ಧನು ರಾಶಿಗೆ ಶುಕ್ರನು ತನ್ನ ಸ್ವಂತ ರಾಶಿಯಲ್ಲಿ ಮಹಾಲಕ್ಷ್ಮಿ ರಾಜಯೋಗವನ್ನು ರೂಪಿಸುವುದರಿಂದ, ಹೊಸ ಒಪ್ಪಂದಗಳು, ದಾಖಲೆಗಳಿಗೆ ಇದು ಉತ್ತಮ ಗ್ರಹ ಯೋಗವಾಗಿದೆ. ರಿಯಲ್ ಎಸ್ಟೇಟ್ ಕೆಲಸಗಳು ನಡೆಯಲಿದೆ. ವಹಿವಾಟು ಲಾಭದಾಯಕವಾಗಲಿದೆ. ಉದ್ಯೋಗ ವ್ಯವಹಾರದಲ್ಲಿ ಹೊಸ ಆಲೋಚನೆಗಳು ಮತ್ತು ಪರಿಕಲ್ಪನೆಗಳನ್ನು ಅಳವಡಿಸಲು ಉತ್ತಮ ಯೋಜನೆ ಮಾಡಬೇಕು. ಸಂಗಾತಿಯೊಂದಿಗೆ ಚೆನ್ನಾಗಿ ಹೊಂದಾಣಿಕೆಯಿರುತ್ತವೆ. ಕುರುಡಾಗಿ ಹಣ, ಖ್ಯಾತಿಯ ಹಿಂದೆ ಓಡಬೇಡಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ನಿಮ್ಮ ಸ್ವಂತ ವ್ಯವಹಾರ ಅಥವಾ ಪ್ರಗತಿಯಲ್ಲಿ ಕಷ್ಟಪಟ್ಟು ಪ್ರಯತ್ನಿಸಿ.