ಲಿಪ್‌ಲಾಕ್‌, ರೋಮಾನ್ಸ್‌ ಮಾಡೋದಿದ್ರೆ ಈ ನಟನ ಜೊತೆ ಮಾತ್ರ ಎಂದ ಸ್ಟಾರ್‌ ನಟಿ

Published : Mar 09, 2024, 08:06 PM IST

ತಮಿಳುನ ಪ್ರಖ್ಯಾತ ನಟಿ ಪ್ರಿಯಾ ಭವಾನಿ ಶಂಕರ್‌ ಹಾಟ್‌ ಸ್ಟೇಟ್‌ಮೆಂಟ್‌ ನೀಡಿದ್ದಾರೆ. ತೆರೆಯ ಮೇಲೂ ಸಭ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಈಕೆಗೆ ಇತ್ತೀಚೆಗೆ, ಹಾಗೇನಾದರೂ ತೆರೆಯ ಮೇಲೆ ಲಿಪ್‌ಲಾಕ್ ಮಾಡುವ ದೃಶ್ಯವಿದ್ದರೆ, ಯಾರ ಜೊತೆ ಮಾಡಲು ಇಷ್ಟಪಡುತ್ತೀರಿ? ಎನ್ನುವ ಪ್ರಶ್ನೆ ಕೇಳಲಾಗಿತ್ತು.  

PREV
114
ಲಿಪ್‌ಲಾಕ್‌, ರೋಮಾನ್ಸ್‌ ಮಾಡೋದಿದ್ರೆ ಈ ನಟನ ಜೊತೆ ಮಾತ್ರ ಎಂದ ಸ್ಟಾರ್‌ ನಟಿ

ತಮಿಳಿನ ನಟಿ ಪ್ರಿಯಾ ಭವಾನಿ ಶಂಕರ್‌ ಯಾರಿಗೆ ಗೊತ್ತಿಲ್ಲ ಹೇಳಿ. ಭವಿಷ್ಯದ ತ್ರಿಶಾ ಎಂದೇ ಗುರುತಿಸಿಕೊಂಡಿರುವ ಪ್ರಿಯಾ, ತಮ್ಮ ಸರಳ ಪಾತ್ರಗಳಿಂದಲೇ ಹೆಸರುವಾಸಿ.

214

ಟಿವಿ ನಿರೂಪಕಿಯಾಗಿದ್ದ ಪ್ರಿಯಾ ಭವಾನಿ ಶಂಕರ್‌ ನಂತರ ಚಿತ್ರರಂಗದಲ್ಲಿ ತಮ್ಮ ಅದೃಷ್ಟಪರೀಕ್ಷೆಗೆ ಇಳಿದು ಅದರಲ್ಲೂ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ.

314

ಇತ್ತೀಚೆಗೆ ನಟ ಗೋಪಿಚಂದ್‌ ಅವರೊಂದಿಗೆ ನಟಿಸಿರುವ ಭೀಮಾ ಚಿತ್ರ ತೆರೆಕಂಡಿದ್ದು, ಎಲ್ಲಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

414

ಧಾರವಾಹಿಗಳಲ್ಲಿ ನಟಿಸಿದ ಬಳಿಕ ಕಾಲಿವುಡ್‌ ಹಾಗೂ ಟಾಲಿವುಡ್‌ ಸಿನಿಮಾಗಳನ್ನೂ ತಮ್ಮ ನಟನೆಯಿಂದ ದೊಡ್ಡ ಮಟ್ಟದಲ್ಲಿ ಗಮನಸೆಳೆದಿದ್ದಾರೆ.

514

ಭೀಮಾ ಚಿತ್ರವನ್ನು ನಿರ್ದೇಶನ ಮಾಡಿದ್ದು ಕನ್ನಡಿಗ ಹರ್ಷ. ಭಜರಂಗಿ ಸಿನಿಮಾದ ಮೂಲಕ ದೊಡ್ಡ ಹೆಸರು ಸಂಪಾದನೆ ಮಾಡಿದ್ದ ಹರ್ಷ ನಿರ್ದೇಶನದ ಮೊದಲ ತೆಲುಗು ಚಿತ್ರ ಇದಾಗಿದೆ.

614

ಇತ್ತೀಚೆಗೆ ಈ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಇಡೀ ತಂಡ ಭಾಗಿಯಾಗಿತ್ತು. ಈ ವೇಳೆ ನಟಿ ಪ್ರಿಯಾ ಭವಾನಿ ಶಂಕರ್‌ಗೆ ಪ್ರಶ್ನೆಯೊಂದು ಕೇಳಲಾಗಿತ್ತು.

714

ಆನ್‌ಸ್ಕ್ರೀನ್‌ನಲ್ಲಿ ಕಿಸ್ಸಿಂಗ್‌ ಸೀನ್‌ನಲ್ಲಿ ಇನ್ನೂ ಭಾಗಿಯಾದ ನೀವು ಯಾರ ಜೊತೆ ಲಿಪ್‌ ಲಾಕ್‌ ದೃಶ್ಯ ಮಾಡಲು ಇಷ್ಟಪಡುತ್ತಿರಿ ಎಂದು ಪ್ರಶ್ನಿಸಲಾಗಿತ್ತು.

814

ಇದಕ್ಕೆ ಸ್ವಲ್ಪವೂ ಮುಜುರವಿಲ್ಲದೆ ಪ್ರಿಯಾ ಭವಾನಿ ಶಂಕರ್‌ ಉತ್ತರ ನೀಡಿದ್ದರು. ಅವರು ನೀಡಿರುವ ಉತ್ತರ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

914

ಆನ್‌ಸ್ಕ್ರೀನ್‌ನಲ್ಲಿ ಲಿಪ್‌ಲಾಕ್‌ ಹಾಗೂ ರೋಮ್ಯಾನ್ಸ್‌ ದೃಶ್ಯ ಮಾಡೋದಿದ್ದರೆ, ಅಲ್ಕು ಅರ್ಜುನ್‌ ಜೊತೆ ಮಾತ್ರ. ಅವರ ಹೊರತಾಗಿ ಯಾರ ಜೊತೆಯೂ ಮಾಡೋದಿಲ್ಲ ಎಂದಿದ್ದಾರೆ.

1014

ಬೇರೆ ಅವರ ಜೊತೆ ಈ ದೃಶ್ಯ ಮಾಡಲು ಕಸಿವಿಸಿ ಆಗುತ್ತದೆ. ಅದೇ ಅಲ್ಲು ಅರ್ಜುನ್‌ ಜೊತೆ ಆದರೆ ಖಂಡಿತವಾಗಿ ಲಿಪ್‌ಲಾಕ್‌, ರೋಮ್ಯಾನ್ಸ್‌ ಮಾಡುತ್ತೇನೆ ಎಂದಿದ್ದಾರೆ.

1114

ಅವರ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ಪಡ್ಡಹೈಕಳು ನಿಮ್ಮ ಲಿಪ್‌ಲಾಕ್‌ ದೃಶ್ಯವನ್ನೇ ನಾವು ಕಾಯ್ತಿದ್ದೇವೆ ಎಂದು ಕಾಮೆಂಟ್‌ ಮಾಡಿದ್ದಾರೆ.

 

1214

ದೂತ ವೆಬ್‌ಸಿರೀಸ್‌ನಲ್ಲಿ ನಟಿಸಿದ್ದ ಪ್ರಿಯಾ ಭವಾನಿ ಶಂಕರ್‌ ಅಲ್ಲಿಂದ ದೊಡ್ಡ ಮಟ್ಟದ ಹೆಸರು ಸಂಪಾದನೆ ಮಾಡಿದ್ದರು. ಇದರಲ್ಲಿ ಅವರ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

1314

ರತ್ನಂ ಹಾಗೂ ಇಂಡಿಯನ್‌ 2 ಸಿನಿಮಾದಲ್ಲಿಯೂ ಪ್ರಿಯಾ ಭವಾನಿ ಶಂಕರ್‌ ನಟಿಸಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

1414

ಮಾರ್ಚ್‌ 8 ರಂದು ಬಿಡುಗಡೆಯಾಗಿರುವ ಭೀಮಾ ಸಿನಿಮಾಗೆ ಎಲ್ಲಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾದಲ್ಲಿ ಪರಿ ಪಾತ್ರದಲ್ಲಿ ಪ್ರಿಯಾ ನಟಿಸಿದ್ದಾರೆ.

 

Read more Photos on
click me!

Recommended Stories