Chanakya Niti: ಪುರುಷರು ಮತ್ತು ಮಹಿಳೆಯರು ಈ ರಹಸ್ಯ ಯಾರಿಗೂ ಹೇಳಬಾರದು!

First Published | Dec 13, 2022, 3:54 PM IST

ಆಚಾರ್ಯ ಚಾಣಕ್ಯನು ಪುರುಷರು ಮತ್ತು ಮಹಿಳೆಯರ ಬಗ್ಗೆ ಕೆಲವು ವಿಷಯಗಳನ್ನು ಹೇಳಿದ್ದಾನೆ. ಚಾಣಕ್ಯ ನೀತಿಯ ಪ್ರಕಾರ, ಪುರುಷರು ಮತ್ತು ಮಹಿಳೆಯರು ತಮ್ಮ ರಹಸ್ಯವನ್ನು ಎಂದಿಗೂ ಯಾರ ಮುಂದೆಯೂ ಹೇಳಬಾರದು, ಇಲ್ಲದಿದ್ದರೆ ಭವಿಷ್ಯದಲ್ಲಿ ತೊಂದರೆ ಉಂಟಾಗಬಹುದು. ಹಾಗಾಗಿ ಅವರು ಯಾವೆಲ್ಲಾ ವಿಷಯಗಳ ಬಗ್ಗೆ ಹೇಳಿದ್ದಾರೆ ನೋಡೋಣ.  

ಆಚಾರ್ಯ ಚಾಣಕ್ಯನು (Chanakya) ಒಬ್ಬ ನುರಿತ ರಾಜಕಾರಣಿ. ಅವನು ನೈತಿಕತೆಯಲ್ಲಿ ಜೀವನದ ಅನೇಕ ಅಂಶಗಳನ್ನು ಎತ್ತಿ ತೋರಿಸಿದ್ದಾನೆ. ನೈತಿಕತೆಯಲ್ಲಿ ವಿಧಿಸಲಾದ ನೀತಿಗಳನ್ನು ಅನುಸರಿಸಿದ್ರೆ, ಜೀವನದಲ್ಲಿ ಯಾವುದೇ ತೊಂದರೆ ಇರೋದಿಲ್ಲ. ಆದ್ದರಿಂದ ಜನರು ಯಾವಾಗಲೂ ನೈತಿಕತೆಯ ಬಗ್ಗೆ ಕುತೂಹಲ ಹೊಂದಿದ್ದಾರೆ. 

ಅನೇಕರು ನೈತಿಕತೆಯ ಪ್ರಕಾರ ವರ್ತಿಸಲು ಪ್ರಯತ್ನಿಸುತ್ತಾರೆ. ಆಚಾರ್ಯ ಚಾಣಕ್ಯನು ಪುರುಷರು ಮತ್ತು ಮಹಿಳೆಯರ ಬಗ್ಗೆ ಕೆಲವು ವಿಷಯಗಳನ್ನು ಹೇಳಿದ್ದಾನೆ. ಚಾಣಕ್ಯ ನೀತಿಯ ಪ್ರಕಾರ, ಪುರುಷರು ಮತ್ತು ಮಹಿಳೆಯರು ತಮ್ಮ ರಹಸ್ಯವನ್ನು(Secrete) ಎಂದಿಗೂ ಯಾರ ಮುಂದೆಯೂ ಹೇಳಬಾರದು, ಇಲ್ಲದಿದ್ದರೆ ಭವಿಷ್ಯದಲ್ಲಿ ತೊಂದರೆ ಉಂಟಾಗಬಹುದು, ಎಂದು ಕಿವಿಮಾತು ಹೇಳುತ್ತಾನೆ.

Tap to resize

ಪುರುಷರು ಮತ್ತು ಮಹಿಳೆಯರು ಈ ವಿಷಯಗಳನ್ನು ಮರೆಮಾಚಬೇಕು.

ಆಚಾರ್ಯ ಚಾಣಕ್ಯನ ಪ್ರಕಾರ, ವಿವಾಹದ(Marriage) ನಂತರ ಪುರುಷ ಮತ್ತು ಮಹಿಳೆಯ ನಡುವೆ ಜಗಳವಿದ್ದರೆ, ಅದನ್ನು ತಮ್ಮೊಳಗೆ ಪರಿಹರಿಸಿಕೊಳ್ಳಿ. ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಯಾರಿಗೂ ಹೇಳಬೇಡಿ. ಹಾಗೆ ಮಾಡೋದರಿಂದ ನಿಮ್ಮ ಜೀವನದಲ್ಲಿ ತೊಂದರೆಗಳು ಉಂಟಾಗಬಹುದು.

- ನೀವು ಯಾವುದೇ ಹಾನಿಯನ್ನು ಅನುಭವಿಸಿದರೆ, ಅದನ್ನು ಎಂದಿಗೂ ಯಾರ ಮುಂದೆಯೂ ವ್ಯಕ್ತಪಡಿಸಬೇಡಿ.ಯಾಕಂದ್ರೆ ಇತರರು ನಷ್ಟದ ಬಗ್ಗೆ ದುಃಖವಾದವರ ಹಾಗೆ ನಾಟಕವಾಡುತ್ತಾರೆ (Drama), ಆದರೆ ನಿಜವಾಗಿಯೂ ಸಂತೋಷವಾಗಿರ್ತ್ತಾರೆ.

ಯಾರಾದರೂ ನಿಮ್ಮನ್ನು ಅವಮಾನಿಸಿದ್ರೆ ಅಥವಾ ನೋಯಿಸಿದ್ರೆ, ಯಾರಿಗೂ ಹೇಳಬೇಡಿ. ಯಾಕಂದ್ರೆ ನೀವು ಈ ಕಥೆಯನ್ನು ಹೇಳಲು ಹೊರಟಿರುವ ವ್ಯಕ್ತಿ ನಿಮ್ಮ ಬಗ್ಗೆ ವಿಭಿನ್ನವಾಗಿ ಯೋಚಿಸಬಹುದು. ಕೊನೆಗೆ ನೀವೆ ಕೆಟ್ಟವರಾಗುವ ಸಾಧ್ಯತೆ ಇದೆ. ಆದುದರಿಂದ ಈ ತಪ್ಪು ಮಾಡಬೇಡಿ.

ಚಾಣಕ್ಯನು ನಿಮ್ಮ ಮನೆಯ ರಹಸ್ಯಗಳನ್ನು ಎಂದಿಗೂ ಯಾರಿಗೂ ಹೇಳಬಾರದು ಎಂದು ಹೇಳುತ್ತಾನೆ. ಇದನ್ನು ಮಾಡೋದರಿಂದ, ನೀವು ಮೋಸಕ್ಕೆ ಬಲಿಪಶುವಾಗಬಹುದು. ನಿಮ್ಮ ಮನೆಯ ರಹಸ್ಯಗಳನ್ನು ತಿಳಿದ ಹೆಚ್ಚಿನ ಜನರು ಒಂದಲ್ಲ, ಒಂದು ರೀತಿಯಲ್ಲಿ ಅದರ ಲಾಭ ಪಡೆದುಕೊಳ್ಳುತ್ತಾರೆ. ಆದುದರಿಂದ ಈ ಬಗ್ಗೆ ಹೇಳದೆ ಇದ್ದರೇನೆ ಸರಿ.

ಅಷ್ಟೇ ಅಲ್ಲ ಆಚಾರ್ಯ ಚಾಣಕ್ಯನ ಪ್ರಕಾರ, ಯಾವುದೇ ಪುರುಷ ಮತ್ತು ಮಹಿಳೆ ತಮ್ಮ ಹಣದ ರಹಸ್ಯದ (Money secrete) ಬಗ್ಗೆ ಹೇಳಬಾರದು. ಇದರಿಂದ, ನೀವು ಆರ್ಥಿಕ ನಷ್ಟ ಎದುರಿಸಬೇಕಾಗಬಹುದು ಎಂದು ಹೇಳಿದ್ದಾನೆ. ಕೆಲವೊಮ್ಮೆ ಜನರು ನಿಮ್ಮ ಹಣವನ್ನು ವಂಚಿಸಲು ಪ್ರಯತ್ನಿಸಬಹುದು, ಜೊತೆಗೆ ನಿಮಗೆ ಮೋಸವನ್ನು ಸಹ ಮಾಡಬಹುದು. 

Latest Videos

click me!