ಫೆ.15 ಮಧ್ಯರಾತ್ರಿಗೆ FASTag ಗಡುವು ಅಂತ್ಯ; ದುಬಾರಿ ದಂಡ ತಪ್ಪಿಸಿಕೊಳ್ಳಲು ಹೀಗೆ ಮಾಡಿ!

First Published Feb 14, 2021, 7:52 PM IST

ಟೋಲ್ ಗೇಟ್ ಬಳಿ ನಗದು ಪಾವತಿ ಮಾಡುವ ಪದ್ದತಿಗೆ ಅಂತ್ಯಹಾಡಲು ಕೇಂದ್ರ ಸರ್ಕಾರ ಹಣ ಪಾವತಿಗೆ   FASTag(ಫಾಸ್ಟ್ ಟ್ಯಾಗ್) ಜಾರಿಗೆ ತಂದಿದೆ. ಇದೀಗ ಈ  FASTag ಗಡುವು ಫೆಬ್ರವರಿ 15ಕ್ಕೆ ಅಂತ್ಯಗೊಳ್ಳಲಿದೆ. FASTag ಇಲ್ಲದ ವಾಹನಗಳ ಕತೆ ಏನು? ದುಬಾರಿ ದಂಡ ತಪ್ಪಿಸಿಕೊಳ್ಳಲು ಏನು ಮಾಡಬೇಕು? ಇಲ್ಲಿದೆ.

ದೇಶದಲ್ಲಿ ಡಿಜಿಟಲ್ ಕ್ರಾಂತಿಗೆ ಹೊಸ ವೇಗ ನೀಡಿದ ನರೇಂದ್ರ ಮೋದಿ ಸರ್ಕಾರ, ಎಲ್ಲಾ ಕ್ಷೇತ್ರದಲ್ಲಿ ಹಲವು ಬದಲಾವಣೆ ಮಾಡಿದೆ. ಇದರಲ್ಲಿ FASTag ಕೂಡ ಸೇರಿದೆ.
undefined
2021ರ ಜನವರಿ 1ಕ್ಕೆ ನೀಡಿದ್ದ FASTag ಗಡುವನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಫೆ.15ಕ್ಕೆ ಮುಂದೀಡಿದ್ದರು. ಆದರೆ ಇದೀಗ ಮತ್ತೆ ಮುಂದೂಡುವ ಯಾವುದೇ ಪ್ರಶ್ನೆ ಇಲ್ಲ ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
undefined
2016ರಲ್ಲಿ ಕೇಂದ್ರ ಸರ್ಕಾರ ಟೋಲ್ ಗೇಟ್ ಹಣ ಪಾವತಿಗೆ FASTag ಕಡ್ಡಾಯ ಮಾಡಲಾಗಿತ್ತು. ಆದರೆ ಜಾರಿಗೆ ಹಲವು ಭಾರಿ ಗಡುವು ನೀಡಿ ಬಳಿಕ ಮುಂದುಡಲಾಗಿತ್ತು.
undefined
ಫೆಬ್ರವರಿ 15ರ ಮಧ್ಯರಾತ್ರಿ 12 ಗಂಟೆಗೆ FASTag ವಿನಾಯಿತಿ ಅಂತ್ಯಗೊಳ್ಳಲಿದೆ. ಫೆ.16ರಿಂದ ಟೋಲ್‌ಗೇಟ್ ಮುಂದೆ ಸಾಗಲು ವಾಹನಗಳಿಗೆ FASTag ಕಡ್ಡಾಯವಾಗಿದೆ. ಇಲ್ಲದಿದ್ದರೆ ದುಬಾರಿ ದಂಡ ಪಾವತಿಸಬೇಕಾಗುತ್ತದೆ.
undefined
ಟೋಲ್ ಗೇಟ್ ಬಳಿ ಹಣಪಾವತಿ ಮಾಡುವು ಟೋಲ್ ಗೇಟ್ ಕೂಡ ಇನ್ನು ಇರುವುದಿಲ್ಲ. FASTag ಟೋಲ್ ಗೇಟ್ ಮೂಲಕವೇ ಸಾಗಬೇಕು. FASTag ಇಲ್ಲದಿದ್ದರೆ ದುಪ್ಪಟ್ಟು ಹಣ ಪಾವತಿ ಮಾಡಬೇಕು.
undefined
FASTag ಸಂಕಷ್ಟ ತಪ್ಪಿಸಲು ಸರಳ ವಿಧಾನ ಅನುಸರಿಸಿದರೆ ದಂಡದಿಂದ ಮುಕ್ತರಾಗಬಹುದು. ಸದ್ಯ ಮಾರುಕಟ್ಟೆಯಲ್ಲಿ ಐಸಿಐಸಿ, ಹೆಚ್‌ಡಿಎಫ್‌ಸಿ, ಪೇಟಿಎಂ ಸೇರಿದಂತೆ ಹಲವು ಫಾಸ್ಟ್‌ಟ್ಯಾಗ್ ಲಭ್ಯವಿದೆ.
undefined
ವಾಹನ ರಿಜಿಸ್ಟ್ರೇಶನ್ ನಂಬರ್ ನೋಂದಣಿ ಮಾಡಿಕೊಂಡು ಫಾಸ್ಟ್‌ಟ್ಯಾಗ್ ಪಡೆದರೆ ಸಾಕು, ವಾಹನದ ಮುಂಭಾಗದ ಗಾಜಿನ ಮೇಲೆ FASTag ಅಂಟಿಸಿ, ಮೊಬೈಲ್ ರೀತಿ ರಿಚಾರ್ಜ್ ಮಾಡಿದರೆ ಎಲ್ಲಾ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
undefined
ಫಾಸ್ಟ್‌ಟ್ಯಾಗ್ ರೀಚಾರ್ಜ್ ಕೂಡ ಸರಳ ಹಾಗೂ ಸುಲಭವಾಗಿದೆ. ಗೂಗಲ್ ಪೇ, ಪೇಟಿಎಂ, ನೆಟ್ ಬ್ಯಾಂಕಿಂಗ್ ಸೇರಿದಂತೆ ಹಲವು ಸರಳ ವಿಧಾನದಲ್ಲಿ FASTag ರಿಚಾರ್ಜ್ ಮಾಡಿಕೊಳ್ಳಬಹುದು.
undefined
click me!