ಅಂಬಾನಿ ಮನೆಯಲ್ಲಿ ನಡೆಯುತ್ತೆ ಆಮ್ ಮನೋರತ್; ಮಾವಿನಹಣ್ಣಿನ ಈ ಸಂಪ್ರದಾಯದಿಂದಲೇ ಶ್ರೀಮಂತಿಕೆ ಹೆಚ್ಚುತಿದ್ಯಾ?

First Published | Apr 28, 2024, 10:27 AM IST

ಶ್ರೀ ಕೃಷ್ಣನಿಗೂ ಮಾವಿನಹಣ್ಣುಗಳಿಗೂ ಸಂಬಂಧಿಸಿದ ಕತೆಯೊಂದಿದೆ. ಆ ಕತೆಗೂ ಅಂಬಾನಿ ಕುಟುಂಬದ ಆಮ್ ಮನೋರತ್ ಆಚರಣೆಗೂ ಕೂಡಾ ಸಂಬಂಧ ಇದೆ.

ಮುಖೇಶ್ ಅಂಬಾನಿ ಉದ್ಯಮಿ ಎಂಬುದು ನಿಮಗೆ ಗೊತ್ತು. ಆದರೆ, ಅವರು ಜಮೀನು ತೋಟ ಎಲ್ಲವನ್ನೂ ಹೊಂದಿದ್ದಾರೆ ಎಂದು ಗೊತ್ತೇ?  ಅವರು ಜಾಮ್‌ನಗರ ರಿಲಯನ್ಸ್ ರಿಫೈನರಿ ಕಾಂಪ್ಲೆಕ್ಸ್‌ನಲ್ಲಿ ಧೀರೂಭಾಯಿ ಅಂಬಾನಿ ಲಖಿಬಾಗ್ ಅಮ್ರಾಯೀ, ಅಂದರೆ ಮಾವಿನ ತೋಟ ರಚಿಸಿದ್ದಾರೆ. ಇದು ಸರಿಸುಮಾರು 600 ಎಕರೆಗಳಲ್ಲಿ ಹರಡಿದೆ.

 ಇಲ್ಲಿ ಉತ್ಪತ್ತಿಯಾಗುವ ಹೆಚ್ಚಿನ ಮಾವುಗಳನ್ನು ರಫ್ತು ಮಾಡಲಾಗುತ್ತದೆ. ಅದಕ್ಕೂ ಮುನ್ನ ಅಂಬಾನಿ ಕುಟುಂಬ 'ಆಮ್ ಮನೋರತ್' ಎಂಬ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಸಂಪ್ರದಾಯವಿದೆ. ಈ ಸಂಪ್ರದಾಯವು ಶ್ರೀಕೃಷ್ಣನಿಗೂ ಸಂಬಂಧವನ್ನು ಹೊಂದಿದೆ.
 

Tap to resize

ಹೌದು, ಅಂಬಾನಿ ಕುಟುಂಬ ಶ್ರೀಕೃಷ್ಣನ ಭಕ್ತರು. ಅವರು ವಿಶೇಷವಾಗಿ ರಾಜಸ್ಥಾನದ ಶ್ರೀನಾಥ್‌ಜಿ ದೇವಸ್ಥಾನವನ್ನು ನಂಬಿದ್ದಾರೆ. ಅದು ಅವರ ಮನೆದೇವರು ಕೂಡಾ. ಅವರು ಆಗಾಗ್ಗೆ ಪ್ರಾರ್ಥನೆ ಮತ್ತು ಆಚರಣೆಗಳಿಗಾಗಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯಕ್ಕೆ ಸಂಬಂಧಿಸಿದ ಸಂಪ್ರದಾಯವನ್ನು ಅವರ ಆಂಟಿಲಿಯಾ ನಿವಾಸದಲ್ಲಿಯೂ ಆಚರಿಸಲಾಗುತ್ತದೆ.

ಆಮ್ ಮನೋರತ್
ಆಂಟಿಲಿಯಾದಲ್ಲಿರುವ ಕೃಷ್ಣ ದೇವಸ್ಥಾನದಲ್ಲಿ, ಅಂಬಾನಿ ಕುಟುಂಬವು ಪ್ರತಿ ವರ್ಷ 'ಆಮ್ ಮನೋರತ್' ಆಚರಿಸುತ್ತದೆ. 

ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು ಸಿದ್ಧತೆಗಳನ್ನು ನಿಕಟವಾಗಿ ನೋಡಿಕೊಳ್ಳುತ್ತಾರೆ. ಈ ಹಬ್ಬದ ಸಮಯದಲ್ಲಿ, ಮಾವಿನಹಣ್ಣಿನ ಮೊದಲ ಸುಗ್ಗಿಯನ್ನು ಶ್ರೀ ಕೃಷ್ಣನ ವಿಗ್ರಹಕ್ಕೆ ಅರ್ಪಿಸಲಾಗುತ್ತದೆ. ಅಂದ ಹಾಗೆ ದೇಶದಲ್ಲಿ ಮಾವಿನಹಣ್ಣಿನ ಅತಿ ದೊಡ್ಡ ಉತ್ಪತ್ತಿ ರಿಲಯನ್ಸ್‌ನಿಂದಲೇ ಆಗುತ್ತದೆ.
 

ಈ ಸಂದರ್ಭದಲ್ಲಿ ಆಂಟಿಲಿಯಾದಲ್ಲಿರುವ ಕೃಷ್ಣ ದೊಡ್ಡ ಪೂಜಾಗೃಹವು ಮಾವಿನಹಣ್ಣುಗಳಿಂದ ಅಲಂಕರಿಸಲ್ಪಡುತ್ತದೆ. ಕೃಷ್ಣನಿಗೂ ಮಾವನ್ನೇ ಏರಿಸಲಾಗುತ್ತದೆ, ಅದನ್ನೇ ನೈವೇದ್ಯ ಮಾಡಲಾಗುತ್ತದೆ. ಈ ಹಬ್ಬಕ್ಕೆ ವಿಶೇಷವಾಗಿ ಜಾಮ್‌ನಗರದ ರಿಲಯನ್ಸ್ ತೋಟಗಳಿಂದ ಮಾವಿನಹಣ್ಣುಗಳನ್ನು ತರಲಾಗುತ್ತದೆ.
 

ಕೃಷ್ಣನಿಗೆ ಮಾವೆಂದರೆ ಪ್ರೀತಿ
ಭಗವಾನ್ ಶ್ರೀ ಕೃಷ್ಣನ ಮಾವಿನಹಣ್ಣಿನ ಬಗ್ಗೆ ಒಲವು ಹೊಂದಿರುವ ಜನಪ್ರಿಯ ಜಾನಪದ ಕಥೆಯಿದೆ. ಒಮ್ಮೆ, ಕೃಷ್ಣನು ಗೋಕುಲದಲ್ಲಿ ತನ್ನ ಅಂಗಳದಲ್ಲಿ ಆಟವಾಡುತ್ತಿದ್ದಾಗ ಒಬ್ಬ ಬಡ ಮಹಿಳೆ ಮಾವಿನಹಣ್ಣು ಮಾರುತ್ತಿರುವ ಸದ್ದು ಕೇಳಿದನು.

ಅವಳ ಧ್ವನಿಯನ್ನು ಕೇಳಿದ ಅವನು ಮಾವಿನಹಣ್ಣುಗಳನ್ನು ಕೊಳ್ಳಲು ತನ್ನ ಅಂಗೈಯಲ್ಲಿ ಒಂದು ಹಿಡಿ ಧಾನ್ಯಗಳೊಂದಿಗೆ ಅವಳ ಬಳಿಗೆ ಧಾವಿಸಿದನು. ಆದಾಗ್ಯೂ, ಅವನು ಅವಳನ್ನು ತಲುಪುವ ಹೊತ್ತಿಗೆ, ಕೆಲವು ಧಾನ್ಯಗಳು ಮಾತ್ರ ಆ ಪುಟ್ಟ ಕೈಲಿ ಉಳಿದಿತ್ತು. ಇದನ್ನು ತೆಗೆದುಕೊಂಡು ಹಣ್ಣು ಕೊಡುವಂತೆ ಪುಟ್ಟ ಕೃಷ್ಣ ಕೇಳಿದನು. 

ಅವನ ಮುಗ್ಧತೆಯನ್ನು ಕಂಡು ಆ ಹೆಂಗಸು ಅವನ ಅಂಗೈಗೆ ಹೊಂದುವಷ್ಟು ಮಾವಿನ ಹಣ್ಣುಗಳನ್ನು ಕೊಟ್ಟಳು. ಕೃಷ್ಣ ಖುಷಿಯಿಂದ ಅದನ್ನು ತೆಗೆದುಕೊಂಡು ಹೋದನು. ನಂತರ ಮಹಿಳೆ ಆತ ಕೊಟ್ಟ ಧಾನ್ಯವನ್ನು ಕೈಲಿ ನೋಡಿದಾಗ ಅವೆಲ್ಲವೂ ಬೆಲೆ ಬಾಳುವ ಆಭರಣವಾಗಿ ಮಾರ್ಪಟ್ಟಿತ್ತು. ಈ ಕಥೆಯು 'ಆಮ್ ಮನೋರತ್' ಆಚರಣೆಯನ್ನು ಪ್ರೇರೇಪಿಸುತ್ತದೆ.

दुनिया के सबसे महंगे घरों में से एक एंटीलिया की कीमत लगभग 12 हजार करोड़ रुपए है।

ಕೃಷ್ಣನಿಗೆ ಮಾವಿನಹಣ್ಣು ಕೊಟ್ಟರೆ ಆತ ಸಂಪತ್ತನ್ನು ಕೊಡುತ್ತಾನೆ ಎಂಬ ನಂಬಿಕೆ ಇದೆ. ಈಗ ಗೊತ್ತಾಯ್ತಾ ಅಂಬಾನಿ ಕುಟುಂಬ ಅಷ್ಟು ಶ್ರೀಮಂತವಾಗಿದ್ದು ಹೇಗೆ ಅಂತ!

Latest Videos

click me!