Indian Railway ಬದಲಾಗಿ ಯಾಕೆ Indian Railways ಅಂತಾರೆ ? ಇದು UPSC ಲೆವಲ್ ಪ್ರಶ್ನೆ

First Published | Dec 3, 2024, 4:07 PM IST

ಭಾರತೀಯ ರೈಲ್ವೆಯನ್ನು Indian Railways ಎಂದು ಏಕೆ ಕರೆಯುತ್ತಾರೆ ಎಂಬುದರ ಹಿಂದಿನ ಕಾರಣವನ್ನು ಈ ಲೇಖನ ವಿವರಿಸುತ್ತದೆ. Railway ಎಂದರೆ ಒಂದು ರೈಲು, ಆದರೆ Railways ಎಂದರೆ ಬಹು ವಿಭಾಗಗಳನ್ನು ಒಳಗೊಂಡ ರೈಲ್ವೆ ಜಾಲ ಎಂದು ಸೂಚಿಸುತ್ತದೆ.

ಭಾರತ ಸರ್ಕಾರದ ಎ ಮತ್ತು ಬಿ ಗ್ರೇಡ್  ಹುದ್ದೆಗಳಿಗೆ ಯುಪಿಎಸ್‌ಸಿ (Union Public Service Commission) ಸಂಸ್ಥೆ ಪರೀಕ್ಷೆ ನಡೆಸುತ್ತದೆ. ಯುಪಿಎಸ್‌ಸಿ ಒಂದು ಸಾಂವಿಧಾನಿಕ ಸಂಸ್ಥೆಯಾಗಿದೆ.  ಇಂದು ನಾವು ನಿಮಗೆ ಯುಪಿಎಸ್‌ಸಿ ಕೇಳಲಾದ ಪ್ರಶ್ನೆ ಮತ್ತು ಅದರ ಉತ್ತರ ಹೇಳುತ್ತಿದ್ದೇವೆ.

ಸಂದರ್ಶನದಲ್ಲಿ ಅಭ್ಯರ್ಥಿಗಳ ಸಾಮಾನ್ಯ ತಿಳುವಳಿಕೆಯನ್ನು ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ತುಂಬಾ ಸಿಲ್ಲಿ ಅನ್ನೋವಂಥ ಪ್ರಶ್ನೆಗಳನ್ನು ಕೇಳುತ್ತಾರೆ. ಒಂದು ಕ್ಷಣ ಇಂಥಾ ಪ್ರಶ್ನೆನೂ ಕೇಳ್ತಾರೆ ಎಂದು ಯೋಚನೆ ಬರುತ್ತದೆ.  ಇಂದು ನಾವು ನಿಮಗೆ ಆ ರೀತಿಯ ಪ್ರಶ್ನೆಯೊಂದನ್ನು ಹೇಳುತ್ತಿದ್ದೇವೆ.

Tap to resize

ಭಾರತೀಯ ರೈಲ್ವೆ ಎಲ್ಲರ ನೆಚ್ಚಿನ ಪ್ರಯಾಣ ಮಾರ್ಗವಾಗಿದೆ. ರೈಲ್ವೆ ನಿಲ್ದಾಣ ಸಮೀಪ ಮತ್ತು  ಅದರ ವ್ಯಾಪ್ತಿಯಲ್ಲಿ Indian Railways ಎಂದು ಬರೆಯಲಾಗಿರುತ್ತದೆ.  ರೈಲುಗಳ ಇಂಜಿನ್, ಕೋಚ್ ಮೇಲೆಯೂ Indian Railways ಎಂದು ಬರೆದಿರೋದನ್ನು ಗಮನಿಸಬಹುದು. ಆದ್ರೆ ಒಮ್ಮೆಯಾದ್ರೂ ಯಾಕೆ Indian Railway ಎಂದು ಬರೆಯಲ್ಲ ಅಂತ ಯೋಚನೆ ಮಾಡಿದ್ದೀರಾ?

Indian Railways ಮತ್ತು Indian Railway ನಡುವಿನ ವ್ಯತ್ಯಾಸ ಏನು? ಯಾಕೆ Indian Railways ಅಂತ ಬರೆಯಲಾಗುತ್ತೆ ಮತ್ತು ಇದರ ಹಿಂದಿನ ಕಾರಣ ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ. ಈ ಪ್ರಶ್ನೆಯ ಉತ್ತರ  ಏನು ಎಂಬುದರ ಮಾಹಿತಿ  ಇಲ್ಲಿದೆ.

ಉತ್ತರವೇನು? ದೇಶದಲ್ಲಿ ಪ್ರತಿನಿತ್ಯ ಸಾವಿರಾರು ರೈಲುಗಳು ಸಂಚರಿಸುತ್ತವೆ. ಹಾಗೆಯೇ ರೈಲ್ವೆಯು ಸಹ ಹಲವು ವಿಭಾಗಗಳನ್ನು ಹೊಂದಿದೆ. ಆದ್ದರಿಂದ ಭಾರತೀಯ ರೈಲ್ವೆ ಜಾಲವನ್ನು Indian Railways ಎಂದು ಕರೆಯಲಾಗುತ್ತದೆ. Railway ಅಂದ್ರೆ ಕೇವಲ ಒಂದು ರೈಲು ಎಂದು ಹೇಳಿದಂತಾಗುತ್ತದೆ. 

17 ವಲಯ

ಭಾರತೀಯ ರೈಲ್ವೆ ದೇಶದಲ್ಲಿ ಒಟ್ಟು 17 ವಲಯಗಳನ್ನು ಹೊಂದಿದೆ.  ಅವುಗಳು ಈ ಕೆಳಗಿನಂತಿವೆ. 
ಕೇಂದ್ರ ರೈಲ್ವೆ, ಪೂರ್ವ ರೈಲ್ವೆ, ಪೂರ್ವ ಮಧ್ಯ ರೈಲ್ವೆ, ಪೂರ್ವ ಕರಾವಳಿ ರೈಲ್ವೆ, ಉತ್ತರ ರೈಲ್ವೆ, ಉತ್ತರ ಮಧ್ಯ ರೈಲ್ವೆ, ಈಶಾನ್ಯ ರೈಲ್ವೆ, ಉತ್ತರ ಗಡಿ ರೈಲ್ವೆ, ವಾಯುವ್ಯ ರೈಲ್ವೆ, ದಕ್ಷಿಣ ರೈಲ್ವೆ, ದಕ್ಷಿಣ ಮಧ್ಯ ರೈಲ್ವೆ, ಆಗ್ನೇಯ ರೈಲ್ವೆ, ಆಗ್ನೇಯ ಮಧ್ಯ ರೈಲ್ವೆ, ದಕ್ಷಿಣ ಪಶ್ಚಿಮ ರೈಲ್ವೆ, ಪಶ್ಚಿಮ ರೈಲ್ವೆ, ಪಶ್ಚಿಮ ಮಧ್ಯ ರೈಲ್ವೆ

Latest Videos

click me!