'ನೀತಿಶಾಸ್ತ್ರ' ಬರೆದ ಮಹಾ ಮೇಧಾವಿ ಚಾಣಕ್ಯ. ವಿಷ್ಣುಗುಪ್ತ ಎಂಬುವುದು ಇವನ ಮೂಲ ಹೆಸರು. ತಕ್ಷಶಿಲೆಯ ಬಡ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದವನು. ಕುರೂಪ ದೇಹ, ಬುದ್ಧಿವಂತ ಆಚಾರ್ಯ ಚಾಣಾಕ್ಯರನ್ನು ಜನ ಭಿನ್ನವಾಗಿ ಗುರುತಿಸುವ ಹಾಗೆ ಮಾಡಿತು. ಕೆಲವರು ಆತ ಬ್ರಹ್ಮಚಾರಿ ಎನ್ನುತ್ತಾರೆ. ಇನ್ನೂ ಕೆಲವರ ಪ್ರಕಾರ ಆತನಿಗೆ ಸುಶೀಲೆಯಾದ, ಸೌಂದರ್ವತಿಯಲ್ಲದ ಪತ್ನಿ ಇದ್ದಳೆಂದೂ ಹೇಳುತ್ತಾರೆ. ಹೆಂಡತಿ ಬಗ್ಗೆ ತನ್ನದೇ ನಿಲುವು ಹೊಂದಿದ್ದ ಚಾಣಕ್ಯ ಅಂಥಾ ಗುಣ ಸಂಪನ್ನೆ ಹುಡುಗಿಯನ್ನೇ ಹುಡುಕಿ ವಿವಾಹವಾದನಂತೆ. ಇಂಥ ಚಾಣಾಕ್ಯರು ಹೆಣ್ಮಕ್ಕಳ ಬಗ್ಗೆ ಸಾಕಷ್ಟು ಬಾರಿ ನೆಗೆಟಿವ್ ಮಾತುಗಳನ್ನೂ ಹೇಳಿದ್ದು ಆಧುನಿಕ ಮಹಿಳೆಗೆ ಕೊಂಚ ಇರಿಸುಮುರಿಸು ಉಂಟಾಗುವಂತಿರುತ್ತದೆ. ಇಂಥ ಚಾಣಕ್ಯ ದಾಂಪತ್ಯ ಚೆನ್ನಾಗಿರಬೇಕು ಅಂದ್ರೆ ಏನು ಮಾಡಬೇಕು ಅಂತ ಹೇಳಿದ್ದಾನೆ.