Kannada Book: ಎಂಜಿನಿಯರಿಂಗ್‌, ವೈದ್ಯಕೀಯ ಪಠ್ಯ ಕನ್ನಡದಲ್ಲೇ ಸಿದ್ಧಪಡಿಸಿ: ಜ್ಞಾನೇಂದ್ರ

First Published Nov 25, 2021, 8:09 AM IST

ಬೆಂಗಳೂರು(ನ.25):  ಕನ್ನಡವು(Kannada) ಅತ್ಯಂತ ಪ್ರಾಚೀನವೂ ಮತ್ತು ಶಾಸ್ತ್ರೀಯ ಭಾಷೆಗಳಲ್ಲಿ ಪ್ರಮುಖವಾಗಿದ್ದು, ಎಂಜಿನಿಯರಿಂಗ್‌, ವೈದ್ಯಕೀಯ ವಿಷಯಗಳ ಪಠ್ಯವನ್ನು ಕನ್ನಡದಲ್ಲಿಯೇ ಸಿದ್ಧಪಡಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಪ್ರತಿಪಾದಿಸಿದರು.

ರೇಸ್‌ಕೋರ್ಸ್‌ ರಸ್ತೆಯ ರೇಸ್‌ ವ್ಯೂ ಕಾಟೇಜ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾಹಿತಿ ಡಾ. ಹಂಪ ನಾಗರಾಜಯ್ಯ(Dr Hampa Nagarajaiah) ಅವರು ರಚಿಸಿದ ‘ಚಾರುಲತ-ವಸಂತ’(Charulata-Vasanta) ಕಾವ್ಯದ ಇಂಗ್ಲಿಷ್‌ ಅನುವಾದ ಕೃತಿಯನ್ನು ಬಿಡುಗಡೆಗೊಳಿಸಿದ ಸಚಿವ ಆರಗ ಜ್ಞಾನೇಂದ್ರ

ಕನ್ನಡಕ್ಕೆ ಐತಿಹಾಸಿಕ ಮಹತ್ವವಿದ್ದು ಎಂಜಿನಿಯರಿಂಗ್‌(Engineering), ವೈದ್ಯಕೀಯ(Medical) ವಿಷಯಗಳನ್ನು ಕನ್ನಡದಲ್ಲಿ ಸುಲಲಿತವಾಗಿ ವಿಧ್ಯಾರ್ಥಿಗಳಿಗೆ(Students) ಬೋಧಿಸಲು ನೆರವಾಗುವಂತೆ ಪಠ್ಯಕ್ರಮ ರಚನೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಾಹಿತಿಗಳು, ಚಿಂತಕರು ಸಲಹೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ ಗೃಹ ಸಚಿವರು

ಕನ್ನಡದಲ್ಲಿ ರಚಿತವಾದ ಅತ್ಯುತ್ತಮ ಕೃತಿಗಳನ್ನು ಬೇರೆ ಭಾಷೆಗೆ ಅನುವಾದಗೊಳಿಸಲು(Translation) ಲೇಖಕರ ಹಕ್ಕು ಸಂಬಂಧದ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಕನ್ನಡದಲ್ಲಿ ರಚಿತವಾಗುವ ಎಲ್ಲಾ ಮೌಲ್ಯಯುತ ಕೃತಿಗಳು ನಾಡಿನ ಅಸ್ತಿಯಾಗಿದ್ದು, ಕನ್ನಡ ಹಾಗೂ ಸಾರಸ್ವತ ಲೋಕಕ್ಕೆ ನೀಡುವ ಕೊಡುಗೆಗಳಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಆರಗ ಜ್ಞಾನೇಂದ್ರ

ಹಂಪನಾ ಅವರು ರಚಿಸಿರುವ ಚಾರುಲತಾ-ವಸಂತ ಕೃತಿ ಕನ್ನಡದಲ್ಲಿ ರಚಿತವಾದ ಸುಂದರ ಕಥನ ಕಾವ್ಯವಾಗಿದ್ದು, ಮೂಲ ಕೃತಿಗೆ ಧಕ್ಕೆ ಬಾರದಂತೆ ತರ್ಜುಮೆ ಮಾಡಲಾಗಿದೆ. ಅನುವಾದ ಕೃತಿಗಳಿಂದ ಕನ್ನಡ ಸಾರಸ್ವತ ಲೋಕ ವಿಸ್ತಾರವಾಗುತ್ತದೆ. ಪ್ರಪಚಂದ ಯಾವುದೇ ಭಾಷೆಗಳಿಗೂ ಪ್ರಬುದ್ಧತೆಯಲ್ಲಿ ಸರಿಸಾಟಿಯಾದ ಭಾಷೆ ಎಂದರೆ ಕನ್ನಡ ಎಂದು ಪ್ರಶಂಸಿಸಿದ ಸಚಿವ ಜ್ಞಾನೇಂದ್ರ

ಹಂಪ ನಾಗರಾಜಯ್ಯ ಮತ್ತು ಅವರ ಪತ್ನಿ ಕಮಲಾ ಹಂಪನಾ ಅವರನ್ನು ಇದೇ ಸಂದರ್ಭದಲ್ಲಿ ಸಚಿವರು ಆತ್ಮೀಯವಾಗಿ ಸನ್ಮಾನಿಸಿದರು. ವಿಮರ್ಶಕ ರಾಜೇಂದ್ರ ಚನ್ನಿ, ಸಾಹಿತಿಗಳಾದ ಮಲ್ಲೇಪುರಂ ಜಿ.ವೆಂಕಟೇಶ್‌, ಎಚ್‌.ಎಸ್‌.ವೆಂಕಟೇಶ ಮೂರ್ತಿ, ಗುರುರಾಜ ಕರ್ಜಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್‌.ಜೀವರಾಜ್‌ ಮತ್ತಿತರರು ಹಾಜರಿದ್ದರು.

click me!