ಸುಶಿಕ್ಷಿತ ಸಮಾಜದಲ್ಲಿ ತಾರತಮ್ಯ, ಅಸಹಿಷ್ಣುತೆ ಭಾವನೆಗಳಿಲ್ಲದ ಕೃತಜ್ಞತೆ ಮನೋಭಾವಗಳನ್ನು ಬೆಳೆಸಲು ವಿದ್ಯೆ ಜ್ಞಾನ ಧ್ಯಾನ ಈ ಮೂರನ್ನೂ ಬೆಸೆದ ಕೆಲಸ ಕಾರ್ಯಗಳನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿಜ್ಞಾನೇಶ್ವರ ಅಧ್ಯಯನ ಪೀಠ ಕೈಗೊಳ್ಳಲಿ, ಸರ್ಕಾರ ಅಗತ್ಯ ಸಹಕಾರ ಸೌಕರ್ಯಗಳನ್ನು ಒದಗಿಸಲಿದೆ ಎಂದ ಸಿಎಂ ಬೊಮ್ಮಾಯಿ
ಕರ್ನಾಟಕದಲ್ಲಿ ಸಾಮಾಜಿಕ ಸುಧಾರಣೆ ಚಳವಳಿಗೆ ದೊಡ್ಡ ಇತಿಹಾಸವಿದೆ. ಹಳೆಯ ಸಾಮಾಜಿಕ ಹಾಗೂ ಈಗಿನ ಸಾಂವಿಧಾನಿಕ ಸುಧಾರಣೆಗಳನ್ನು ಆಧರಿಸಿ ಕಾನೂನು ಮತ್ತು ಮಾನವೀಯತೆಗಳ ಹದವಾದ ಮಿಶ್ರಣ ಹೊಂದಿದ ಪರಿಹಾರ ಕಂಡುಕೊಳ್ಳಬೇಕು. ನ್ಯಾಯಾಂಗದಲ್ಲಿ ಸುಧಾರಣೆಗಳನ್ನು ತರುವ ಕಾರ್ಯಗಳು ಈ ಅಧ್ಯಯನ ಪೀಠದ ಮೂಲಕ ಆಗಲಿ,ವಿಜ್ಞಾನೇಶ್ವರರ ಮಿತಾಕ್ಷರ ಸಂಹಿತೆ ಈ ಎಲ್ಲಾ ವಿಚಾರಗಳನ್ನು ಒಳಗೊಂಡಿದೆ. ಇಂದಿನ ಕಾಲ,ಸಂದರ್ಭಕ್ಕೆ ಅನುಗುಣವಾಗಿ ಈ ನಿಟ್ಟಿನಲ್ಲಿ ಸುಧಾರಣೆಗಳಾಗಬೇಕು. ವಿದ್ಯೆ , ಜ್ಞಾನ, ಧ್ಯಾನಗಳನ್ನು ಬೆಸೆದ ಸುಧಾರಾಣಾತ್ಮಕ ಕಾರ್ಯಗಳಾಗಬೇಕು. ಸುಧಾರಣೆ ಸಾಮಾಜಿಕ ಮಾತ್ರವಲ್ಲ ವೈಯಕ್ತಿಕ ಸುಧಾರಣೆಗಳೂ ಕೂಡ ಮುಖ್ಯ ಎಂದು ತಿಳಿಸಿದ ಸಿಎಂ ಬೊಮ್ಮಾಯಿ
ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಅವರು ಧರ್ಮ ಮತ್ತು ಕಾನೂನು ಆಳ್ವಿಕೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮೌಲ್ಯಮಾಪನ ಕುಲಸಚಿವ ಪ್ರೊ.ಜಿ.ಬಿ.ಪಾಟೀಲ, ಕಾನೂನು ವಿವಿ ಡೀನ್ ಪ್ರೊ.ರತ್ನಾ ಭರಮಗೌಡರ್, ಪ್ರೊ.ಎಲ್.ಎಸ್.ಪಾಟೀಲ ಮತ್ತಿತರರು ಇದ್ದರು.