ವಾಹನ ಸವಾರರಿಗೆ ಗುಡ್ ನ್ಯೂಸ್, ಆಗಸ್ಟ್ 15ರಿಂದ ಫಾಸ್ಟ್ಯಾಗ್ ಹೊಸ ನಿಯಮ

Published : Jun 18, 2025, 03:49 PM IST

ಆಗಸ್ಟ್ 15 ರಿಂದ ಹೊಸ ಫಾಸ್ಟ್ಯಾಗ್ ನಿಯಮ ಜಾರಿಯಾಗುತ್ತಿದೆ. ವಿಶೇಷ ಅಂದರೆ ಟೋಲ್‌ನಿಂದ 60 ಕಿಲೋಮೀಟರ್ ವ್ಯಾಪ್ತಿಯಲ್ಲಿರುವವರಿಗೆ ಗುಡ್ ನ್ಯೂಸ್. ವಾರ್ಷಿಕ ಪಾಸ್ ಪರಿಚಯಿಸಲಾಗುತ್ತಿದ್ದು, ಹತ್ತು ಹಲವು ಪ್ರಯೋಜನ ನೀಡಲಾಗಿದೆ. 

PREV
16

ವಾಹನ ಸವಾರರು ಹೆದ್ದಾರಿಗಳಲ್ಲಿ ಟೋಲ್ ಪಾವತಿ ಮಾಡಲೇಬೇಕು. ಭಾರತದಲ್ಲಿ ಸದ್ಯ ಫಾಸ್ಟ್ಯಾಗ್( FASTag) ಮೂಲಕ ಟೋಲ್ ಪಾವತಿ ಮಾಡಲಾಗುತ್ತದೆ. ಬಹುತೇಕ ಕಡೆಗಳಲ್ಲಿ ಟೋಲ್ ಪಾವತಿ ದುಬಾರಿ ಅನ್ನೋ ಮಾತುಗಳು ಕೇಳಿಬರುತ್ತಲೇ ಇದೆ. ಜೊತೆಗೆ ಒಂದಷ್ಟು ಕಿಲೋಮೀಟರ್ ಹೆದ್ದಾರಿಯಲ್ಲಿ ತೆರಳಿದರೂ ಸಂಪೂರ್ಣ ಪಾವತಿ ಮಾಡಬೇಕು ಅನ್ನೋ ಅಳಲು ಪದೇ ಪದೇ ಕೇಳಿಬರುತ್ತಿದೆ. ಇದರ ನಡುವೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಹತ್ವದ ಘೋಷಣೆ ಮಾಡಿದ್ದಾರೆ.

26

ಟೋಲ್ ಬೂತ್‌ನಿಂದ 60 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ವಾಹನ ಬಳಕೆದಾರರಿಗೆ ಟೋಲ್ ಪಾವತಿಯಲ್ಲಿ ಹೊಸ ನೀತಿಯಲ್ಲಿ ಕೆಲ ವಿನಾಯಿತಿಗಳಿವೆ. ಆಗಸ್ಟ್ 15, 2025ರಿಂದ ಹೊಸ ನಿಯಮ ಜಾರಿಗೆ ಬರುತ್ತಿದೆ. ಟೋಲ್ ಬೂತ್‌ನಿಂದ 60 ಕಿಲೋಮೀಟರ್ ವ್ಯಾಪ್ತಿಯಲ್ಲಿರುವವರಿಗೆ ವಾರ್ಷಿಕ ಪಾಸ್ 3,000 ರೂಪಾಯಿಗೆ ನೀಡಲಾಗುತ್ತಿದೆ.

36

3000 ರೂಪಾಯಿ ಪಾಸ್ ಪಡೆದುಕೊಂಡರೆ ಒಂದು ವರ್ಷ ವ್ಯಾಲಿಟಿಡಿ ಇರುತ್ತದೆ. ಈ ಪಾಸ್ ಮೂಲಕ 200 ಟ್ರಿಪ್ ಸಿಗಲಿದೆ. ಒಂದು ವರ್ಷ ಅಥವಾ 200 ಟ್ರಿಪ್ ಈ ಪಾಸ್ ಮೂಲಕ ಪಡೆಯಬಹುದು. ಇದು ವಾಣಿಜ್ಯ ವಾಹನಕ್ಕೆ ಅಲ್ಲ. ಖಾಸಗಿ ವಾಹನಳಾಗದ ಕಾರು, ಜೀಪು, ವ್ಯಾನ್ ಸೇರಿದಂತೆ ವಾಣಿಜ್ಯೇತರ ವಾಹನಗಳಿಗೆ ಈ ಪಾಸ್ ನೀಡಲಾಗುತ್ತದೆ.

46

ಹೊಸ ಪಾಸ್ ಶೀಘ್ರದಲ್ಲೇ ರಾಜ್ ಮಾರ್ಗ್ ಯಾತ್ರಾ ಆ್ಯಪ್ಲಿಕೇಶನ್, NHAI ಮತ್ತು MoRTH ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗಲಿದೆ. ಈ ನೀತಿಯಿಂದ 60 ಕಿಮೀ ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲದ ಸಮಸ್ಯೆ ಪರಿಹರಿಸಲಾಗುತ್ತಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

56

ವಾರ್ಷಿಕ ಪಾಸ್‌ಗಳಿಂದ ಟೋಲ್ ಬೂತ್‌ಗಳಲ್ಲಿನ ಪಾವತಿ, ಸುಲಭ ಸಂಚಾರ, ಕಾಯುವಿಕೆ ಸಮಯ ಕಡಿತ, ಯಾವುದೇ ಅಡೆ ತಡೆ ಇಲ್ಲದೆ ಸಂಚಾರ ಸೇರಿದಂತೆ ಹಲವು ಪ್ರಯೋಜನ ನೀಡಲಿದೆ. ಜೊತೆಗೆ 60 ಕಿಲೋಮೀಟರ್ ವ್ಯಾಪ್ತಿಯಲ್ಲರುವವರು ದುಬಾರಿ ಟೋಲ್ ಪಾವತಿಸಿ ಪ್ರತಿ ಬಾರಿ ಸಂಚಾರ ಮಾಡಬೇಕಾದ ಅನಿವಾರ್ಯತೆಯೂ ತಪ್ಪಲಿದೆ. ವಾರ್ಷಿಕ ಪಾಸ್‌ನಿಂದ ಹಣ ಉಳಿತಾಯ ಮಾಡಬಹುದು.

66

ಸದ್ಯ ಜಿಪಿಎಸ್ ಆಧಾರಿತ ಟೋಲ್ ಸಿಸ್ಟಮ್ ಜಾರಿಗೆ ತರಲು ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. 2026ರ ವೇಳೆಗೆ ಜಿಪಿಎಸ್ ಆಧಾರಿತ ಟೋಲ್ ಸಿಸ್ಟಮ್ ಜಾರಿಗೆ ಬರಲಿದೆ. ಈ ವ್ಯವಸ್ಥೆಯಲ್ಲಿ ಟೋಲ್ ರಸ್ತೆಯಲ್ಲಿ ಎಷ್ಟು ದೂರ ಕ್ರಮಿಸಿದರೆ ಅಷ್ಟು ಮಾತ್ರ ಪಾವತಿ ಮಾಡುವ ವ್ವವಸ್ಥೆ ಬರಲಿದೆ.

Read more Photos on
click me!

Recommended Stories