ರಾಗಿಣಿ ದ್ವಿವೇದಿ ಅವರು ಮಲ್ಲಿಗೆ ಹೂವನ್ನೇ ಬ್ಲೌಸ್ ಮಾಡಿಕೊಂಡಿದ್ದಾರೆ. ಬಂಗಾರದ ಬಣ್ಣದ ಡ್ರೆಸ್‌ನಲ್ಲಿ ಅವರು ಮಿಂಚಿದ್ದಾರೆ.
ರಾಗಿಣಿ ದ್ವಿವೇದಿ ಅವರ ಈ ಫೋಟೋಶೂಟ್‌ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಯುಗಾದಿ ಹಬ್ಬಕ್ಕೆ ಅವರು ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿದ್ದಾರೆ.
“ಹೊಸ ವರ್ಷ, ಹೊಸ ಚಾಪ್ಟರ್, ನಿರೀಕ್ಷೆಯೊಂದಿಗೆ- ಪ್ರತಿ ಮುಂಜಾವು ಹೊಸ ಅವಕಾಶಗಳನ್ನು ನೀಡುತ್ತದೆ. ಇದನ್ನೇ ಅದ್ಭುತವಾಗಿ ಮಾಡಿಕೊಳ್ಳಿ. ನಿಮ್ಮ ಬದುಕಿನಲ್ಲಿ ಯಶಸ್ಸು, ಸಮೃದ್ಧಿ ಸಿಗಲಿ” ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ.
ಕನ್ನಡ, ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಲಿರುವ ರಾಗಿಣಿ ದ್ವಿವೇದಿ ಅವರು ಐಟಂ ಡ್ಯಾನ್ಸ್‌ಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ʼಅವಳ ಬೂ ಇಷ್ಟ, ಅವಳ ವ್ಯೂ ಇಷ್ಟʼ ಎಂಬ ಆಲ್ಬಮ್ ಸಾಂಗ್‌ನಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು.
ಫ್ಯಾಷನ್ ವಿಚಾರದಲ್ಲಿ ರಾಗಿಣಿ ದ್ವಿವೇದಿ ಅವರು ಆಗಾಗ ಒಂದಲ್ಲ ಒಂದು ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈಗ ಅವರು ಮಲ್ಲಿಗೆ ಹೂ ಬಳಸಿ ಪ್ರಯೋಗ ಮಾಡಿದ್ದಾರೆ.
ರಾಗಿಣಿ ದ್ವಿವೇದಿ ಅವರ ಮಲ್ಲಿಗೆ ಹೂ ಅವತಾರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಸಾಕಷ್ಟು ಜನರು ಈ ಫೋಟೋಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.