ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಉಪಗ್ರಹ ಲ್ಯಾಂಚ್ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು ನಗರದ 20 ಸರ್ಕಾರಿ ಶಾಲೆಯ 100 ಮಕ್ಕಳು ಸೇರಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ( Actor Puneet Rajkumar ) ಹೆಸರಿನ ಉಪಗ್ರಹವನ್ನು ತಯಾರಿಸಿದ್ದಾರೆ. ಈ ಉಪಗ್ರಹ ಉಡಾವಣೆಗೆ ರಾಜ್ಯ ಸರ್ಕಾರ ( Karnataka Government ) ಮುಂದಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಉಡಾವಣೆ ಮಾಡುವಂತ ನಿರ್ಧಾರವನ್ನು ಕೈಗೊಂಡಿದೆ.