ಸ್ನೇಹಿತರ ಜೊತೆ ಮಹಾರಾಷ್ಟ್ರದಲ್ಲಿ D Boss: ರಿಲ್ಯಾಕ್ಸ್ ಮೂಡ್‌ನಲ್ಲಿ ದರ್ಶನ್!

Published : Sep 15, 2023, 10:32 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸ್ನೇಹಿತರ ಜೊತೆ ಮಹಾರಾಷ್ಟ್ರ ಪ್ರವಾಸ ಕೈಗೊಂಡಿರುವ ದರ್ಶನ್ ಟ್ರಕ್ಕಿಂಗ್ ಮಾಡುತ್ತಿರುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.  

PREV
15
ಸ್ನೇಹಿತರ ಜೊತೆ ಮಹಾರಾಷ್ಟ್ರದಲ್ಲಿ D Boss: ರಿಲ್ಯಾಕ್ಸ್ ಮೂಡ್‌ನಲ್ಲಿ ದರ್ಶನ್!

ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕಾಟೇರಾ ಸಿನಿಮಾದ ಚಿತ್ರೀಕರಣವನ್ನು ಬಹುತೇಕ ಪೂರ್ಣಗೊಳಿಸಿದ್ದು, ಇದೀಗ ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

25

ಹೌದು! ತಮ್ಮ ಸ್ನೇಹಿತರ ಜೊತೆ ಮಹಾರಾಷ್ಟ್ರ ಪ್ರವಾಸ ಕೈಗೊಂಡಿರುವ ದರ್ಶನ್ ಟ್ರಕ್ಕಿಂಗ್ ಮಾಡುತ್ತಿರುವ ಕೆಲವು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್  ವೈರಲ್ ಆಗಿದೆ.

35

ಇನ್ನೂ, ಮಹಾರಾಷ್ಟ್ರದಲ್ಲಿ ದರ್ಶನ್ ಯಾವ ಸ್ಥಳದಲ್ಲಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ದರ್ಶನ್ ಅವರ ಅಧಿಕೃತ ಫ್ಯಾನ್ಸ್​ ಪೇಜ್​ ಮಹಾರಾಷ್ಟ್ರದಲ್ಲಿರುವ ಫೋಟೋಗಳು ಎಂದು ಪೋಸ್ಟ್​ ಮಾಡಿವೆ. 

45

ತರುಣ್ ಸುಧೀರ್ ನಟನೆಯ ಕಾಟೇರಾ ಚಿತ್ರದಲ್ಲಿ ನಟ ದರ್ಶನ್ ನಟಿಸಿದ್ದು, ಟಾಕಿ ಪೋಷನ್ ಸಂಪೂರ್ಣವಾಗಿ ಮುಗಿಸಿದ್ದಾರೆ. ಸದ್ಯ ಮೂರು ಹಾಡುಗಳು ಮಾತ್ರ ಬಾಕಿಯಿದ್ದು, ಶೀಘ್ರದಲ್ಲೇ ಸಾಂಗ್ ಶೂಟಿಂಗ್ ಶುರು ಮಾಡಲಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ನಟಿಸಿದ್ದಾರೆ.

55

ಸ್ಟಾರ್ ಆಗಲಿ ಸ್ಟಾರ್ ಇಲ್ಲದೇ ಇರಲಿ‌ ಸಿನಿಮಾ‌ ದೊಡ್ಡದು. ನನ್ನ ಸಮಯ ಒಂದ್ ಸಿನಿಮಾಗೆ 85 ದಿನ ಮಾತ್ರ. ಸಿನಿಮಾದ 90% ಕೆಲಸ ಮುಗಿದಿದೆ. ಎಲ್ಲಿ ಪ್ರೀತಿ ಇರುತ್ತೋ ಅಲ್ಲಿ ಬಾಂಧವ್ಯ ಬೆಳೆಯುತ್ತೆ ಎಂದು ಕಾಟೇರಾ ಸಿನಿಮಾದ ಸುದ್ದಿಗೋಷ್ಟಿಯಲ್ಲಿ ದರ್ಶನ್ ಹೇಳಿದ್ದರು.

Read more Photos on
click me!

Recommended Stories