ಏಪ್ರಿಲ್ ತಿಂಗಳಾದ್ಯಂತ ಈ ರಾಶಿಗೆ ಭರ್ಜರಿ ಅದೃಷ್ಟ, ಈ ರಾಶಿಗೆ ಕಷ್ಟ-ಕಷ್ಟ
ವಿಶ್ವಾವಸು ಸಂವತ್ಸರದ ಮೊದಲ ತಿಂಗಳು ಏಪ್ರಿಲ್, 12 ರಾಶಿಗೆ ಹೇಗಿದೆ? ಯಾರಿಗೆ ಅದೃಷ್ಟ ಎಂದು ಜ್ಯೋತಿಷ್ಯ ತಜ್ಞ ಹರೀಶ್ ಕಶ್ಯಪ್ ಹೇಳಿದ್ದಾರೆ.
ವಿಶ್ವಾವಸು ಸಂವತ್ಸರದ ಮೊದಲ ತಿಂಗಳು ಏಪ್ರಿಲ್, 12 ರಾಶಿಗೆ ಹೇಗಿದೆ? ಯಾರಿಗೆ ಅದೃಷ್ಟ ಎಂದು ಜ್ಯೋತಿಷ್ಯ ತಜ್ಞ ಹರೀಶ್ ಕಶ್ಯಪ್ ಹೇಳಿದ್ದಾರೆ.
ಮೇಷ ರಾಶಿಗೆ ಅಭಿವೃದ್ಧಿ ವರ್ಚಸ್ಸು ಹೆಚ್ಚುವುದು. ಧರ್ಮ ಕಾರ್ಯಗಳಲ್ಲಿ ತೊಡಗುವಿರಿ. ಜನ್ಮ ಶನಿ ಇದ್ದು ನಿತ್ಯ ಶ್ರೀ ಹನುಮಂತನ ದೆವರ ಪೂಜಿಸಿ.
ವೃಷಭ ರಾಶಿಗೆ ನಿಧಾನ ಪ್ರಗತಿಯಿದೆ, ಪ್ರಯತ್ನ ಮತ್ತು ತಾಳ್ಮೆ ಇರಲಿ. ಖರ್ಚಿನ ಮೇಲೆ ಗಮನವಿರಲಿ. ಶ್ರೀ ದುರ್ಗೆ ಪೂಜಿಸಿರಿ.
ಮಿಥುನ ರಾಶಿಗೆ ಜನ್ಮ ಕುಜ ಬಾಧೆಯಿದ್ದು ತಾಳ್ಮೆ ಇರಲಿ. ವ್ಯವಹಾರ ನಿಧಾನ, ಆದಾಯ ಕಷ್ಟವಾದೀತು. ಶ್ರೀ ಕುಲ ದೇವರ ದರ್ಶನ ಮಾಡಿ.
ಕರ್ಕ ರಾಶಿಗೆ ರವಿ ಚಂದ್ರ ಗುರುನಿಂದ ಶುಭವಾಗುತ್ತೆ. ಖ್ಯಾತಿ ಮನ್ನಣೆ ಸಿಗುತ್ತೆ. ಆದಾಯ ಉತ್ತಮವಾಗಿರುತ್ತೆ. ಶ್ರೀ ಸುಬ್ರಮಣ್ಯ ಸೇವೆ ಮಾಡಿ.
ಸಿಂಹ ರಾಶಿಗೆ ಸ್ಪರ್ಧೆಗಳು ಏರ್ಪಡುವ ತಿಂಗಳು, ನಿಮ್ಮ ಅನುಭವ ತಾಳ್ಮೆ ಕೆಲಸಕ್ಕೆ ಬರುವುದು. ಶ್ರೀ ದರ್ಗೆ, ನಾಗದೇವರ ಪೂಜಿಸಿ.
ಕನ್ಯಾ ರಾಶಿಯವರು ಹಲವು ಆಕಾಂಕ್ಷೆಗಳನ್ನು ಪೂರೈಸಲು ಸಾಹಸದಿಂದ ಮುನ್ನಡೆಯಿರಿ ಒಳ್ಳೆಯದಾಗುತ್ತೆ. ಶ್ರೀ ದುರ್ಗೆ, ಗಣಪತಿ ದೇವರ ಪೂಜಿಸಿ.
ತುಲಾ ರಾಶಿಗೆ ಶುಭ ಕಾರ್ಯಗಳಲ್ಲಿ ಪ್ರಗತಿ, ಕುಟುಂಬದಲ್ಲಿ ವೈಮನಸ್ಸು ಬಾರದಂತೆ ಎಚ್ಚರ ವಹಿಸಿ. ಶ್ರೀ ಕುಲದೇವರ ದರ್ಶನ ಮಾಡಿ.
ವೃಶ್ಚಿಕ ರಾಶಿಗೆ ಹಲವು ಸವಾಲುಗಳು, ಅನುಭವಗಳ ಪರೀಕ್ಷೆಯ ತಿಂಗಳು. ಆತುರ ನಿರ್ಧಾರ, ಮಾತು ಮಾರಕ ವಾದೀತು ಎಚ್ಚರ. ಶ್ರೀ ನವಗ್ರಹ ಪೂಜಿಸಿ.
ಧನು ರಾಶಿಗೆ ಬಹು ಕೆಲಸ, ಬಹು ತಿರುಗಾಟದ ತಿಂಗಳು. ಒತ್ತಡಗಳ ಮಾಸ, ಆರೋಗ್ಯದ ಕಡೆ ಗಮನವಿರಲಿ, ಈಶ್ವರನನ್ನು ಪೂಜಿಸುತ್ತಿರಿ.
ಮಕರ ರಾಶಿಗೆ ಹಲವು ವ್ಯಾಜಗಳು ಪರಿಹಾರದತ್ತ ಸಾಗುತ್ತೆ. ಆದಾಯ ಉತ್ತಮವಾಗಿರುತ್ತೆ, ಆರ್ಥಿಕ ಅಭಿವೃದ್ದಿ. ಶ್ರೀ ನರಸಿಂಹ, ವರಹದೇವರ ದರ್ಶನ.
ಕುಂಭ ರಾಶಿಗೆ ಯಾತ್ರೆ, ಅಲೆದಾಟಗಳು ಜಾಸ್ತಿಯಾಗುತ್ತೆ ಖರ್ಚು ವೆಚ್ಚಗಳ ಮಾಸ, ಉದ್ಯೋಗ ವಾಸ ಬದಲು ಅವಕಾಸ. ಅಶ್ವತ್ಥ ಪ್ರದಕ್ಷಿಣೆ ಮಾಡಿರಿ.
ಮೀನ ರಾಶಿಯವರು ಆಸೆ ಆಮಿಷವಾಗದಂತೆ ಎಚ್ಚರ ವಹಿಸಿ. ಧ್ಯಾನ ಮಾಡಿರಿ ಒಳ್ಳೆಯದಾಗುತ್ತೆ, ಹೆದರ ಬೇಡಿ, ಶ್ರೀ ನವಗ್ರಹ ಶಾಂತಿ ಮಾಡಿರಿ.