ನಂಜನಗೂಡಿನಲ್ಲಿ ಇಂದು (ಸೋಮವಾರ) ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮಹಾದೇವಸ್ವಾಮಿ ಎನ್ನುವರ ಮನೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಭೇಟಿ ನೀಡಿದರು. ಕಳೆದೊಂದು ವರ್ಷದಿಂದ ಕೋಮಾ ಸ್ಥಿತಿಯಲ್ಲಿಯೇ ಇರುವ ಶಿಕ್ಷಕರನ್ನ ಆರೋಗ್ಯ ವಿಚಾರಿಸಿದರು. ಅಲ್ಲದೇ ಅವರಿಗೆ ಸಹಾಯ ಮಾಡಲು ಏನು ಕ್ರಮ ಕೈ ಗೊಳ್ಳಬಹುದು ಎಂದು ವಿವರಿಸಿದರು.