ಫೆಬ್ರವರಿ 15 ರಿಂದ ಭಾರತದಲ್ಲಿ ಟೋಲ್ ಪಾವತಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಫಾಸ್ಟ್ ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಹಣವನ್ನು ದಂಡವಾಗಿ ಪಾವತಿಸಬೇಕು.
undefined
ಫಾಸ್ಟ್ ಟ್ಯಾಗ್ ಕಡ್ಡಾಯದ ಬಳಿಕ ಇದೀಗ ಭಾರತದ ಬಹುತೇಕ ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿದೆ. ಇದರಿಂದ ಫಾಸ್ಟ್ ಟ್ಯಾಗ್ ಮೂಲಕ ಒಂದೇ ದಿನ ದಾಖಲೆಯ 102 ಕೋಟಿ ರೂಪಾಯಿ ಸಂಗ್ರಹವಾಗಿದೆ.
undefined
ಶುಕ್ರವಾರ ಒಂದೇ ದಿನ ಫಾಸ್ಟ್ ಟ್ಯಾಗ್ ಮೂಲಕ 102 ಕೋಟಿ ರೂಪಾಯಿ ಸಂಗ್ರವಾಗಿದೆ. ಇದು ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿದ ಬಳಿಕ ಆದಾಯದಲ್ಲಿ ಏರಿಕೆಯಾಗಿರುವುದು ಸ್ಪಷ್ಟವಾಗಿ ಗೋಚರಿಸಿದೆ.
undefined
ಈ ವರೆಗೆ ಒಂದು ದಿನ 85 ಕೋಟಿ ರೂಪಾಯಿ ಸಂಗ್ರವಾಹಿರುವುದು ಗರಿಷ್ಠವಾಗಿತ್ತು. ಆದರೆ ಈ ದಾಖಲೆ ಹಿಂದಿಕ್ಕಲಾಗಿದೆ. ನಗದು ಹಣ ಪಾವತಿಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.
undefined
ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಹಲವು ಗಡುವು ನೀಡಿತ್ತು. ಬಳಿಕ ಗಡುವಿ ವಿಸ್ತರಿಸಿತ್ತು. ಫೆ.15ರ ಗಡುವು ಅಂತ್ಯವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಈ ಬಾರಿ ಗಡುವು ವಿಸ್ತರಿಸುವುದಿಲ್ಲ ಎಂದಿತ್ತು
undefined
ಟೋಲ್ ಗೇಟ್ ಬಳಿ ಕಾಯುವಿಕೆ ಸೇರಿದಂತೆ ಹಲವು ಸಮಸ್ಯೆಗೆ ಮುಕ್ತಿ ನೀಡಲು ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿದೆ.
undefined
ಫಾಸ್ಟ್ ಟ್ಯಾಗ್‌ನಿಂದ ಕೇಂದ್ರಕ್ಕೆ ಹರಿದು ಬರುತ್ತಿದ್ದ ಆದಾಯ ಹೆಚ್ಚಾಗಿದೆ. ಸೋರಿಕೆಯು ತಪ್ಪಿದೆ. ಕಡ್ಡಾಯ ಮಾಡಿದ ಬಳಿಕವೂ ಇನ್ನು ಕೆಲ ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಕೆ ಮಾಡಿಲ್ಲ.
undefined