Fastag ಮೂಲಕ ಪ್ರತಿ ದಿನ ಸಂಗ್ರಹವಾಗುವ ಹಣವೆಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ!

First Published | Dec 26, 2020, 2:23 PM IST

ಜನವರಿ 1, 2021 ರಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಹೊಸ ವರ್ಷದಿಂದ ಹಳೇ ವಾಹನಗಳೂ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಲೇಬೇಕು. ಸದ್ಯ ಫಾಸ್ಟ್ ಟ್ಯಾಗ್ ಅಳವಡಿಕೆ ಹೆಚ್ಚಾಗುತ್ತಿದೆ. ಇಷ್ಟೇ ಅಲ್ಲ ಫಾಸ್ಟ್ ಟ್ಯಾಗ್ ಮೂಲಕ ಹಣ ಸಂಗ್ರಹಣೆ ಕೂಡ ಹೆಚ್ಚಾಗಿದೆ. ಪ್ರತಿ ದಿನ ಫಾಸ್ಟ್ ಟ್ಯಾಗ್ ಮೂಲಕ ಸಂಗ್ರವಾಗುವ ಹಣದ ಮಾಹಿತಿ ಇಲ್ಲಿದೆ.

2017ರಿಂದ ಹೊಸ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. 2020ರ ಎಪ್ರಿಲ್‌ ತಿಂಗಳಿನಿಂದ ಕಟ್ಟು ನಿಟ್ಟಿನ ನಿಯಮ ಜಾರಿಯಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಇದೀಗ 2021ರಿಂದಲೇ ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ ಎಂದಿದ್ದಾರೆ. ಈ ಮೂಲಕ ಹಳೇ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ.
Tap to resize

ಇದುವರೆಗೆ 2.20 ಕೋಟಿ ಫಾಸ್ಟ್ ಟ್ಯಾಗ್ ವಿತರಣೆ ಮಾಡಲಾಗಿದೆ. ಈ ಮೂಲಕ ಇದೀಗ ಬಹುತೇಕರು ಫಾಸ್ಟ್ ಟ್ಯಾಗ್ ಅಳವಡಿಸುತ್ತಿದ್ದಾರೆ. ಜನವರಿ 1, ರಿಂದ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.
ಡಿಸೆಂಬರ 24, 2020ರ ಅಂಕಿ ಅಂಶ ಪ್ರಕಾರ ಪ್ರತಿ ದಿನ 50 ಲಕ್ಷ ಫಾಸ್ಟ್ ಟ್ಯಾಗ್ ಟ್ರಾನ್ಸಾಕ್ಷನ್ ನಡೆಯುತ್ತಿದೆ. ಈ ಹಿಂದೆ ಈ ಸಂಖ್ಯೆ ತೀರಾ ಕಡಿಮೆ ಇತ್ತು. ಕಾರಣ ಬಹುತೇಕರು ನಗದು ಹಣ ನೀಡಿ ಟೋಲ್ ದಾಟುತ್ತಿದ್ದರು.
ಇದೀಗ ಪ್ರತಿ ದಿನ 80 ಕೋಟಿ ರೂಪಾಯಿ ಫಾಸ್ಟ್ ಟ್ಯಾಗ್ ಮೂಲಕ ದೇಶದಲ್ಲಿ ಸಂಗ್ರಹವಾಗುತ್ತಿದೆ. ಹೊಸ ವರ್ಷದಿಂದ ಈ ಮೊತ್ತ ದುಪ್ಪಟ್ಟಾಗಲಿದೆ.
ಫಾಸ್ಟ್ ಟ್ಯಾಗ್‌ನಿಂದ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅಮೂಲ್ಯ ಸಮಯ ಹಾಗೂ ಇಂಧನ ಉಳಿತಾಯವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕೊರೋನಾ ವೈರಸ್ ಕಾಲದಲ್ಲಿ ಸಾಮಾಜಿಕ ಅಂತರ ಅತೀ ಅಗತ್ಯ. ಫಾಸ್ಟ್ ಟ್ಯಾಗ್ ಮೂಲಕ ಟೋಲ್ ಗೇಟ್ ಬಳಿ ಪ್ರಯಾಣಿಕರು ಯಾರ ಜೊತೆ ಮಾತನಾಡುವ ವ್ಯವಹಿಸವು ಅಗತ್ಯವಿಲ್ಲ.
ಎಲೆಕ್ಟ್ರಾನಿಕ್ ರೀಡರ್ ಮೂಲಕ ಟೋಲ್ ಹಣ ಸಂದಾಯವಾಗಲಿದೆ. ಪ್ರಯಾಣಿಕರು ಸುರಕ್ಷಿತವಾಗಿ ಪ್ರಯಾಣ ಮಾಡಬಹುದು. ಹೀಗೆ ಹಲವು ಕಾರಣಗಳಿಂದ ಫಾಸ್ಟ್ ಟ್ಯಾಗ್ ಉಪಕಾರಿಯಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಹೇಳಿದೆ.

Latest Videos

click me!