ಲಾಕ್‌ಡೌನ್ ವೇಳೆ ಹಲವರು ತಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಹೀಗೆ ಲಾಕ್‌ಡೌನ್ ಸಮಯದಲ್ಲಿ ಮೂಡಿದ ಒಂದು ಐಡಿಯಾ ಇದೀಗ ಅತೀ ದೊಡ್ಡ ಉದ್ಯಮವಾಗಿ ಬದಲಾಗಿದೆ. ಪಂಜಾಬ್‌ನ ಝಿರಕ್‌ಪುರ್‌ನ 40 ವರ್ಷದ ಕಾರ್ಪಂಟರ್ ಧನಿ ರಾಮ್ ಸಗ್ಗು ಇದೀಗ ಭಾರತ ಮಾತ್ರವಲ್ಲ ವಿಶ್ವದಲ್ಲೇ ಭಾರಿ ಜನಪ್ರಿಯರಾಗಿದ್ದಾರೆ.
undefined
ಎಪ್ರಿಲ್ ತಿಂಗಳಲ್ಲಿ ಮನೆಯಲ್ಲಿ ಬಿದ್ದಿದ್ದ ಫ್ಲೈವುಡ್, ಮರದ ತುಂಡುಗಳಿಂದ ವಿಶೇಷ ಸೈಕಲ್ ಮಾಡಲು ನಿರ್ಧರಿಸಿದ ಧನಿ ರಾಮ್, ರೇಖಾ ಚಿತ್ರ ಬರೆದು ಅದೇ ರೀತಿ ಮರದ ಸೈಕಲ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.
undefined
ಆರಂಭಿಕ 2 ಪ್ರಯತ್ನಗಳಲ್ಲಿ ಸಂಪೂರ್ಣ ಯಶಸ್ಸು ಸಿಗಲಿಲ್ಲ. ಕಾರಣ ಸೈಕಲ್ ಪೂರ್ತಿಗೊಂಡಿತ್ತು. ಆದರೆ ಸೈಕಲ್ ಚಲಿಸುವಾಗ ಕೆಲ ಸಮಸ್ಯೆಗಳು, ಮರದ ತುಂಡುಗಳ ಮುರಿಯುತ್ತಿತ್ತು. ಆದರೆ 3ನೇ ಪ್ರಯತ್ನದಲ್ಲಿ ಧನಿ ರಾಮ್ ಯಶಸ್ಸು ಸಾಧಿಸಿದರು.
undefined
ಸಂಪೂರ್ಣ ಮರದಿಂದ ಸೈಕಲ್ ತಯಾರಿಸಿ ಧನಿ ರಾಮ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಜನಪ್ರಿಯರಾದರು. ಬೇಡಿಕೆ ಹೆಚ್ಚಾಗತೊಡಗಿತು. ಈ ವೇಳೆ ತನ್ನ ಸಣ್ಣ ಆಲೋಚನೆಯನ್ನು ಉದ್ಯಮವಾಗಿ ಪರಿವರ್ತಿಸಿ ಸೈಕಲ್ ನಿರ್ಮಾಣ ಕಾರ್ಯದಲ್ಲಿ ತೊಡಗಿದರು.
undefined
ಪರಿಸರಕ್ಕೆ ಪೂರಕವಾದ ಸೈಕಲ್ ನಿರ್ಮಾಣ ಅತ್ಯಂತ ಯಶಸ್ವಿಯಾಗತೊಡಗಿತು. ಸೈಕಲ್‌ನಲ್ಲಿ ಕೆಲ ಬದಲಾವಣೆ ಮಾಡಿ ಮತ್ತಷ್ಟು ಆಕರ್ಷ ಮಾಡಿದ್ದಾರೆ. ಸೈಕಲ್‌ಗೆ ವಾಟರ್‌ಪ್ರೂಫ್, ಪಾಲಿಶ್ ಬಳಿದು ಬಾಳಿಕೆಯನ್ನು ಹೆಚ್ಚಿಸಿದ್ದಾರೆ.
undefined
20 ಕೆಜಿ ತೂಕವಿರುವ ಈ ಮರದ ಸೈಕಲ್ 150 ಕೆಜಿ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ. ಆರಂಭದಲ್ಲಿ ಮರದ ರಿಮ್, ಪೆಡಲ್ ಬಳಸಿದ್ದ ಧನಿ ರಾಮ್ ಇದೀಗ ಮೆಟಲ್ ರಿಮ್ ಹಾಗೂ ಪೆಡಲ್ ಬಳಿಸಿ ಸೈಕಲ್ ವೇಗವನ್ನು ಹೆಚ್ಚಿಸಿದ್ದಾರೆ.
undefined
ಕಾರ್ಪೆಂಟರ್ ಆಗಿರುವ ಧನಿ ರಾಮ್, ಲಾಕ್‌ಡೌನ್ ಸಮಯದಲ್ಲಿ ಮಾಡಿದ ಈ ಸೈಕಲ್ ಇದೀಗ 15,000 ರೂಪಾಯಿ ಬೆಲೆಗೆ ಮಾರಾಟವಾಗುತ್ತಿದೆ. ಪಂಜಾಬ್ ರಾಜ್ಯದಲ್ಲಿ ಭಾರಿ ಬೇಡಿಕೆ ಮರದ ಸೈಕಲ್ ಆಗಿ ಹೊರಮ್ಮಿದೆ.
undefined
ಹರ್ಯಾಣ ಸೇರಿದಂತೆ ಇತರ ರಾಜ್ಯಗಳಿಂದ ಮರದ ಸೈಕಲ್‌ಗೆ ಬೇಡಿಕೆ ಬರುತ್ತಿದೆ. ಇದೀಗ ವಿದೇಶದಿಂದಲೂ ಧನಿ ರಾಮ್ ಸಗ್ಗು ಮರದ ಸೈಕಲ್‌ಗೆ ಆರ್ಡರ್‌ಗಳು ಬರುತ್ತಿವೆ.
undefined
ಇಕೋ ಫ್ರೆಂಡ್ಲಿ ಸೈಕಲ್ ಇದೀಗ ವಿಶ್ವ ಮಟ್ಟದಲ್ಲಿ ಭಾರಿ ಜನಪ್ರಿಯವಾಗಿದೆ. ಕೆನಡಾ ಹಾಗೂ ಸೌತ್ ಆಫ್ರಿಕಾದಿಂದ ಮರದ ಸೈಕಲ್‌ಗೆ ಆರ್ಡರ್ ಬಂದಿದೆ. ಆರಂಭದಲ್ಲಿ ಮರದ ಸೈಕಲ್ ನಿರ್ಮಿಸಲು ಒಂದು ತಿಂಗಳು ಬೇಕಿತ್ತು. ಇದೀಗ 1 ವಾರದಲ್ಲಿ ಪೂರ್ಣಗೊಳಿಸಲಾಗುತ್ತಿದೆ.
undefined
ಸೈಕಲ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಸೈಕಲ್‌ನಲ್ಲಿ ಕೆಲ ಬದಲಾವಣೆ ಮಾಡಲು ಧನಿ ರಾಮ್ ಮುಂದಾಗಿದ್ದಾರೆ. ಇದೇ ಸೈಕಲ್‌ಗೆ ಗೇರ್ ಹಾಗೂ ಡಿಸ್ಕ್ ಬ್ರೇಕ್ ಸೇರಿದಂತೆ ಮತ್ತಷ್ಟು ಫೀಚರ್ಸ್ ಸೇರಿಸಲು ಮುಂದಾಗಿದ್ದಾರೆ.
undefined