್ತು ದೇಹಶುದ್ಧವಾಗುತ್ತದೆ, ವ್ಯಕ್ತಿಯ ದೇಹ ಮತ್ತು ಮನಸ್ಸು ಶುದ್ಧವಾಗಿದ್ದಾಗ ವ್ಯಕ್ತಿಯ ಆಲೋಚನೆಗಳು ಶುದ್ಧವಾಗಿರುತ್ತದೆ ಮತ್ತು ಆಲೋಚನೆಗಳು ಶುದ್ಧವಾಗಿದ್ದಾಗ ವ್ಯಕ್ತಿಯ ಕ್ರಿಯೆಗಳು ಶುದ್ಧವಾಗುತ್ತವೆ ಎಂಬ ನಂಬಿಕೆ ಇದೆ.
ಕರ್ಮವನ್ನು ಶುದ್ಧೀಕರಿಸಿದಾಗ, ವ್ಯಕ್ತಿಯು ತನ್ನ ಅಭಿವೃದ್ಧಿಯ ಹಾದಿಯತ್ತ ಸಾಗುತ್ತಾನೆ. ಧರ್ಮಗ್ರಂಥಗಳಲ್ಲಿ, ಬೆಳಿಗ್ಗೆ ಸ್ನಾನಕ್ಕೆ ನಾಲ್ಕು ಉಪನಾಮಗಳನ್ನು ನೀಡಲಾಗುತ್ತದೆ. ಆದ್ದರಿಂದ, ಈ ನಾಲ್ಕು ಸ್ನಾನಗಳ ಬಗ್ಗೆ ಮತ್ತು ಯಾವ ಸ್ನಾನಗಳಿಂದ ಏನು ಪ್ರಯೋಜನ ಎನ್ನುವುದನ್ನು ತಿಳಿದುಕೊಳ್ಳೋಣ..
1. ಮುನಿ ಸ್ನಾನ:ಮುನಿ ಸ್ನಾನವನ್ನು ಬೆಳಗ್ಗೆ 4 ರಿಂದ 5ರವರೆಗೆ ಮಾಡಲಾಗುತ್ತದೆ. ಮುನಿ ಸ್ನಾನವು ಮನೆಯಲ್ಲಿ ಸಂತೋಷ, ಶಾಂತಿ, ಸಮೃದ್ಧಿ, ಕಲಿಕೆ, ಶಕ್ತಿ, ರೋಗಗಳನ್ನು ಗುಣಪಡಿಸುವಿಕೆ, ಪ್ರಾಧಾನ್ಯತೆಯನ್ನು ನೀಡುತ್ತದೆ. ಮುನಿ ಸ್ನಾನವು ಸ್ನಾನಗಳಲ್ಲೇ ಅತ್ಯುತ್ತಮವಾದದ್ದು.
2. ದೇವ ಸ್ನಾನ:ದೇವ ಸ್ನಾನವನ್ನು ಬೆಳಿಗ್ಗೆ 5 ರಿಂದ ಸಂಜೆ 6 ರವರೆಗೆ ಮಾಡಲಾಗುತ್ತದೆ. ದೇವ ಸ್ನಾನ ಮಾಡುವ ವ್ಯಕ್ತಿಯು ತನ್ನ ಜೀವನದಲ್ಲಿ ಖ್ಯಾತಿ, ಗೌರವ, ಸಂಪತ್ತು, ಸಮೃದ್ಧಿ, ಸಂತೋಷ, ಶಾಂತಿ ಮತ್ತು ತೃಪ್ತಿಪಡೆಯುತ್ತಾನೆ. ದೇವ ಸ್ನಾನವು ಕೂಡ ಉತ್ತಮವಾದ ಸ್ನಾನ.
3. ಮಾನವ ಸ್ನಾನ:ಬೆಳಿಗ್ಗೆ 6 ರಿಂದ ಬೆಳಿಗ್ಗೆ 8 ರವರೆಗೆ ಮಾನವ ಸ್ನಾನವನ್ನು ಮಾಡಲಾಗುತ್ತದೆ. ಈ ಸ್ನಾನವು ವ್ಯಕ್ತಿಗೆ ಕೆಲಸ, ಅದೃಷ್ಟ, ಒಳ್ಳೆಯ ಕಾರ್ಯಗಳ ಕಲ್ಪನೆ, ಕುಟುಂಬದಲ್ಲಿ ಐಕ್ಯತೆ, ಶುಭಕರ ಯಶಸ್ಸನ್ನು ನೀಡುತ್ತದೆ. ಮಾನವ ಸ್ನಾನವನ್ನು ಸಾಮಾನ್ಯ ಸ್ನಾನವೆಂದು ಪರಿಗಣಿಸಲಾಗುತ್ತದೆ.
4. ರಾಕ್ಷಸ ಸ್ನಾನ:ಬೆಳಿಗ್ಗೆ 8 ಗಂಟೆಯ ನಂತರ ರಾಕ್ಷಸ ಸ್ನಾನ ನಡೆಸಲಾಗುತ್ತದೆ. ರಾಕ್ಷಸ ಸ್ನಾನವು ಬಡತನ, ನಷ್ಟ, ಸಮಸ್ಯೆ, ಹಣದ ನಷ್ಟ, ತೊಂದರೆ ಇತ್ಯಾದಿಗಳನ್ನು ಒದಗಿಸುತ್ತದೆ.
ವ್ಯಕ್ತಿಯು ಬೆಳಿಗ್ಗೆ 8 ಗಂಟೆಯ ನಂತರ ಸ್ನಾನ ಮಾಡಬಾರದು. ಧರ್ಮದಲ್ಲಿ ರಾಕ್ಷಸ ಸ್ನಾನವನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿಯಾದರೂ ಸ್ನಾನವನ್ನು ಬೆಳಿಗ್ಗೆ 8 ಗಂಟೆಯ ಒಳಗೆ ಮಾಡಬೇಕು.
ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ಈ ನಾಲ್ಕು ಸ್ನಾನಗಳಲ್ಲಿ ಮುನಿ ಸ್ನಾನ, ದೇವ ಸ್ನಾನ ಮತ್ತು ಮಾನವ ಸ್ನಾನವು ಉತ್ತಮ. ಮಾನವನಾದವನು ರಾಕ್ಷಸ ಅಥವಾ ರಾಕ್ಷಸಿ ಸ್ನಾನವನ್ನು ಮಾಡಬಾರದು. ಒಂದು ವೇಳೆ ನೀವು ಕೂಡ ಈ ಅವಧಿಯಲ್ಲಿ ಸ್ನಾನ ಮಾಡುತ್ತಿದ್ದರೆ, ಇನ್ನು ಮುಂದೆಯಾದರೂ ಬಿಡಿ.

Latest Videos

click me!