ಆನ್‌ಲೈನ್ ಮೂಲಕ ಡ್ರೈವಿಂಗ್ ಲೈಸೆನ್ಸ್ ನವೀಕರಣ,ತಿದ್ದುಪಡಿಗೆ ಆಧಾರ್ ಕಡ್ಡಾಯ!

First Published | Feb 10, 2021, 2:39 PM IST

ಆಧಾರ್ ಕಾರ್ಡ್ ಮಹತ್ವದ ದಾಖಲೆಯಾಗಿದೆ. ಹಲವು ಸರ್ಕಾರಿ ದಾಖಲೆಗಳು, ಗುರುತಿನ ಚೀಟಿ ಸೇರಿದಂತೆ ಅತ್ಯವಶ್ಯಕ ಕಾರ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಇದೀಗ ಡ್ರೈವಿಂಗ್ ಲೆೈಸೆನ್ಸ್ ನವೀಕರಣ ಹಾಗೂ ತಿದ್ದುಪಡಿಗೆ ಆಧಾರ್ ಕಡ್ಡಾಯ ಮಾಡಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಡ್ರೈವಿಂಗ್ ಲೈಸೆನ್ಸ್ ತಿದ್ದುಪಡಿ ಹಾಗೂ ನವೀಕರಣ ಕುರಿತು ಮಹತ್ವದ ಸೂಚನೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನೀಡಿದ್ದಾರೆ.
ಡಿಜಿಟಲೀಕರಣದಿಂದ ಭಾರತದಲ್ಲಿ ಬಹುತೇಕ ಸರ್ಕಾರಿ ಸೇವೆಗಳು, ಅರ್ಜಿಗಳು ಆನ್‌ಲೈನ್ ಮೂಲಕವೇ ನಡೆಯುತ್ತಿದೆ. ಇದಕ್ಕೆ ಡ್ರೈವಿಂಗ್ ಲೆಸೆನ್ಸ್ ಕೂಡ ಹೊರತಲ್ಲ. ಇದೀಗ ಆನ್‌ಲೈನ್ ಮೂಲಕ ಲೈಸೆನ್ಸ್ ನವೀಕರಣಕ್ಕೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಈ ಕುರಿತ ಕರಡು ಪ್ರಸ್ತಾವನೆಯನ್ನು ಸಚಿವಾಲಯ ಸಲ್ಲಿಕೆ ಮಾಡಿದೆ
Tap to resize

ಆನ್‌ಲೈನ್ ಮೂಲಕ ಡ್ರೈವಿಂಗ್ ಲೆಸೆನ್ಸ್ ತಿದ್ದುಪಡಿ, ನವೀಕರಣಕ್ಕೆ ಆಧಾರ್ ಕಾರ್ಡ್ ನಂಬರ್ ಕಡ್ಡಾಯ ಮಾಡಲಾಗಿದೆ. ಡ್ರೈವಿಂಗ್ ಲೈಸೆನ್ಸ್ ಕುರಿತು 16 ಸೇವೆಗಳು ಕಚೇರಿಗೆ ತೆರಳದೆ ಆನ್‌ಲೈನ್ ಮೂಲಕವೇ ಮಾಡಬಹುದು. ಈ ಮೂಲಕ ಶೀಘ್ರದಲ್ಲೇ ಆಧಾರ್ ಕಾಡ್ರ್ ಕಡ್ಡಾಯವಾಗಲಿದೆ.
ಡ್ರೈವಿಂಗ್ ಲೈಸೆನ್ಸ್ ವಿಳಾಸ ಬದಲಾವಣೆ, ತಿದ್ದುಪಡಿ, ನವೀಕರಣ, ವಾಹನ ಮಾಲೀಕತ್ವ ಬದಲಾವಣೆ ಸೇರಿದಂತೆ ಹಲವು ಸೇವೆಗಳನ್ನು ಆನ್‌ಲೈನ್ ಮೂಲಕವೇ ಮಾಡಿಮುಗಿಸಬಹುದು. ಆದರೆ ಈ ಸೇವೆಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ.
ಆಧಾರ್ ಕಾರ್ಡ್ ಕಡ್ಡಾಯ ಕರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಜಾರಿಗೆ ತಂದಿರುವ ಹೊಸ ನೀತಿ ಕುರಿತು ಸಲಹೆ ಹಾಗೂ ಅಡತೆಡೆಗಳ ಕುರಿತು ಮಾಹಿತಿಯನ್ನು ಕೇಳಿದೆ.
ಆಧಾರ್ ಕಾರ್ಡ್ ನಂಬರ್ ಮಾಹಿತಿ ನೀಡಿಲು ಇಚ್ಚಿಸದವರು, ಅಥವಾ ಬಹಿರಂಗಪಡಿಸಲು ಬಯಸದವರು, ನೇರವಾಗಿ ಕಚೇರಿಗೆ ತೆರಳಿ ಡ್ರವಿಂಗ್ ಲೈಸೆನ್ಸ್ ನವೀಕರಣ, ತಿದ್ದುಪಡಿಯನ್ನು ಮಾಡಿಕೊಳ್ಳಬಹುದು. ಕಚೇರಿಗೆ ತೆರಳಿ ಮಾಡುವಾಗ ಆಧಾರ್ ಕಡ್ಡಾಯವಲ್ಲ.
ಆನ್‌ಲೈನ್ ಮೂಲಕ ಡ್ರೈವಿಂಗ್ ಲೆಸೆನ್ಸ್ ನವೀಕರಣಕ್ಕೆ ಆಧಾರ್ ಕಾರ್ಡ್ ನಂಬರ್ ಕಡ್ಡಾಯ ಮಾಡಲು ಕೆಲ ಕಾರಣಗಳಿವೆ. ಆನ್‌ಲೈನ್ ಮೂಲಕ ನಕಲಿ ದಾಖಲೆ ನೀಡುವಿಕೆಯನ್ನು ತಪ್ಪಿಸಲು ಈ ರೀತಿ ಮಾಡಲಾಗಿದೆ
ಆನ್‌ಲೈನ್ ಮೂಲಕವೇ ಡ್ರೈವಿಂಗ್ ಲೆಸೆನ್ಸ್ ನವೀಕರಣದ ವೇಳೆ ಹಲವು ನಕಲಿ ದಾಖಲೆಗಳು ಅಪ್‌ಲೋಡ್ ಆಗುತ್ತಿದ್ದು, ರಸ್ತೆ ಸಾರಿಗೆ ಸಚಿವಾಲಯಕ್ಕೆ ತೀವ್ರ ತಲೆನೋವಾಗಿತ್ತು. ಇದೀಗ ಈ ಸಮಸ್ಯೆಗೆ ಉತ್ತರ ಹುಡುಕಲಾಗಿದೆ.

Latest Videos

click me!