ಜೂನ್ ತಿಂಗಳು ಕೆಲವು ರಾಶಿಗಳಿಗೆ ಧನಲಾಭ ಸೇರಿದಂತೆ ಶುಭ ಫಲಗಳನ್ನು ತರುತ್ತದೆ. 5 ರಾಶಿಗಳಿಗೆ ಉದ್ಯೋಗದಲ್ಲಿ ಒಳ್ಳೆಯ ಅವಕಾಶಗಳು ಲಭ್ಯವಾಗಲಿವೆ. ವೃಷಭ, ಮಿಥುನ, ಸಿಂಹ, ಮಕರ ಮತ್ತು ಮೀನ ರಾಶಿಯವರಿಗೆ ಜೂನ್ ತಿಂಗಳು ಅನುಕೂಲಕರವಾಗಿರುತ್ತದೆ.
ವರ್ಷದ ಆರನೇ ತಿಂಗಳು ಜೂನ್ ಆರಂಭವಾಗಲಿದೆ. ಜೂನ್ ತಿಂಗಳ ಪ್ರಕಾರ, ಕೆಲವು ರಾಶಿಗಳಿಗೆ ಧನಲಾಭ ಸೇರಿದಂತೆ ಶುಭ ಗಳಿಗೆ ಆರಂಭವಾಗಲಿದೆ. ಖಾಸಗಿ ಮತ್ತು ವೃತ್ತಿ ಬದುಕಿನಲ್ಲಿ ಒಳ್ಳೆಯ ದಿನಗಳು ಎದುರಾಗಲಿವೆ.
27
ಜೂನ್ ತಿಂಗಳಲ್ಲಿ ಒಟ್ಟು 5 ರಾಶಿಚಕ್ರದವರಿಗೆ ಉದ್ಯೋಗದಲ್ಲಿ ಒಳ್ಳೆಯ ಅವಕಾಶಗಳು ಸಿಗಲಿವೆ. ಈ 5 ರಾಶಿಯವರಿಗೆ ಯಾವುದೇ ಹೊಸ ಕೆಲಸ ಆರಂಭಿಸಲು ಇದು ಸೂಕ್ತ ಸಮಯವಾಗಿದೆ. ಆ ಐದು ರಾಶಿಗಳು ಯಾವವು ಎಂಬುದನ್ನು ನೋಡೋಣ ಬನ್ನಿ.
37
1.ವೃಷಭ
ಈ ರಾಶಿಚಕ್ರದವರಿಗೆ ಜೂನ್ ತಿಂಗಳು ಶುಭಕರವಾಗಿರಲಿದೆ. ವೃತ್ತಿಜೀವನದಲ್ಲಿ ಬಡ್ತಿ, ಸಂಬಳ ಏರಿಕೆ ಅಂತಹ ಗುಡ್‌ನ್ಯೂಸ್ ಸಿಗಲಿದೆ. ಹೊಸ ವ್ಯವಹಾರ ಆರಂಭಿಸಲು ಪ್ಲಾನ್ ಮಾಡಿಕೊಂಡಿದ್ರೆ ಶುರು ಮಾಡಲು ಇದು ಶುಭ ಸಮಯವಾಗಿದೆ. ಪ್ರೇಮ ಸಂಬಂಧದಲ್ಲಿಯೂ ಸಂತೋಷವಾಗಿರುತ್ತದೆ.
47
2.ಮಿಥುನ
ಜೂನ್ ತಿಂಗಳು ಮಿಥುನ ರಾಶಿಯವರಿಗೆ ಬಲವಾಗಿರುತ್ತದೆ. ಈ ತಿಂಗಳು ಪ್ರಯಾಣದ ಭಾಗ್ಯ ಲಭ್ಯವಾಗುವ ಸಾಧ್ಯತೆಗಳಿರುತ್ತವೆ. ಮಿಥುನ ರಾಶಿಯ ಮಹಿಳೆಯರು ವಿಶೇಷ ಗೌರವಕ್ಕೆ ಪಾತ್ರರಾಗುತ್ತಾರೆ. ನಿಮ್ಮಲ್ಲಿರುವ ಹಣ ವಿಶೇಷ ಕೆಲಸಕ್ಕೆ ಬಳಕೆಯಾಗಲಿದೆ.
57
3.ಸಿಂಹ
ಈ ತಿಂಗಳು ಸಿಂಹ ರಾಶಿಯವರಿಗೆ ಮಂಗಳಕರವಾಗಿರಲಿದೆ. ಅರ್ಧಕ್ಕೆ ನಿಂತಿರುವ ನಿಮ್ಮೆಲ್ಲಾ ಕೆಲಸಗಳು ಈ ತಿಂಗಳು ಪೂರ್ಣವಾಗಲಿವೆ. ವೃತ್ತಿ ಮತ್ತು ವ್ಯವಹಾರದಲ್ಲಿ ಒಳ್ಳೆಯ ಪ್ರಗತಿ ಕಾಣುತ್ತೀರಿ. ಯಾವುದೇ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೀರಿ.
67
4.ಮಕರ
ಜೂನ್ ಆರಂಭದಿಂದಲೇ ಮಕರ ರಾಶಿಗೆ ಶುಭ ದಿನಗಳು ಶುರುವಾಗುತ್ತವೆ. ನಿಮ್ಮ ಇಚ್ಛೆಯಂತೆ ಎಲ್ಲಾ ಕೆಲಸಗಳು ನಡೆಯುತ್ತವೆ. ವೃತ್ತಿ ಜೀವನದಲ್ಲಿ ನಿಮ್ಮ ಮೇಲಿನ ಜವಾಬ್ದಾರಿಗಳು ಹೆಚ್ಚಾಗುತ್ತವೆ ಮತ್ತು ಬಡ್ತಿಯೂ ಸಿಗುತ್ತದೆ. ಪೋಷಕರು ಮತ್ತು ಮಕ್ಕಳಿಂದ ಪ್ರೀತಿಯನ್ನು ಪಡೆಯುತ್ತೀರಿ. ಜೀವನದಲ್ಲಿ ಸಂತೋಷದ ದಿನಗಳು ನಿಮ್ಮನ್ನು ಅರಸಿ ಬರುತ್ತದೆ.
77
5.ಮೀನ
ಮೀನ ರಾಶಿಯವರಿಗೆ ಜೂನ್ ತಿಂಗಳು ಶುಭವೆಂದು ಜ್ಯೋತಿಷಿಗಳು ಹೇಳುತ್ತಾರೆ. ಈ ತಿಂಗಳಲ್ಲಿ ನಿಮ್ಮ ಅಪೂರ್ಣ ಕೆಲಸ ಪೂರ್ಣಗೊಳ್ಳುತ್ತದೆ. ಭವಿಷ್ಯದಲ್ಲಿ ನಿಮಗೆ ಪ್ರಯೋಜನಕಾರಿಯಾಗಬಹುದಾದ ಹೊಸ ಜನರನ್ನು ಭೇಟಿ ಮಾಡಲು ನಿಮಗೆ ಅವಕಾಶ ಸಿಗುತ್ತದೆ. ಸಂತೋಷವು ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಇದರಿಂದಾಗಿ ಮನಸ್ಸು ತುಂಬಾ ಸಂತೋಷವಾಗಿರುತ್ತದೆ.