Udupi Government School: ಶಾಲಾ ಮಕ್ಕಳಿಗೆ ಅಶೋಕ್‌ರಿಂದ ಜೀವನ ಪಾಠ

First Published | Feb 20, 2022, 9:06 AM IST

ಉಡುಪಿ(ಫೆ.20): ಕಂದಾಯ ಸಚಿವ ಆರ್‌. ಅಶೋಕ(R Ashok) ಅವರು ಶನಿವಾರ ತಮ್ಮ ಗ್ರಾಮ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ಜೀವನ ಪಾಠ ಮಾಡಿದರು.

ಸರ್ಕಾರಿ ಶಾಲೆ(Government School) ಖಾಸಗಿ ಶಾಲೆ ಎಂಬ ಮೇಲು ಕೀಳು ಬೇಕಾಗಿಲ್ಲ. ಸಾಧನೆಯ ವಿಷಯ ಬಂದರೆ ಬಡವರ ಮಕ್ಕಳು ಶ್ರೀಮಂತರ ಮಕ್ಕಳು ಎಂಬುದಿಲ್ಲ, ಇದಕ್ಕೆ ತನ್ನ ಜೀವನವೇ ಸಾಕ್ಷಿ ಎಂದವರು ಉದಾಹರಣೆ ಕೊಟ್ಟರು. ಸರ್ಕಾರಿ ಶಾಲೆಯಲ್ಲಿ ಕಲಿತ ನಾನು ಸಚಿವನಾದೆ. ಖಾಸಗಿ ಆಂಗ್ಲ ಮಾಧ್ಯಮದಲ್ಲಿ ಕಲಿತ ಐಎಎಸ್‌(IAS), ಐಪಿಎಸ್‌ಗಳೇ(IPS) ಇವತ್ತು ನನ್ನ ಮಾತನ್ನು ಕೇಳುತ್ತಿದ್ದಾರೆ ಎಂದ ಸಚಿವ ಅಶೋಕ್‌

ಯಾವುದೇ ಕೆಲಸ ಮೇಲಲ್ಲ ಕೀಳಲ್ಲ, ಫೈವ್‌ ಸ್ಟಾರ್‌ ಹೋಟೆಲ್‌ನ ಅಡುಗೆ ಭಟ್ಟನಿಗೆ ನಾಲ್ಕುವರೆ ಲಕ್ಷ ರು. ಸಂಬಳ ಇದೆ. ನಾವು ಮಾಡುವ ಉದ್ಯೋಗದ ಉತ್ತುಂಗಕ್ಕೆ ಹೋಗಬೇಕು. ಉತ್ತುಂಗದ ಕೆಲಸಕ್ಕೆ ಕೈತುಂಬ ಸಂಬಳ, ಗೌರವ ಸಿಗುತ್ತದೆ, ಗುರಿ ಉತ್ತುಂಗದಲ್ಲಿರಬೇಕು ಎಂದವರು ವಿದ್ಯಾರ್ಥಿಗಳಿಗೆ(Students) ಕಿವಿಮಾತು ಹೇಳಿದ ಸಚಿವರು 

Latest Videos


ಟೀ ಮಾರುತ್ತಿದ್ದ ನರೇಂದ್ರ ದೇಶದ ಪ್ರಧಾನಿ ಮೋದಿಯಾದ(Narendra Modi) ಸಾಧನೆ, ಬೆಸ್ತರ ಮನೆ ಮಗ ಅಬ್ದುಲ್‌ ಕಲಾಂ ರಾಷ್ಟ್ರಪತಿ ಆದ ಘಟನೆ, ಬೆಂಗಳೂರಿನ ಪದ್ಮನಾಭ ನಗರದ ಸೊಪ್ಪು ಮಾರುವವನ ಮಗಳು ರಾರ‍ಯಂಕ್‌ ಪಡೆದ ಸಾಹಸಗಾಥೆಯ ಎಳೆಗಳನ್ನು ಬಿಚ್ಚಿಟ್ಟ ಸಚಿವರು ಮೊರಾರ್ಜಿ ದೇಸಾಯಿ ವಸತಿಶಾಲೆಯ ಮಕ್ಕಳಿಗೆ ಜೀವನೋತ್ಸಾಹ ತುಂಬಿದರು. ಈ ಶಾಲೆಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಸಚಿವರು ಸನ್ಮಾನಿಸಿದರು. ಆ ವಿದ್ಯಾರ್ಥಿನಿ ಸಚಿವರ ಕಾಲಿಗೆ ಬಿದ್ದಾಗ, ಸಚಿವರೇ ತಿರುಗಿ ವಿದ್ಯಾರ್ಥಿನಿ ಕಾಲಿಗೆ ನಮಸ್ಕರಿಸಿದರು.

ಇದಕ್ಕೂ ಮೊದಲು ವಸತಿ ಶಾಲೆಯಲ್ಲಿ ಮಕ್ಕಳು ದೀಪ ಬೆಳಗುವ ಮೂಲಕ ಸಚಿವರು ತಮ್ಮೊಂದಿಗೆ ವಾಸ್ತವ್ಯ ಮಾಡುವ ಕಾರ್ಯಕ್ರಮಕ್ಕೆ ಸಂಭ್ರಮದಿಂದ ಚಾಲನೆ ನೀಡಿದರು. ನಂತರ ಈ ಮಕ್ಕಳು ಪ್ರಸ್ತುತ ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಚಿವರು ವೀಕ್ಷಿಸಿ ಸಂತೋಷಪಟ್ಟರು. ಬಳಿಕ ಮಕ್ಕಳ ಜೊತೆ ಕುಳಿತು ರಾತ್ರಿ ಸಹಭೋಜನ ಸ್ವೀಕರಿಸಿದರು. ರಾತ್ರಿ ವಸತಿ ಶಾಲೆಯಲ್ಲೇ ಸಚಿವ ಅಶೋಕ್‌ ವಾಸ್ತವ್ಯ ಹೂಡಿದರು.

click me!