ಮುಂಬೈ(ಜು. 16) ಸೋನಂ ಕಪೂರ್ ಅಖಾಡಕ್ಕೆ ಇಳಿದಿದ್ದಾರೆ. ಈ ಬಾರಿ ಅವರು ಸಿನಿಮಾ ರಂಗದ ಹೊರಗಿನ ವಿಚಾರ ಮಾತನಾಡಿದ್ದಾರೆ. ಸಿಬಿಎಸ್‌ಇ ಬೋರ್ಡ್ ವಿರುದ್ಧ ಕೆಂಡವಾಗಿದ್ದಾರೆ. ಏನ್ ಕತೆ ನೀವೇ ನೋಡಿಕೊಂಡು ಬನ್ನಿ.. ಜಾತ್ಯತೀತ, ರಾಷ್ಟ್ರೀಯವಾದ , ನಾಗರಿಕತ್ವ, ಪ್ರಜಾಪ್ರಭುತ್ವ ವಿಚಾರದ ಅಧ್ಯಾಐ ತೆಗೆದು ಹಾಕಿದ್ದನ್ನು ಟೀಕಿಸಿದ್ದಾರೆ. ಸಿಬಿಎಸ್‌ಇ ಬೋರ್ಡ್ ನ ಈ ವಿಚಾರವನ್ನು ಇದೊಂದು ವಿಲಕ್ಷಣ ತೀರ್ಮಾನ ಎಂದು ಸೋನಂ ಕಪೂರ್ ವ್ಯಂಗ್ಯವಾಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ bizarre ಎಂದು ಕಮೆಂಟ್ ಮಾಡಿದ್ದಾರೆ. ರಾಜಕೀಯ ವಿಚಾರಧಾರೆಗಳನ್ನು ಯುವ ಜನ ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಸಿಬಿಎಸ್‌ಇ ತೀರ್ಮಾನ ಒಂದು ತರ್ಕಕ್ಕೆ ಅರ್ಹವಾಗಿದೆ ಎಂದು ಹೇಳಿದ್ದಾರೆ. ಜಿಎಸ್‌ಟಿ ಮತ್ತು ವಿದೇಶ ವ್ಯವಹಾರಗಳ ಬಗೆಗಿನ ಚಾಪ್ಟರ್ ಸಹ ತತೆಗೆದು ಹಾಕಿದ್ದೆ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ದೇಶದ ಮಾನವ ಸಂಪನ್ಮೂಲ ಇಲಾಖೆ ಇಂಥ ತೀರ್ಮಾನ ಯಾಕೆ ಮಾಡಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲ ರಾಜಕೀಯ ನಾಯಕರು ಸಿಬಿಎಸ್‌ಇ ಯ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಬಿಎಸ್‌ಇ ಬೋರ್ಡ್ ಮೇಲೆ ಸೋನಂ ಕಪೂರ್ ಕೆಂಡ Actor Sonam Kapoor has questioned the Central Board for Secondary Education’s recent decision to remove chapters.