ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹವಾ ಎಬ್ಬಿಸಿರುವ ಮೀನಾಕ್ಷಿ ಚೌಧರಿ, ದಳಪತಿ ವಿಜಯ್‌ ಹೊಸ ಚಿತ್ರಕ್ಕೆ ಫಿಕ್ಸ್‌!

Published : Oct 05, 2023, 07:24 PM IST

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮೀನಾಕ್ಷಿ ಚೌಧರಿ ಹವಾ ಎಬ್ಬಿಸಿದ್ದಾರೆ. ದಂತ ವೈದ್ಯೆಯಾಗಿರುವ ಮೀನಾಕ್ಷಿ ಚೌಧರಿ, ಮಾಡೆಲಿಂಗ್‌ ಕ್ಷೇತ್ರದಲ್ಲೂ ದೊಡ್ಡ ಹೆಸರು ಮಾಡಿದ್ದಾರೆ. ಇತ್ತೀಚೆಗೆ ದಳಪತಿ ವಿಜಯ್‌ ಅವರ ಹೊಸ ಚಿತ್ರಕ್ಕೆ ಹೀರೋಯಿನ್‌ ಅವಕಾಶ ಗಿಟ್ಟಿಸಿದ್ದಾರೆ.  

PREV
116
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹವಾ ಎಬ್ಬಿಸಿರುವ ಮೀನಾಕ್ಷಿ ಚೌಧರಿ, ದಳಪತಿ ವಿಜಯ್‌ ಹೊಸ ಚಿತ್ರಕ್ಕೆ ಫಿಕ್ಸ್‌!

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮೀನಾಕ್ಷಿ ಚೌಧರಿ ಸಖತ್‌ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ದಳಪತಿ ವಿಜಯ್‌ ಅವರ ದಳಪತಿ 68ಗೆ ಹೀರೋಯಿನ್‌ ಆಗಿ ಆಯ್ಕೆಯಾದ ಬಳಿಕ ಅವರ ಚಿತ್ರಗಳು ಇನ್ನಷ್ಟು ವೈರಲ್‌ ಆಗಿವೆ.

216

ಹರಿಯಾಣ ಮೂಲದ ಮೀನಾಕ್ಷಿ ಚೌಧರಿ ಈಗಾಗಲೇ ತೆಲುಗು ಚಿತ್ರದಲ್ಲಿ ಬೆರಳೆಣಿಕೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಖಿಲಾಡಿ, ಹಿಟ್‌, ಕೊಲೈ ಸಿನಿಮಾಗಳಲ್ಲಿ ನಟಿಸಿದ್ದರೂ ಅವರ ವೃತ್ತಿಜೀವನದಲ್ಲಿ ದೊಡ್ಡ ಅವಕಾಶ ವಿಜಯ್‌ ಅವರ ಚಿತ್ರ.
 

316


2021ರಲ್ಲಿ ಇಚ್ಚಾತ ವಾಹನಮುಲು ನಿಲುಪರದು ಸಿನಿಮಾದ ಮೂಲಕ ತೆಲುಗು ಸಿನಿಮಾ ಇಂಡಸ್ಟ್ರಿಗೆ ಬಂದ ಮೀನಾಕ್ಷಿ ಚೌಧರಿ ಅಲ್ಲಿಯವರೆಗೂ ಮಾಡೆಲಿಂಗ್‌ನಲ್ಲಿ ಹೆಸರು ಮಾಡಿದ್ದರು.

416

ಹರಿಯಾಣದ ಪಂಚಕುಲಾ ಮೂಲದವರಾದ ಮೀನಾಕ್ಷಿ ಚೌಧರಿಯ ತಂದೆ ದಿವಂಗತ ಬಿಆರ್‌ ಚೌಧರಿ ಭಾರತೀಯ ಸೇನೆಯಲ್ಲಿ ಕರ್ನಲ್‌ ಆಗಿ ಸೇವೆ ಸಲ್ಲಿಸಿದ್ದರು.

516

ರಾಜ್ಯಮಟ್ಟದ ಸ್ವಿಮ್ಮರ್‌ ಹಾಗೂ ಬ್ಯಾಡ್ಮಿಂಟನ್‌ ಆಟಗಾರ್ತಿ ಕೂಡ ಆಗಿರುವ ಮೀನಾಕ್ಷಿ ಚೌಧರಿ, ಪಂಜಾಬ್‌ನ ರಾಷ್ಟ್ರೀಯ ದಂತ ವೈದ್ಯ ಕಾಲೇಜಿನಲ್ಲಿ ದಂತಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದಿದ್ದಾರೆ.


 

616

2017ರಲ್ಲಿ ಇಂಡಿಯನ್‌ ಮಿಲಿಟರಿ ಅಕಾಡೆಮಿಯ ಬಾಲ್‌ ನೈಟ್‌ನಲ್ಲಿ ಮೀನಾಕ್ಷಿ ಚೌಧರಿ ಮಿಸ್‌ ಐಎಂಎ ಎಂದು ಗುರುತಿಸಲ್ಪಟ್ಟಿದ್ದರು.

716

ಅದಾದ ಬಳಿಕ 2018ರಲ್ಲಿ ಮಿಸ್‌ ಗ್ರ್ಯಾಂಡ್‌ ಇಂಟರ್‌ನ್ಯಾಷನ್‌ನಲ್ಲಿ ಮೊದಲ ರನ್ನರ್‌ಅಪ್‌ ಆಗಿದ್ದ ಮೀನಾಕ್ಷಿ ಚೌಧರಿ ಆ ಬಳಿಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು.

816

ಮೀನಾಕ್ಷಿ ಚೌಧರಿ ನಟನೆಯಲ್ಲಿ ಮಾತ್ರವಲ್ಲ ತಮ್ಮ ಫ್ಯಾಶನ್‌ ಮೂಲಕವೂ ಸಿನಿಮಾರಂಗದಲ್ಲಿ ಗಮನಸೆಳೆದಿದ್ದಾರೆ. ಅವರ ಫ್ಯಾಶನ್‌ ಟೇಸ್ಟ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

916

ಇತ್ತೀಚೆಗೆ ಅವರು ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಕೆಲವೊಂದು ಚಿತ್ರಗಳು ಅವರ ಫ್ಯಾಶನ್‌ ಟೇಸ್ಟ್‌ಗೆ ಸಾಕ್ಷಿಯಾಗಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ.

1016

ಅದು ಸೀರೆಯೇ ಆಗಿರಲಿ, ಮಾಡರ್ನ್‌ ಡ್ರೆಸ್‌ ಆಗಿರಲಿ.. ಎಲ್ಲಾ ತರಹದ ಬಟ್ಟೆಗಳಲ್ಲೂ ಮೀನಾಕ್ಷಿ ಚೌಧರಿ ತೆರೆಯ ಮೇಲೆ ಸೂಪರ್‌ ಆಗಿ ಕಾಣುತ್ತಿದ್ದಾರೆ.

1116

ದಳಪತಿ ವಿಜಯ್‌ ಮಾತ್ರವಲ್ಲ, ಮಹೇಶ್‌ ಬಾಬು ಅವರ ಗುಂಟೂರು ಖಾರಮ್‌ ಚಿತ್ರದಲ್ಲೂ ಮೀನಾಕ್ಷಿ ಚೌಧರಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

1216

ಇನ್ಸ್‌ಟಾಗ್ರಾಮ್‌ನಲ್ಲಿ ಕಪ್ಪು ಬಣ್ಣದ ಟಿಶರ್ಟ್‌ ಹಾಗೂ ಅದಕ್ಕೆ ಒಪ್ಪುವಂಥ ಟ್ರೌಶರ್‌ ಧರಿಸಿ ಅವರ ಸ್ಟೈಲಿಶ್‌ ಫೋಟೋಗಳನ್ನು ಫ್ಯಾನ್ಸ್‌ಗಳು ಬಹುವಾಗಿ ಮೆಚ್ಚಿದ್ದಾರೆ.

1316

ತಮ್ಮ ಗ್ಲಾಮರ್‌ ಲುಕ್‌ ಇನ್ನಷ್ಟು ಸೊಗಸಾಗಿ ಕಾಣಲು ಅವರು ಕಪ್ಪು ಬಣ್ಣ ಬೆಲ್ಟ್‌, ನ್ಯೂಡ್‌ ಕಲರ್‌ ಲಿಪ್‌ಸ್ಟಿಕ್‌ನಲ್ಲಿ ಅದ್ಭುತವಾಗಿ ಕಂಡಿದ್ದಾರೆ.

1416

ತೆಲುಗು ತಮಿಳು ಮಾತ್ರವಲ್ಲ ದುಲ್ಕರ್‌ ಸಲ್ಮಾನ್‌ ಅವರೊಂದಿಗೆ ಪಾನ್‌ ಇಂಡಿಯಾ ಸಿನಿಮಾ ಲಕ್ಕಿ ಭಾಸ್ಕರ್‌ ಚಿತ್ರದಲ್ಲೂ ಮೀನಾಕ್ಷಿ ಚೌಧರಿ ಅವಕಾಶ ಗಿಟ್ಟಿಸಿದ್ದಾರೆ.

1516


ದಳಪತಿ ವಿಜಯ್‌ ಅವರ 68ನೇ ಚಿತ್ರವನ್ನು ವೆಂಕಟ್‌ ಪ್ರಭು ನಿರ್ದೇಶಿಸಲಿದ್ದು, ಈಗಾಗಲೇ ಮೀನಾಕ್ಷಿ ಚೌಧರಿ ಹೀರೋಯಿನ್‌ ಆಗಿ ಫಿಕ್ಸ್‌ ಆಗಿದ್ದಾರೆ.

1616

ಪ್ರಭುದೇವ ಮತ್ತು ಪ್ರಶಾಂತ್ ಅವರಲ್ಲದೆ ನಟರಾದ ಮೋಹನ್ ಮತ್ತು ಜಯರಾಮ್ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬುದು ಇತ್ತೀಚಿನ ಸುದ್ದಿ. ಈ ಆಕ್ಷನ್-ಪ್ಯಾಕ್ಡ್ ಡ್ರಾಮಾದಲ್ಲಿ ಮೀನಾಕ್ಷಿ ನಾಯಕ ನಟಿಯ ಪಾತ್ರವನ್ನು ಬರೆಯಲಿದ್ದರೆ, ದಳಪತಿ ವಿಜಯ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories