ರೀಲ್ಸ್ ಹುಚ್ಚಿಗೆ ಬಿಜೆಪಿ ಮುಖಂಡನ ಪುತ್ರ ಸಾವು ಕೇಸ್, ಅಪ್ರಾಪ್ತ ಮಗನಿಗೆ ಕಾರು ಕೊಟ್ಟು ಜೈಲು ಸೇರಿದ ಅಪ್ಪ, ರೀಲ್ಸ್ ಹುಚ್ಚಿನಲ್ಲಿ ನಡೆದ ದುರಂತ ಘಟನೆ ಸಂಬಧ ಇದೀಗ ಅಪ್ರಾಪ್ತ ಮಗ ಹಾಗೂ ಅಪ್ಪ ಇಬ್ಬರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತ ಹುಡುಗರು ಸೇರಿಕೊಂಡು ರೀಲ್ಸ್ ಮಾಡಲು ಹೋಗಿ ಬಿಜೆಪಿ ಮುಖಂಡ ವೀರೇಶ್ ಸಂಗಳದ ಪುತ್ರ ನಿಮಿಷ ಸಂಗಳದ ಮೃತಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದಿತ್ತು. ಕಾರು ಹಾಗೂ ಸ್ಕೂಟಿ ನಡುವಿನ ರೀಲ್ಸ್ ಹುಚ್ಚಿಗೆ 15 ವರ್ಷದ ನಿಮಿಷ್ ಸಂಗಳದ ಮೃತಪಟ್ಟಿದ್ದ. ಈ ಪ್ರಕರಣ ಸಂಬಂಧ ಇದೀಗ ಹುಬ್ಬಳ್ಳಿ ಪೊಲೀಸರು ಅಪ್ರಾಪ್ತ ಮಗ ಹಾಗೂ ಅಪ್ಪ ಇಬ್ಬರನ್ನು ಬಂಧಿಸಿದ್ದಾರೆ.
25
ಅಪ್ರಾಪ್ತ ಮಗನಿಗೆ ಆಡಿ ಕಾರು ನೀಡಿದ್ದ ಅಪ್ಪ
ಆಡಿ ಕಾರು ಮಾಲೀಕ ನಾಗರಾಜ್ ರಾಯ್ಕರ ಹಾಗೂ ಆತನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಅಪ್ತಾಪ್ತ ಮಗನ ಕೈಗೆ ಆಡಿ ಕಾರು ನೀಡಿದ ನಾಗರಾಜ್ ರಾಯ್ಕರ್ ಇದೀಗ ಜೈಲು ಸೇರಿದ್ದಾರೆ. ಬಾಲಕ ನಿಮಿಷ್ ಸಂಗಳದ ಸಾವಿಗೆ ಕಾರಣವಾಗಿದ್ದ ಕಾರಣ ಇಬ್ಬರು ಅರೆಸ್ಟ್ ಆಗಿದ್ದಾರೆ. ಇಬ್ಬರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
35
ಏನಿದು ಘಟನೆ?
ನಾಗರಾಜ್ ರಾಯ್ಕ್ ಪುತ್ರ ಹಾಗೂ ವೀರೇಶ್ ಸಂಗಳದ ಪುತ್ರ ಹಾಗೂ ಗೆಳೆಯರು ಸೇರಿ ಆ್ಯಕ್ಷನ್ ಬ್ರೇಕ್ ರೀಲ್ಸ್ ಮಾಡಿದ್ದಾರೆ. ವೇಗವಾಗಿ ಬಂದು ದಿಢೀರ್ ಬ್ರೇಕ್ ಹಾಕುವ ರೀಲ್ಸ್ ಮಾಡಿದ್ದಾರೆ. ಆದರೆ ಈ ರೀಲ್ಸ್ ವೇಳೆ ಆಡಿ ಕಾರು ಸ್ಕೂಟಿಗೆ ಡಿಕ್ಕಿಯಾಗಿ ನಿಮಿಷ್ ಸಂಗಳದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವೇಗವಾಗಿ ಡ್ರೈವ್ ಮಾಡಿ ರೀಲ್ಸ್ ಹುಚ್ಚಿಗೆ ಅಪಘಾತ ಸಂಭವಿಸಿತ್ತು.
ನಾಗರಾಜ್ ರಾಯ್ಕ್ ಹಾಗೂ ಕಾರು ಚಲಾಯಿಸಿದ ನಾಗರಾಜ್ ಅವರ ಅಪ್ರಾಪ್ತ ಪುತ್ರನ ಬಂಧನ ಬೆನ್ನಲ್ಲೇ ಇದೀಗ ಸಂಕಷ್ಟ ಹೆಚ್ಚಾಗಿದೆ. ಉತ್ತರ ಪ್ರದೇಶದಿಂದ ಈ ಕಾರು ಖರೀದಿಸಲಾಗಿತ್ತು. ಆದರೆ 2022ರ ಡಿಸೆಂಬರ್‌ನಲ್ಲೇ ಈ ಕಾರಿನ ವಿಮೆ ಅಂತ್ಯಗೊಂಡಿದೆ. ಬಳಿಕ ವಿಮೆ ನವೀಕರಮ ಮಾಡಿಲ್ಲ. ಇನ್ಶೂರೆನ್ಸ್ ಇಲ್ಲದ ಕಾರು ಚಲಾಯಿಸಿ ಅಪಘಾತ ಸಂಭವಿಸಿದ್ದು, ನಾಗರಾಜ್‌ಗೆ ಕಾನೂನು ಸಂಕಷ್ಟ ತೀವ್ರಗೊಂಡಿದೆ.
55
ಪೋಷಕರೇ ಎಚ್ಚರ
ಉತ್ತರಪ್ರದೇಶದ ಅನಿಲಕುಮಾರ ಎಸ್. ಹೆಸರಿನಲ್ಲಿ 2013ರ ನವೆಂಬರ್ 13ರಂದು ಕಾರು ನೋಂದಣಿಯಾಗಿದೆ. ಬಳಸಿದ ಕಾರು ಖರೀದಿಸಿದ ಬಳಿಕ ಆರ್‌ಸಿ ಸೇರಿದಂತೆ ಹಲವು ದಾಖಲೆಗಳು ವರ್ಗಾವಣೆ ಆಗಿಲ್ಲ ಅನ್ನೋ ಆರೋಪಗಳು ಕೇಳಿಬಂದಿದೆ. ಹುಡುಗರ ರೀಲ್ಸ್ ಹುಚ್ಚಿಗೆ ಪೋಷಕರು ಬೆಂಬಲ ನೀಡಿದ ಆರೋಪ ಇದೀಗ ನಾಗರಾಜ್ ರಾಯ್ಕರ್ ಮೇಲಿದೆ.