ಕೊರೋನಾ ನಡುವೆಯೂ ಯಶಸ್ವಿಯಾಗಿ ಮುಗಿದ SSLC ಪರೀಕ್ಷೆ: ಋಣ ತೀರಿಸಿದ ಸುರೇಶ್ ಕುಮಾರ್

First Published | Jul 3, 2020, 5:05 PM IST

ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕು ಭೀತಿಯ ನಡುವೆಯೂ ರಾಜ್ಯದ ಎಸ್‌ಎಸ್‌ಎಲ್ ಸಿ ಪರೀಕ್ಷೆ ಸುರಕ್ಷಿತವಾಗಿ ಮುಗಿದಿದೆ. ಜೂನ್ 25ರಂದು ಆರಂಭವಾದ ಪರೀಕ್ಷೆ ಇಂದಿಗೆ (ಜುಲೈ 03) ಅಂತ್ಯವಾಗಿದೆ. ಅಲ್ಲಿಗೆ ಸೋಂಕು ಸಂಕಟದ ಮಧ್ಯೆ ಪರೀಕ್ಷೆ ನಡೆಸುವ ಸರಕಾರ ದೊಡ್ಡ ಹೊಣೆಯೊಂದು ಯಶಸ್ವಿಯಾದಂತಾಗಿದೆ. ಕೊರೋನಾ ಮಾಹಾಮಾರಿಯಿಂದ ಕೆಲ ರಾಜ್ಯಗಳಲ್ಲಿ ಹತ್ತನೇ ತರಗತಿ ಪರೀಕ್ಷೆಗಳನ್ನೇ ರದ್ದು ಮಾಡಲಾಗಿದೆ. ಆದ್ರೆ, ಕರ್ನಾಟಕದಲ್ಲಿ ವಿದ್ಯಾರ್ಥಿಗಳು ಜೀವನ ಒಂದು ಪ್ರಮುಖ ಘಟ್ಟವಾಗಿದ್ದರಿಂದ ರಾಜ್ಯ ಸರ್ಕಾರ ಹಲವರ ವಿರೋಧದ ನಡುವೆಯೂ ಬಹಳಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡು ಪರೀಕ್ಷೆಗಳನ್ನು ಮುಗಿಸಿದೆ. ಇದಕ್ಕೆ ಹಗಲಿರುಳ ಶ್ರಮಿಸಿದವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಋಣ ತೀರಿಸಿದ್ದಾರೆ.

ಕೊರೋನಾ ಆತಂಕದ ಮಧ್ಯೆಯೂ ಬಂದು ಪರೀಕ್ಷೆ ಬರೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನಸಚಿವ ಸುರೇಶ್ ಕುಮಾರ್ ಅಭಿನಂದನೆಗಳನ್ನ ತಿಳಿಸಿದ್ದಾರೆ.
ಕೊರೋನಾ ಭೀತಿ ನಡುವೆಯೂ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶುಭ ಹಾರೈಸಿದ್ದಾರೆ.
Tap to resize

ಕೊರೋನಾ ಮಧ್ಯೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸರ್ಕಾರಕ್ಕೆ ಬೆನ್ನೆಲುಬಾಗಿ ಸಹಾಯ ಮಾಡಿದವರಿಗೆ ಸುರೇಶ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ.
ಕೊರೋನಾ ಭಯದ ಮಧ್ಯೆ ತಮ್ಮ ಮಕ್ಕಳ ಪರೀಕ್ಷೆ ಬರೆಯಲು ಕಳುಹಿಸಿದ ಪೋಷಕರ ಬಗ್ಗೆ ಸುರೇಶ್ ಕುಮಾರ್ ಧನ್ಯವಾದ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೂ ಸಚಿವ ಸುರೇಶ್ ಕುಮಾರ್ ಅವರು ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಸ್. ಸಂತೋಷ್ ಅವರಿಗೂ ಸುರೇಶ್ ಕುಮಾರ್ ಕೃತಜ್ಞತೆ ತಿಳಿಸಿದ್ದಾರೆ.
ಪರೀಕ್ಷೆಗಳನ್ನ ಯಶಸ್ವಿಯಾಗಿಸಿದರಾಜ್ಯದ ಎಲ್ಲಾ ಜಿಲ್ಲಾಡಳಿತದ ಕಾರ್ಯವನ್ನುಸಚಿವ ಸುರೇಶ್ ಕುಮಾರ್ ಸ್ಮರಿಸಿದ್ದಾರೆ.
ಪ್ರಮುಖವಾಗಿ ಪರೀಕ್ಷೆಗೆ ನೆರವಾದ ಕೆಎಸ್‌ಆರ್‌ಟಿಸಿ, ಗೃಹ ಇಲಾಖೆ, ಆರೋಗ್ಯ ಇಲಾಖೆಗೆ ಸುರೇಶ್ ಕುಮಾರ್ ಮಾತು
ಪರೀಕ್ಷೆಗಳ ಸುಲಲಿತವಾಗಿ ನಡೆಯಲು ಪ್ರಮುಖ ಪಾತ್ರವಹಿಸಿದ ತಮ್ಮ ಇಲಾಖೆಯ ಶಿಕ್ಷಕ ವೃಂದವನ್ನು ಸಚಿವ ಸುರೇಶ್ ಕುಮಾರ್ ಅವರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಸ್ಮರಿಸುವ ಮೂಲಕ, ಪರೀಕ್ಷೆ ನೆರವಾದರ ಋಣ ತೀರಿಸಿದ್ದಾರೆ.
ಇನ್ನು ಪ್ರಮುಖವಾಗಿ ಕೊರೋನಾಕ್ಕೆ ಹೆದರಿ ಬೇರೆ ರಾಜ್ಯಗಳಲ್ಲಿ ಹತ್ತನೇ ತರಗತಿ ಪರೀಕ್ಷೆಗಳನ್ನ ರದ್ದು ಮಾಡಿದ್ರೂ ಸಹ ರಾಜ್ಯ ಸರ್ಕಾರ ಧೈರ್ಯವನ್ನು ಕಳೆದುಕೊಳ್ಳದೇ ಮಾಡಿದೆ. ಇದಕ್ಕೆ ಎಲ್ಲದಕ್ಕೂ ಅನುಮತಿ ಕೊಟ್ಟ ಸಿಎಂ ಬಿಎಸ್ ಯಡಿಯೂರಪ್ಪ ಅವರ ಫಸ್ಟ್ಪ್ರತಿಕ್ರಿಯೆ ಹೀಗಿದೆ.

Latest Videos

click me!