ಹುಬ್ಬಳ್ಳಿ ನೇಹಾ ಹಿರೇಮಠ ಕೇಸ್; ಇಂದು ಆರೋಪಿ ಫಯಾಜ್‌ ಭವಿಷ್ಯ ನಿರ್ಧಾರ

Published : Aug 04, 2025, 08:14 AM IST

Neha Hiremath Case: ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊ*ಲೆ ಪ್ರಕರಣದ ಆರೋಪಿ ಫಯಾಜ್ ಜಾಮೀನು ಅರ್ಜಿಯ ವಿಚಾರಣೆ  ನಡೆದಿದ್ದು, ಇಂದು ತೀರ್ಪು ಪ್ರಕಟವಾಗಲಿದೆ. ಹಿಂದೂ ಸಂಘಟನೆಗಳು ಫಯಾಜ್‌ಗೆ ಜಾಮೀನು ನೀಡಬಾರದು ಎಂದು ಪ್ರತಿಭಟನೆ ನಡೆಸಲಿವೆ.

PREV
15
ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊ*ಲೆ ಪ್ರಕರಣದ ಆರೋಪಿ ಫಯಾಜ್ ಭವಿಷ್ಯ ಇಂದು ನಿರ್ಧಾರವಾಗಲಿದೆ. ಆರೋಪಿ ಫಯಾಜ್ ಜಾಮೀನು ಅರ್ಜಿಯ ಆದೇಶ ಇಂದು ಪ್ರಕಟವಾಗಲಿದೆ. ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಆದೇಶ ಪ್ರಕಟಿಸಲಿದೆ.

25
ಹಿಂದೂ ಸಂಘಟನೆಗಳು ಪ್ರತಿಭಟನೆ

ಫಯಾಜ್ ಜಾಮೀನು ಅರ್ಜಿಯ ವಿಚಾರಣೆ ನ್ಯಾಯಾಲಯ ನಡೆಸಿದ್ದು, ಇಂದು ಆರೋಪಿಗೆ ಜಾಮೀನು ಸಿಗುತ್ತಾ ಅಥವಾ ಸಿಗಲ್ಲವಾ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಇತ್ತ ನ್ಯಾಯಾಲಯದ ತೀರ್ಪಿಗೂ ಮುನ್ನವೇ ಕೆಲ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ಲವ್ ಜಿಹಾದ್ ಫಯಾಜ್‌ಗ ಜಾಮೀನು ಬೇಡ ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.

35
ಬಿವಿಬಿ ಕಾಲೇಜಿನ ಆವರಣದಲ್ಲಿ ನೇಹಾ ಹಿರೇಮಠ ಕೊ*ಲೆ

ಇಂದು ನೇಹಾ ಕೊ*ಲೆಯಾದ ಕಾಲೇಜಿನಿಂದ ನ್ಯಾಯಾಲಯದವರೆಗೆ ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಎಪ್ರಿಲ್ 18,2024 ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಆವರಣದಲ್ಲಿ ನೇಹಾ ಹಿರೇಮಠ ಕೊ*ಲೆ ನಡೆದಿತ್ತು. ಫಯಾಜ್ ಚಾಕುವಿನಿಂದ ನೇಹಾ ಮೇಲೆ ದಾಳಿ ನಡೆಸುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

45
ನೇಹಾ ಹಿರೇಮಠ ತಂದೆ ನಿರಂಜನ್ ಹಿರೇಮಠ

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಜಾಮೀನು ನೀಡಿದಂತೆ ನೇಹಾ ಹಿರೇಮಠ ಪ್ರಕರಣದಲ್ಲಿ ತನಗೂ ಜಾಮೀನು ನೀಡಿ ಎಂಬ ವಾದವನ್ನು ಕೋರ್ಟ್ ಮುಂದಿಟ್ಟಿದ್ದಾರೆ ಎಂದು ನೇಹಾ ಹಿರೇಮಠ ತಂದೆ ನಿರಂಜನ್ ಹಿರೇಮಠ ಹೇಳಿದ್ದಾರೆ. ನಿರಂಜನ್ ಹಿರೇಮಠ ಸ್ಥಳೀಯ ಕಾಂಗ್ರೆಸ್ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ.

55
ಫಯಾಜ್ ವಿರುದ್ಧ ಆಕ್ರೋಶ

ನೇಹಾ ಹಿರೇಮಠ ಕೊ*ಲೆ ಪ್ರಕರಣದ ಆರೋಪಿ ವಾಮ ಮಾರ್ಗದ ಮೂಲಕ ಜಾಮೀನಿಗಾಗಿ ಮನವಿ ಮಾಡಿದ್ದಾರೆ. ಆದರೆ ನ್ಯಾಯಾಲಯ ಮಗಳಿಗೆ ನ್ಯಾಯಕೊಡಿಸುವ ಭರವಸೆ ಇದೆ ಎಂದು ನೇಹಾ ತಂದೆ ಹೇಳಿದ್ದಾರೆ. ನೇಹಾ ಹಿರೇಮಠ ಪ್ರಕರಣ ಇಡೀ ದೇಶದಲ್ಲಿಯೇ ಸಂಚಲನ ಸೃಷ್ಟಿಸಿತ್ತು. ರಾಜ್ಯದಾದ್ಯಂತ ಆರೋಪಿ ಫಯಾಜ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಫಯಾಜ್ ಪೋಷಕರು ಸಹ ಮಗನ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದರು.

Read more Photos on
click me!

Recommended Stories