ಪೆಟ್ರೋಲ್ ಬೇಕಿದ್ದರೆ ಹೆಲ್ಮೆಟ್ ಕಡ್ಡಾಯ, ಡಿ.8ರಿಂದ ಹೊಸ ನಿಯಮ!

First Published | Dec 5, 2020, 10:18 PM IST

ಮೋಟಾರು ವಾಹನ ತಿದ್ದುಪಡಿ ಮಾಡಿ ದಂಡದ ಮೊತ್ತವನ್ನು ದುಪ್ಪಟ್ಟು ಮಾಡಿದ್ದರೂ, ಟ್ರಾಫಿಕ್ ನಿಯಮ ಉಲ್ಲಂಘನೆ ಮಾತ್ರ ಸಂಪೂರ್ಣ ನಿಂತಿಲ್ಲ. ಪ್ರಮುಖವಾಗಿ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಯಲ್ಲಿದ್ದರೂ ಹಲವರು ಪಾಲಿಸುತ್ತಿಲ್ಲ. ಪ್ರಾಣ ರಕ್ಷಕ ಹೆಲ್ಮೆಟ್ ಕಡ್ಡಾಯಗೊಳಿಸಲು ಪೊಲೀಸರು ಇದೇ ಡಿಸೆಂಬರ್ 8 ರಿಂದ ಹೊಸ ನಿಯಮ ಜಾರಿಗೆ ತರುತ್ತಿದ್ದಾರೆ.

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿದೆ. ನಿಯಮದ ದೃಷ್ಟಿಯಿಂದ ಮಾತ್ರವಲ್ಲ, ಸವಾರ ಹಾಗೂ ಹಿಂಬದಿ ಸವಾರರ ಪ್ರಾಣ ರಕ್ಷಣೆಗೂ ಹೆಲ್ಮೆಟ್ ಅಗತ್ಯವಾಗಿದೆ.
ಹೆಲ್ಮೆಟ್ ರಹಿತ ಸವಾರರಿಗೆ ದುಬಾರಿ ದಂಡ ವಿಧಿಸಲಾಗುತ್ತಿದೆ. ಇದೀಗ ಪ್ರತಿ ದ್ವಿಚಕ್ರ ವಾಹನ ಸವಾರ ಹೆಲ್ಮೆಟ್ ಧರಿಸುವಂತೆ ಮಾಡಲು ಪೊಲೀಸರು , ಹೆಲ್ಮೆಟ್ ಧರಿಸಿದವರಿಗೆ ಮಾತ್ರ ಪೆಟ್ರೋಲ್ ಎಂಬ ಹೊಸ ನಿಯಮ ಜಾರಿಗೆ ತರುತ್ತಿದ್ದಾರೆ.
Tap to resize

ಈಗಾಗಲೇ ಹಲವು ನಗರಗಳಲ್ಲಿ ನೋ ಹೆಲ್ಮೆಟ್, ನೋ ಪೆಟ್ರೋಲ್ ನಿಯಮ ಜಾರಿಯಲ್ಲಿದೆ. ಇದೀಗ ಕೋಲ್ಕತಾದಲ್ಲಿ ಈ ನಿಯಮ ಜಾರಿಗೊಳಿಸಲು ಪೊಲೀಸರು ಮುಂದಾಗಿದ್ದಾರೆ.
ಡಿಸೆಂಬರ್ 8 ರಿಂದ ಕೋಲ್ಕತಾ ನಗರದಲ್ಲಿ ಪೆಟ್ರೋಲ್ ಸಿಗಬೇಕಾದರೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಲೇಬೇಕು.
ಪ್ರಾಯೋಗಿಕವಾಗಿ ಡಿಸೆಂಬರ್ 8 ರಿಂದ ಒಟ್ಟು 60 ದಿನಗಳ ಕಾಲ ನೂತನ ನಿಯಮ ಜಾರಿ ಮಾಡಲು ಕೋಲ್ಕತಾ ಪೊಲೀಸರು ಮುಂದಾಗಿದ್ದಾರೆ.
ಈಗಾಗಲೇ ನಗರದ ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರಿಗೆ ಸಿಬ್ಬಂದಿಗಳಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಈ ಮೂಲಕ ನಗರದಲ್ಲಿ ಕಟ್ಟು ನಿಟ್ಟಾಗಿ ನೂತನ ನಿಯಮ ಜಾರಿಗೊಳಿಸಲು ಪೊಲೀಸರು ಮುಂದಾಗಿದ್ದಾರೆ.
ಇದೀಗ ಬೆಂಗಳೂರು ಸೇರಿದಂತೆ ಹಲವು ನಗರಗಳ ಚಿತ್ತ ಕೋಲ್ಕತಾ ಮೇಲಿದೆ.ಇದಕ್ಕೆ ಕಾರಣವೂ ಇದೆ. ಕೋಲ್ಕತಾದಲ್ಲಿ ನಿಯಮ ನಿರೀಕ್ಷಿತ ಫಲ ನೀಡಿದರೆ, ಇತರ ನಗರಗಳಲ್ಲೂ ಜಾರಿಯಾಗುವುದರಲ್ಲಿ ಅನುಮಾನವಿಲ್ಲ.
ಪ್ರಾಣ ರಕ್ಷಕನಾಗಿ ಕಾರ್ಯನಿರ್ವಹಿಸುವ ಹೆಲ್ಮೆಟ್ ಧರಿಸುವುದು ಅತ್ಯುತ್ತಮ. ಇದರ ಪೊಲೀಸರ ಕಣ್ತಪ್ಪಿಸಲು ಕಳಪೆ ಗುಣಮಟ್ಟದ ಹೆಲ್ಮೆಟ್ ಬದಲು ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವುದು ಸೂಕ್ತ.

Latest Videos

click me!