ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಲಕ್ಷ್ಮಿ ದೇವಿಯು (Lakshmi Devi) ತುಳಸಿ ಗಿಡದಲ್ಲಿ ವಾಸಿಸುತ್ತಾಳೆ ಎಂದು ಸಹ ಹೇಳಲಾಗುತ್ತದೆ. ಹಾಗಾಗಿಯೇ ತುಳಸಿ ಗಿಡವನ್ನು ನಿತ್ಯ ಪೂಜಿಸುವುದರಿಂದ ಲಕ್ಷ್ಮಿ ದೇವಿಯು ಸಂತೋಷಗೊಂಡು, ನಿಮಗೆ ಆಶೀರ್ವಾದ ನೀಡುತ್ತಾಳೆ.
27
ಒಂದು ವೇಳೆ ನೀವು ನೀವು ಆರ್ಥಿಕ ಬಿಕ್ಕಟ್ಟನ್ನು (financial crisis) ಎದುರಿಸುತ್ತಿದ್ದರೆ ಖಂಡಿತವಾಗಿಯೂ ತುಳಸಿ ಎಲೆಗಳ ಪರಿಹಾರವನ್ನು ಮಾಡಬಹುದು. ಈ ಪರಿಹಾರಗಳು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬಹುದು. ಅಷ್ಟೇ ಅಲ್ಲ ಇದು ನಿಮ್ಮನ್ನ ಶ್ರೀಮಂತರನ್ನಾಗಿ ಸಹ ಮಾಡಬಹುದು.
37
ಒಂದು ವೇಳೆ ನೀವೇನಾದ್ರೂ ಹಣದ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಪರ್ಸ್‌ನಲ್ಲಿ ಒಂದು ತುಳಸಿ ಎಲೆಯನ್ನು ಇಟ್ಟುಕೊಳ್ಳಬೇಕು. ಹೌದು, ಈ ತುಳಸಿ ಎಲೆಯಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗುತ್ತೆ.
ನಿಮ್ಮ ಪರ್ಸ್‌ನಲ್ಲಿ ತುಳಸಿ ಎಲೆಯನ್ನು ಇಟ್ಟುಕೊಳ್ಳುವುದರಿಂದ ಆರ್ಥಿಕ ಸಮಸ್ಯೆಗಳು (financial problem) ದೂರವಾಗುತ್ತವೆ , ಅಷ್ಟೇ ಅಲ್ಲ ಸಂಪತ್ತು ಗಳಿಸುವ ಬಾಗಿಲು ತೆರೆಯುತ್ತದೆ. ಎಲ್ಲಾ ಕಡೆಯಿಂದ ನಿಮಗೆ ಹಣವು ಹರಿದು ಬರೋದಕ್ಕೆ ಶುರುವಾಗುತ್ತೆ.
57
ಇದಲ್ಲದೇ ನೀವು ಸಾಲದಿಂದ ಮುಕ್ತಿ ಪಡೆಯಬೇಕು ಎಂದು ಬಯಸಿದ್ರೆ, ಪ್ರತಿದಿನ ಬೆಳಿಗ್ಗೆ ತುಳಸಿಯನ್ನು ಪೂಜಿಸಿ ಮತ್ತು ಅದರ ಒಂದು ಎಲೆಯನ್ನು ತೆಗೆದುಕೊಂಡು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಿ. ಇದರಿಂದ ನಿಮ್ಮೆಲ್ಲಾ ಸಮಸ್ಯೆ ಆದಷ್ಟು ಬೇಗನೆ ನಿವಾರಣೆಯಾಗುತ್ತೆ.
67
ಇನ್ನು ಕಷ್ಟಪಟ್ಟು ದುಡಿದ ನಂತರವೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಎಂದಾದರೆ, ಅಥವಾ ನಿಮಗೆ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಸಿಗದಿದ್ದರೆ, ತುಳಸಿ ಎಲೆಯನ್ನು ತೆಗೆದುಕೊಂಡು, ಅದನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ನಿಮ್ಮ ಪರ್ಸ್‌ನಲ್ಲಿ ಇರಿಸಿ.
77
ಇದೆಲ್ಲಾ ಮಾಡುವಾಗ ಈ ಒಂದು ವಿಷಯ ನೆನಪಿರಲಿ, ಈ ತುಳಸಿ ಪರಿಹಾರವನ್ನು ಮಾಡುವಾಗ ಯಾರಿಗೂ ಹೇಳಬೇಡಿ ಮತ್ತು ಸದ್ದಿಲ್ಲದೆ ಈ ಪರಿಹಾರವನ್ನು ಮಾಡಿ.. ಇದರಿಂದ ನಿಮಗೆ ಹೆಚ್ಚಿನ ಫಲ ಸಿಗುತ್ತೆ ನೆನಪಿರಲಿ.