ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ಟಾಪ್ 5 ರೀಲ್ಸ್‌!

First Published | Jan 1, 2025, 11:23 AM IST

ಈಗೇನಿದ್ದರೂ ಸೋಶಿಯಲ್ ಮೀಡಿಯಾ ಜಮಾನ. ದಿನಕ್ಕೆ ಹತ್ತಾರು ವಿಡಿಯೋಗಳು ವೈರಲ್ ಆಗುತ್ತವೆ. ಟ್ರೋಲ್‌ಗಳು ಗಮನ ಸೆಳೆಯುತ್ತಿರುತ್ತವೆ. 2024ರಲ್ಲಿಯೂ ಅಂತಹ ಕೆಲ ಡೈಲಾಗ್, ವಿಡಿಯೋ, ಟ್ರೋಲ್‌ಗಳು ಟ್ರೆಂಡಿಂಗ್‌ನಲ್ಲಿದ್ದವು, ಅಲ್ಲದೇ ಲಕ್ಷಾಂತರ ಜನರನ್ನು ತಲುಪಿತ್ತು. ಈ ರೀತಿ ಕನ್ನಡದಲ್ಲಿ ಹವಾ ಸೃಷ್ಟಿಸಿದ ವೈರಲ್ ಕಂಟೆಂಟ್‌ಗಳ ಪಟ್ಟಿ ಇಲ್ಲಿದೆ.

ರಾಹುಲ್ಲಾ-ಬೆಳ್ಳುಳ್ಳಿ ಕಬಾಬ್: ಈ ವರ್ಷ ಸಿಕ್ಕಾಪಟ್ಟೆ ಸದ್ದು, ಸುದ್ದಿ ಮಾಡಿದ ರೀಲ್ಸ್ ಅಂದರೆ ಬೆಳ್ಳುಳ್ಳಿ ಕಬಾಬ್. ಹೋಟೆಲ್ ಉದ್ಯಮಿ, ಮಾಜಿ ಮೇಕಪ್ ಮ್ಯಾನ್ ಚಂದ್ರು ಯುಟ್ಯೂಬ್ ಚಾನೆಲ್ ನಲ್ಲಿ ಅಡುಗೆ ಮಾಡುವಾಗ ಸಹಾಯಕನಿಗೆ ರಾಹುಲ್ಲಾ ಅಲ್ಲಾಡಿಸಪ್ಪಾ ಎಂದಿದ್ದು ಭಾರೀ ವೈರಲ್ ಆಗಿತ್ತು. ಎಲ್ಲೆಲ್ಲೂ ರಾಹುಲ್ಲಾದ್ದೇ ಟ್ರೆಂಡ್ ಶುರುವಾಗಿತ್ತು .

ನಮ್ಮ ಮನ್ಸು ನಮ್ಮೆ ಒಳ್ಳೆದ್ ಮಾಡಿದ್ರೆ ದೇವು: 'ನಮ್ ಮನ್ಸು ನಮ್ಮೆ ಒಳ್ಳೇದ್ ಮಾಡುದ್ರೆ ದೇವು ಏನಂತೀರಾ?' ಈ ಡೈಲಾಗ್ ನಂತೂ ಬಹುತೇಕರು ಕೇಳಿರುತ್ತಾರೆ. ಇದೊಂದು ಡೈಲಾಗ್, ಇದೊಂದು ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈಗಲೂ ಒಮ್ಮೊಮ್ಮೆ ಮಾತಿನ ಮಧ್ಯೆ ಈ ಡೈಲಾಗ್‌ನನ್ನು ಆಗಾಗ ಉಚ್ಚರಿಸುವುದಂಟು.

Tap to resize

ಕರಿಮಣಿ ಮಾಲೀಕ: 2024ರಲ್ಲಿ ಜಾಲತಾಣದಲ್ಲಿ ಹೆಚ್ಚು ಸುದ್ದಿ ಮಾಡಿದ ಹಾಡುಗಳಲ್ಲಿ ಕರಿಮಣಿ ಮಾಲೀಕ ಕೂಡ ಹೌದು. ಉಪೇಂದ್ರ ಮತ್ತು ಪ್ರೇಮಾ ಅಭಿನಯದ ಸಿನಿಮಾ ವೊಂದರ 'ಏನಿಲ್ಲ ಏನಿಲ್ಲ ಕರಿಮಣಿ ಮಾಲೀಕ ನೀನಲ್ಲ ಎನ್ನುವ ಹಾಡು 25 ವರ್ಷಗಳ ಬಳಿಕ ವೈರಲ್ ಆಗಿತ್ತು.

ಶೆಡ್ಡಿಗೆ ಹೋಗೋಣಾ ಬಾ: ಪವಿತ್ರಾ ಗೌಡ ಜೈಲಿಗೆ ಹೋಗಿದ್ದಾಗ ಜೈಲಿನ ಬಳಿಯಿದ್ದ ಮಾಧ್ಯಮದವರಿಗೆ ಅವರ ತಮ್ಮ ನಿಮಗೆ ಮಾಡೋಕೆ ಕೆಲ್ಸ ಇಲ್ವಾ ಅಂತಾ ಕೇಳಿದ್ರು. ಆಗ ಮಾಧ್ಯಮದ ನಿರೂಪಕರೊಬ್ಬರು, ಇಲ್ಲ, ಬಾ ಶೆಡ್ ಗೆ ಹೋಗೋಣ, ಕುಂಟೆ ಬಿಲ್ಲೆ ಆಡೋಣ ಎಂದಿದ್ದರು. ಇದು ವೈರಲ್ ಆಯ್ತು.

ಜಾಲಿ ಜಾಲಿ ಎಲ್ಲ ಜಾಲಿ: ದುನಿಯಾ ವಿಜಯ್ ಅಭಿನಯದ ಭೀಮಾ ಸಿನಿ ಮಾದಲ್ಲಿ ಫೇಮಸ್ ಡೈಲಾಗ್. ಬಹಳ ಬೇಗ ಈ ಡೈಲಾಗ್ ವೈರಲ್ ಆಗಿತ್ತು. ಅದು ಇಂದಿಗೂ ಮುಂದುವರೆದಿದೆ.

Latest Videos

click me!