ಮನೆ ಮಂದಿಯೆಲ್ಲ ಆರೋಗ್ಯವಾಗಿದ್ರೂ, ಕೈತುಂಬ ಸಂಬಳ ಬರ್ತಿದ್ರೂ ಏನೋ ಕಿರಿಕಿರಿ ಮನೆಯಲ್ಲಿರುತ್ತೆ. ಕುಟುಂಬದಲ್ಲಿ ಸಂತೋಷ, ನೆಮ್ಮದಿ ಕಾಣಿಸೋದಿಲ್ಲ. ಮನೆ ಮಂದಿ ಮನಸ್ಸು ಶಾಂತವಾಗಿರೋದಿಲ್ಲ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಇದಕ್ಕೆಲ್ಲ ಕಾರಣ. ಅದನ್ನು ಅತ್ಯಂತ ಸರಳ ಉಪಾಯದಿಂದ ಬಗೆ ಹರಿಸ್ಬಹುದು.
ಮನೆಯಲ್ಲಿ ಎಲ್ಲವೂ ಇದ್ದು ಏನೂ ಇಲ್ಲದಂತೆ ಜನರು ಬದುಕ್ತಿದ್ದರೆ ಅದಕ್ಕೆ ಕಾರಣ ವಾಸ್ತು. ಎಷ್ಟೇ ಹಣ ಇರ್ಲಿ, ಎಷ್ಟೇ ಆರೋಗ್ಯ ಇರಲಿ ನೆಮ್ಮದಿ ಇಲ್ಲ, ಸಂತೋಷವಿಲ್ಲ ಅಂದ್ರೆ ಜೀವನ ಕಷ್ಟ. ಇದಕ್ಕೆ ನಿಮ್ಮ ಮನೆ ವಾಸ್ತು ಮುಖ್ಯ ಕಾರಣವಾಗಿರುತ್ತೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೋಗಲಾಡಿಸಲು ನೀವು ಮನೆ ಬದಲಿಸಬೇಕಾಗಿಲ್ಲ. ಅತ್ಯಂತ ಸರಳ ವಿಧಾನವನ್ನು ಫಾಲೋ ಮಾಡುವ ಮೂಲಕ ನೀವು ನೆಮ್ಮದಿ ಕಂಡುಕೊಳ್ಳಬಹುದು.
25
ಲವಂಗದ ನೀರು
ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಇರುವ ವಸ್ತು ಇದು. ಇದನ್ನು ಮಸಾಲೆ ಪದಾರ್ಥವಾಗಿ ಬಳಕೆ ಮಾಡಲಾಗುತ್ತದೆ. ಆದ್ರೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗುತ್ತದೆ. ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ, ಮಾನಸಿಕ ಕಿರಿಕಿರಿ ಏನೇ ಇರಲಿ ಈ ಲವಂಗದ ನೀರು ನಿಮ್ಮೆಲ್ಲ ಸಮಸ್ಯೆಗೆ ಪರಿಹಾರವಾಗಬಹುದು ಅಂತ ಜನರು ನಂಬಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಲವಂಗದ ನೀರು ಹೆಚ್ಚು ಚರ್ಚೆ ಆಗ್ತಿದೆ.
35
ಲವಂಗದ ನೀರು ತಯಾರಿಸುವ ವಿಧಾನ
ಲವಂಗದ ನೀರು ತಯಾರಿಸೋದು ಬಹಳ ಸುಲಭ. ಹೆಚ್ಚಿನ ಪದಾರ್ಥದ ಅಗತ್ಯವಿಲ್ಲ. ಲವಂಗ ಹಾಗೂ ನೀರನ್ನು ಬಳಸಿದ್ರೆ ಸಾಕು. ಮೊದಲು ಒಂದು ಗಾಜಿನ ಅಥವಾ ತಾಮ್ರದ ಪಾತ್ರೆಯನ್ನು ತೆಗೆದುಕೊಳ್ಳಿ. ಅದಕ್ಕೆ 5 -7 ಲವಂಗವನ್ನು ಹಾಕಿ. ನಂತ್ರ ನೀರನ್ನು ಹಾಕಿ. ಇದನ್ನು ಸುಮಾರು 2 ರಿಂದ 3 ಗಂಟೆ ನೆನೆಹಾಕಿ. ಇದನ್ನು ದೇವರ ಮುಂದಿಷ್ಟು ಪ್ರಾರ್ಥನೆ ಮಾಡಿ ಬಳಕೆ ಮಾಡ್ಬಹುದು. ಹಾಗೆ ಮಾಡಿದ್ರೆ ಸಕಾರಾತ್ಮಕ ಶಕ್ತಿ ದುಪ್ಪಟ್ಟಾಗುತ್ತೆ ಎನ್ನುವ ನಂಬಿಕೆ ಇದೆ.
ಲವಂಗದ ನೀರನ್ನು ನೀವು ಶಕ್ತಿವಾತಾವರಣ ಬದಲಾಗುವ, ಶಕ್ತಿಯ ಹರಿವು ಭಿನ್ನವಾಗಿರುವ ಸಮಯದಲ್ಲಿ ಬಳಸಬೇಕು. ಅಂದ್ರೆ ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ ಈ ನೀರನ್ನು ನೀವು ಮನೆಗೆ ಸಿಂಪಡಿಸಬೇಕು. ಇದನ್ನು ಮನೆಯ ಮುಖ್ಯದ್ವಾರದಿಂದ ಸಿಂಪಡಿಸಬೇಕು. ಮುಖ್ಯದ್ವಾರದಿಂದ ಮನೆಯ ಎಲ್ಲ ಜಾಗಕ್ಕೆ ಇದನ್ನು ಸಿಂಪಡಿಸಬೇಕು. ಆದ್ರೆ ಯಾವುದೇ ಕಾರಣಕ್ಕೂ ಬಾತ್ ರೂಮ್, ಶೌಚಾಲಯ ಹಾಗೂ ಸಿಂಕ್ ಗೆ ಇದನ್ನು ಹಾಕಬೇಡಿ. ನೀವು ನಿಮ್ಮಿಷ್ಟದ ಮಂತ್ರವನ್ನು ಪಠಿಸಬಹುದು. ಇಲ್ಲವೆ ಸಕಾರಾತ್ಮಕ ಆಲೋಚನೆಯಲ್ಲಿ ಈ ನೀರನ್ನು ಸಿಂಪಡಿಸಿ.
55
ಲವಂಗದ ನೀರಿನಿಂದ ಲಾಭ
ಮನೆಗೆ ಲವಂಗದ ನೀರನ್ನು ಸಿಂಪಡಿಸುವುದ್ರಿಂದ ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ. ಲವಂಗದ ಸುವಾಸನೆ ಮನೆಯನ್ನು ತಾಜಾಗೊಳಿಸುತ್ತದೆ. ಆರ್ಥಿಕ ಚಿಂತೆ ಕಡಿಮೆಯಾಗುತ್ತದೆ. ಮನಸ್ಸು ಹಗುರವಾದ ಅನುಭವವಾಗುತ್ತದೆ. ಸಂಬಂಧಗಳಲ್ಲಿ ಕಾಣಿಸಿಕೊಂಡ ಉದ್ವಿಗ್ನತೆ ಕಡಿಮೆಯಾಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಶಾಂತವಾಗಿ ನೀವು ಜೀವನದ ನಿರ್ದಾರ ತೆಗೆದುಕೊಳ್ಳಲು ಇದು ಸಹಕಾರಿ.