150 ಐಟಿಐ ಮೇಲ್ದರ್ಜೆಗೇರಿಸಲು ಒಪ್ಪಂದ: ಸಿಎಂ ಯಡಿಯೂರಪ್ಪ

Kannadaprabha News   | Asianet News
Published : Nov 07, 2020, 12:44 PM IST

ಬೆಂಗಳೂರು(ನ.07): ರಾಜ್ಯದಲ್ಲಿರುವ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ಉನ್ನತೀಕರಿಸುವ ಜೊತೆಗೆ ಕೈಗಾರಿಕೆಗಳಿಗೆ ಬೇಕಾದ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ರಾಜ್ಯ ಸರ್ಕಾರ ‘ಟಾಟಾ ಟೆಕ್ನಾಲಜೀಸ್‌’ ಸಹಭಾಗಿತ್ವದಲ್ಲಿ 4636 ಕೋಟಿ ರು. ವೆಚ್ಚದಲ್ಲಿ ಐಟಿಐಗಳನ್ನು ಉನ್ನತೀಕರಿಸುವ ಒಪ್ಪಂದಕ್ಕೆ ಸಹಿ ಹಾಕಿದೆ.

PREV
15
150 ಐಟಿಐ ಮೇಲ್ದರ್ಜೆಗೇರಿಸಲು ಒಪ್ಪಂದ: ಸಿಎಂ ಯಡಿಯೂರಪ್ಪ

ಶುಕ್ರವಾರ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 150 ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಗಳನ್ನು ಟಾಟಾ ಟೆಕ್ನಾಲಾಜೀಸ್‌ ಸಂಸ್ಥೆಯ ಸಹಭಾಗಿತ್ವದಲ್ಲಿ ಉನ್ನತೀಕರಿಸುವ ಒಪ್ಪಂದಕ್ಕೆ ಸಹಿ ಮಾಡಲಾಯಿತು.

25

ಒಪ್ಪಂದದಿಂದ ಸರ್ಕಾರ ಮತ್ತು ಕೈಗಾರಿಕೆಗಳಿಗೆ ಲಾಭದಾಯವಾಗಲಿದೆ. ಸರ್ಕಾರ ಮತ್ತು ಕೈಗಾರಿಕೋದ್ಯಮದ ಸಹಭಾಗಿತ್ವದಲ್ಲಿ ಕೈಗೊಂಡಿರುವ ಬಹುದೊಡ್ಡ ಯೋಜನೆ ಇದಾಗಿದೆ ಎಂದು ಘೋಷಿಸಿದ ಯಡಿಯೂರಪ್ಪ

35

ಈ ಯೋಜನೆಯಲ್ಲಿ ಟಾಟಾ ಟೆಕ್ನಾಲಾಜೀಸ್‌ ಶೇ.80 ರಷ್ಟು(4080 ಕೋಟಿ ರು) ಮತ್ತು ಕರ್ನಾಟಕ ಸರ್ಕಾರ 556 ಕೋಟಿ ರು. ವೆಚ್ಚ ಮಾಡಲಿದೆ. ಅದರಲ್ಲಿ ಮೂಲಭೂತ ಸೌಕರ್ಯ ಒದಗಿಸಲು 105 ಕೋಟಿ ರು. ಬಳಕೆ ಮಾಡಿಕೊಳ್ಳಲಾಗುವುದು. ಹೀಗೆ ಒಟ್ಟು 4636 ಕೋಟಿ ರು.ಗಳ ವೆಚ್ಚದ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.

45

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಐಟಿಐಗಳನ್ನು ಆಯ್ಕೆ ಮಾಡಲಾಗುವುದು. ಕೈಗಾರಿಕೆಗಳಿಗೆ ಅಗತ್ಯವಿರುವ ಸ್ಮಾರ್ಟ್‌ ಉತ್ಪಾದನೆ ನಿರ್ವಹಿಸಲು ಪ್ರಸ್ತುತ ನಮ್ಮ ಐಟಿಐಗಳು ಪೂರ್ಣವಾಗಿ ಸಜ್ಜುಗೊಂಡಿಲ್ಲ. ಈ ಯೋಜನೆಯಡಿ 20 ಕೈಗಾರಿಕಾ ಪಾಲುದಾರರೊಂದಿಗೆ ಟಾಟಾ ಟೆಕ್ನಾಲಾಜೀಸ್‌ ಬೇಡಿಕೆಗೆ ಅನುಗುಣವಾಗಿ ಅತ್ಯಾಧುನಿಕ ತಂತ್ರಜ್ಞಾನದ ಜತೆಗೆ ತರಬೇತಿ ಮತ್ತು ಹೆಚ್ಚುವರಿ ಪ್ರಮಾಣೀಕೃತ ಸೇವೆಗಳನ್ನು ಐಟಿಐ, ಪಾಲಿಟೆಕ್ನಿಕ್‌ ಹಾಗೂ ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಂದ ನೀಡಲಿದೆ. ವಿದ್ಯಾರ್ಥಿಗಳು ಟಾಟಾ ಸಂಸ್ಥೆ ಮತ್ತು ಇನ್ನಿತರ ತರಬೇತಿ ಸಂಸ್ಥೆಗಳು ಒಳಗೊಂಡಂತೆ ರಾಜ್ಯ, ದೇಶ ಹಾಗೂ ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಲು ಇದು ಸಹಕಾರಿ ಆಗಲಿದೆ. ರಾಜ್ಯ ಸರ್ಕಾರ ಈಗಾಗಲೇ ಕೈಗೊಂಡಿರುವ ಹೂಡಿಕೆ ಸ್ನೇಹಿ ಕಾರ್ಯಕ್ರಮಕ್ಕೆ ಇದು ಪೂರಕವಾಗಲಿದೆ ಎಂದು ಹೇಳಿದರು.

55

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಸರ್ಕಾರದ ಕಾರ್ಯದರ್ಶಿ ಸೆಲ್ವಕುಮಾರ್‌, ಟಾಟಾ ಟೆಕ್ನಾಲಜೀಸ್‌ ಸಂಸ್ಥೆ ಅಧಿಕಾರಿಗಳು ಉಪಸ್ಥಿತರಿದ್ದರು.

click me!

Recommended Stories