ಈ ದಿನದಂದು ಕೆಲಸಕ್ಕೆ ಜಾಯಿನ್ ಆದ್ರೆ ಎಲ್ಲವೂ ಶುಭವಾಗುತ್ತೆ!

First Published | Oct 21, 2022, 4:51 PM IST

ಚೆನ್ನಾಗಿ ಕಲಿತು ಉತ್ತಮ ಅಂಕಗಳೊಂದಿಗೆ ಪಾಸ್ ಆಗಿ ಆಗಿದೆ. ಕೆಲಸಕ್ಕಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಸಹ ಮಾಡಿಯಾಗಿದೆ. ಆದರೆ ಇನ್ನೂ ಕೆಲಸ ಸಿಕ್ಕಿಲ್ಲ ಅನ್ನೋದು ಪ್ರತಿಯೊಬ್ಬರಿಗೂ ಅತ್ಯಂತ ದೊಡ್ಡ ತಲೆಬಿಸಿಯಾಗಿದೆ. ಒಂದು ವೇಳೆ ಕಲಿತ ಕೂಡಲೇ ಕೆಲಸ ಸಿಕ್ಕರೆ ಅದರಷ್ಟು ಖುಷಿ ಮತ್ತೊಂದಿಲ್ಲ. ಕೆಲಸವು ಸರ್ಕಾರಿಯೇ ಆಗಿರಲಿ ಅಥವಾ ಖಾಸಗಿಯಾಗಿರಲಿ, ಇವೆರಡೂ ನಿರುದ್ಯೋಗಿ ವ್ಯಕ್ತಿಗೆ ತುಂಬಾ ಮುಖ್ಯವಾಗುತ್ತವೆ. ಕೆಲಸದ ಆಫರ್ ಲೆಟರ್ ಬಂದ ತಕ್ಷಣ, ಮನಸ್ಸು ಸಂತೋಷದಿಂದ ತುಂಬುತ್ತೆ. 

ಕೆಲವರಿಗೆ ವಿಧ್ಯಾಭ್ಯಾಸದ ಬಳಿಕ ಮೊದಲ ಬಾರಿ ಕೆಲಸ ಸಿಕ್ಕಿರುತ್ತೆ. ಕೆಲವು ಜನರು ಒಂದು ಕೆಲಸವನ್ನು(Job) ತೊರೆದು ಮತ್ತೊಂದು ಉದ್ಯೋಗವನ್ನು ಸೇರಲು ತಯಾರಿ ನಡೆಸುತ್ತಾರೆ, ಆದರೆ ಕೆಲವರು ಬಡ್ತಿ ಪಡೆಯುತ್ತಾರೆ, ಅವರು ಅದೇ ಆಫೀಸ್ಗೆ ಸೇರುತ್ತಾರೆ. ಯಾವುದೇ ಆಫೀಸ್ನಲ್ಲಿ ಕೆಲಸಕ್ಕೆ ಸೇರುವ ಬಗ್ಗೆ ವಿಭಿನ್ನ ಜನರು ವಿಭಿನ್ನ ವಾದಗಳನ್ನು ಮಾಡುತ್ತಾರೆ. ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ? ಎಲ್ಲಿ ತಿಳಿದುಕೊಳ್ಳೋಣ. 

- ಸೇರುವ ದಿನವು ಸ್ಥಿರತೆಗೆ ಸಂಬಂಧಿಸಿದೆ
ಅನೇಕ ಬಾರಿ ಜನರು ಶಿಕ್ಷೆಯಾಗಿ ಟ್ರಾನ್ಸ್ಫರ್ ಪಡೆಯುತ್ತಾರೆ. ಇದರಿಂದ, ಅವರು ಮತ್ತೊಂದು ಸ್ಥಳಕ್ಕೆ ಹೋಗಿ ಕೆಲಸಕ್ಕೆ ಸೇರುತ್ತಾರೆ, ಆದರೆ ಅಲ್ಲಿ ಸಹ ಮತ್ತೆ ವರ್ಗಾಯಿಸುವ ಪ್ರಯತ್ನಗಳು ಮುಂದುವರಿಯುತ್ತವೆ. ಹೀಗೆ ಯಾಕೆ ಆಗುತ್ತೆ ಎಂದು ನೀವು ಅಂದುಕೊಂಡಿರಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ(Astrology) ಇದಕ್ಕೆ ಕಾರಣಗಳಿವೆ.
 

Tap to resize

ಕೆಲವೊಮ್ಮೆ ನಾವು ಸರಿಯಾದ ಸಮಯದಲ್ಲಿ ಕೆಲಸಕ್ಕೆ ಸೇರದೇ ಇರೋದೆ ಕೆಲಸದಲ್ಲಿ ಹಲವು ಸಮಸ್ಯೆಗೆ ಕಾರಣವಾಗುತ್ತೆ. ಆದುದರಿಂದ ನಿಮ್ಮ ಜೋಯಿನಿಂಗ್ ಗೆ(Joining) ಅನುಕೂಲಕರವಲ್ಲದ ಮುಹೂರ್ತದಲ್ಲಿ ನೀವು ಕೆಲಸಕ್ಕೆ ಸೇರುತ್ತಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಸರಿಯಾದ ಮುಹೂರ್ತದಲ್ಲಿ ಕೆಲಸಕ್ಕೆ ಸೇರಿದರೆ ಮಾತ್ರ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತೆ.
 

ಶನಿವಾರ(Saturday) ಬೆಸ್ಟ್
ನೀವು ಯಾವುದೇ ಒಂದು ಉದ್ಯೋಗ ಅಥವಾ ಸಂಸ್ಥೆಯಲ್ಲಿ  ದೀರ್ಘಕಾಲದವರೆಗೆ ಸಂಪರ್ಕದಲ್ಲಿರಲು ಅಥವಾ ಕೆಲಸ ಮಾಡಲು ಬಯಸಿದರೆ, ಶನಿವಾರವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯುತ್ತಮ ದಿನವೆಂದು ಪರಿಗಣಿಸಲಾಗುತ್ತೆ. ಈ ದಿನ ಕೆಲಸಕ್ಕೆ ಸೇರಿದರೆ ಉತ್ತಮ ರೀತಿಯಲ್ಲಿ ನೀವು ಒಂದು ಕಚೇರಿಯಲ್ಲಿ ಕೆಲಸ ಮಾಡಬಹುದು ಎನ್ನಲಾಗುತ್ತೆ.

ನಂಬಿಕೆಯ ಪ್ರಕಾರ, ಶನಿವಾರ ಯಾವುದೇ ಕೆಲಸಕ್ಕೆ ಜಾಯಿನ್ ಆದ್ರೆ  ದೀರ್ಘಕಾಲದವರೆಗೆ ಸಂಸ್ಥೆಯಲ್ಲಿ ಸ್ಥಿರತೆಯನ್ನು ಹೊಂದುತ್ತೀರಿ. ನೀವು ಶನಿವಾರ ಯಾವುದೇ ಕೆಲಸಕ್ಕೆ  ಸೇರಬಹುದು. ಅದು ನಿಮಗೆ ಶುಭ ತರುತ್ತೆ. ಈ ಟ್ರಾನ್ಸ್ ಫರ್(Transfer), ಅಮಾನತು ಯಾವುದನ್ನು ಸಹ ನೀವು ಎದುರಿಸಬೇಕಾಗಿರೋದಿಲ್ಲ.
 

ನೀವು ಗುರುವಾರವೂ(Thursday) ಕೆಲಸಕ್ಕೆ ಸೇರಬಹುದು.
ಕೆಲವು ಸಮಸ್ಯೆಗಳಿಂದಾಗಿ ಶನಿವಾರ ಕೆಲಸಕ್ಕೆ ಸೇರೋದು ಅನೇಕ ಬಾರಿ ಕಷ್ಟವಾಗಬಹುದು, ಆದರೆ ಭಯಪಡುವ ಅಗತ್ಯವಿಲ್ಲ. ನೀವು ಶನಿವಾರ ನಿಮ್ಮ ಕೆಲಸಕ್ಕೆ ಸೇರಲು ಸಾಧ್ಯವಾಗದಿದ್ದರೆ, ನೀವು ಗುರುವಾರವೂ ಸೇರಬಹುದು. ಇದು ಕೂಡ ಕೆಲಸಕ್ಕೆ ಸೇರಲು ಶುಭ ದಿನ.    

ಮಿಲಿಟರಿ, ಕಂದಾಯ, ವೈದ್ಯಕೀಯ, ವಿದ್ಯುತ್ ಕೆಲಸಗಳಿಗೆ ಸಂಬಂಧಿಸಿದ ಜನರು ಗುರುವಾರದಂದು ಕೆಲಸಕ್ಕೆ ಸೇರೋದರಿಂದ ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. ಹಾಗಾಗಿ ನಿಮ್ಮ ಕೆಲಸ ಪರ್ಮನೆಂಟ್ (Permanant)ಆಗಿರಬೇಕಂದ್ರೆ ಸರಿಯಾದ ದಿನದಂದು ಕೆಲಸಕ್ಕೆ ಜಾಯಿನ್ ಆಗೋದು ಬಹಳ ಮುಖ್ಯ.  
 

Latest Videos

click me!