ಹೊಸ ವರ್ಷದಿಂದ ಎಲ್ಲಾ ವಾಹನಕ್ಕೆ ಫಾಸ್ಟ್ ಟ್ಯಾಗ್ ಕಡ್ಡಾಯ; ಟೋಲ್‌ನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ!

First Published | Dec 24, 2020, 9:13 PM IST

ಕೇಂದ್ರ ಸರ್ಕಾರ 2016ರಲ್ಲಿ ವಾಹನಗಳಿಗೆ ಫಾಸ್ಟ್‌ ಟ್ಯಾಗ್ ನಿಯಮ ಜಾರಿ ಮಾಡಿದೆ. 2017ರಿಂದ ಬಿಡುಗಡೆಯಾಗುವ ಎಲ್ಲಾ ಹೊಸ ವಾಹನಗಳಿಗೆ ಫಾಸ್ಟ್ ಕಡ್ಡಾಯ ಮಾಡಲಾಗಿದೆ. ಇದೀಗ 2021ರ ಜನವರಿಗೆ 1 ರಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿದೆ. ಹೊಸ ನಿಯಮ ಮಾಹಿತಿ ಇಲ್ಲಿದೆ.

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಾರಿಗೆ ನಿಯಮದಲ್ಲಿ ಹಲವು ಬದಲಾವಣೆ ಹಾಗೂ ಆಧುನಿಕ ಸ್ಪರ್ಶ ನೀಡಿದ್ದಾರೆ. ಇದರಲ್ಲಿ ಫಾಸ್ಟ್ ಟ್ಯಾಕ್ ಕಡ್ಡಾಯ ಪ್ರಮುಖವಾಗಿದೆ.
ಜನವರಿ 1, 2021ರಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ವರ್ಚುವಲ್ ಕಾರ್ಯಕ್ರಮದ ಮೂಲಕ ಗಡ್ಕರಿ ಈ ಘೋಷಣೆ ಮಾಡಿದ್ದಾರೆ.
Tap to resize

ಫಾಸ್ಟ್ ಟ್ಯಾಗ್‌ನಿಂದ ಟೋಲ್ ಪ್ಲಾಜಾಗಳಲ್ಲಿ ಎಲೆಕ್ಟ್ರಾನಿಕ್ ಪಾವತಿ ದೇಶದಲ್ಲಿನ ಹೊಸ ವ್ಯವಸ್ಥೆಗೆ ಮುನ್ನಡಿ ಬರೆಯಲಿದೆ. ಕಾರಣ ಟೋಲ್ ಪ್ಲಾಜಾಗಳಲ್ಲಿ ಯಾರೂ ಕೂಡ ಹಣ ಪಾವತಿಗಾಗಿ ನಿಲ್ಲುವ ಅವಶ್ಯಕತೆ ಇಲ್ಲ ಎಂದು ಗಡ್ಕರಿ ಹೇಳಿದ್ದಾರೆ.
ಟೋಲ್ ಪ್ಲಾಜಾಗಳಲ್ಲಿ ಸುಗಮ ಸಂಚಾರದಿಂದ ಸಮಯ ಹಾಗೂ ಇಂಧನ ಉಳಿತಾಯವಾಗಲಿದೆ. ಉದ್ದೇಶಿತ ಪ್ರಯಾಣವನ್ನು ನಿಗದಿತ ಸಮಯದಲ್ಲಿ ತಲುಪಲು ಸಾಧ್ಯವಿದೆ.
2016ರಲ್ಲಿ ಜಾರಿಗೆ ತಂದ ಫಾಸ್ಟ್ ಟ್ಯಾಗ್ ಮೊದಲ ವರ್ಷದಲ್ಲಿ ಲಕ್ಷ ಫಾಸ್ಟ್ ಟ್ಯಾಗ್ ವಿತರವಣೆ ಮಾಡಲಾಯಿತು. ಮೊದಲ ಹಂತದಲ್ಲೇ ಭರ್ಜರಿ ಯಶಸ್ಸು ಸಿಕ್ಕಿತ್ತು.
ಹಂತ ಹಂತವಾಗಿ ಫಾಸ್ಟ್ ಟ್ಯಾಗ್ ನಿಯಮಗಳನ್ನು ಹೊಸ ವಾಹನಗಳಿಗೆ, ಬಳಿಕ ಎಲ್ಲಾ ವಾಹನಗಳಿಗೆ ವಿಸ್ತರಿಸಲಾಯಿತು. 2017ರಲ್ಲಿ 7 ಲಕ್ಷ ಇದ್ದ ಫಾಸ್ಟ್ ಟ್ಯಾಗ್ ವಿತರಣಯಾಗಿತ್ತು.
2018ರಲ್ಲಿ ಈ ಸಂಖ್ಯೆ 34 ಲಕ್ಷ ದಾಟಿದೆ. ಈ ಮೂಲಕ ದೇಶ ಇದೀಗ ಡಿಜಿಟಲ್ ಪೇಮೆಂಟ್‌ ಮೊರೆ ಹೋಗಿದೆ. ಇನ್ನು ಹಳೇ ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಕೊಳ್ಳಬೇಕಿದೆ ಎಂದು ಗಡ್ಕರಿ ಹೇಳಿದ್ದಾರೆ.
click me!