ಹೆಲ್ಮೆಟ್ ಫುಲ್ ಫಾರ್ಮ್ ಗೊತ್ತಾದರೆ ನೀವು ಧರಿಸುವುದು ಮಿಸ್ ಮಾಡಲ್ಲ

Published : May 09, 2025, 06:20 PM IST

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್(HELMET) ಕಡ್ಡಾಯ. ಹಲವು ಬಾರಿ ಹೆಲ್ಮೆಟ್ ಇಲ್ಲದೆ ಭಾರಿ ಬೆಲೆ ತೆತ್ತ ಉದಾಹರಣೆಗಳಿವೆ. ನೀವು ಹೆಲ್ಮೆಟ್ ಪೂರ್ಣ ರೂಪ(Full form) ಗೊತ್ತಾದರೆ ಯಾವತ್ತೂ ಧರಿಸದೇ ಇರಲ್ಲ.   

PREV
16
ಹೆಲ್ಮೆಟ್ ಫುಲ್ ಫಾರ್ಮ್ ಗೊತ್ತಾದರೆ ನೀವು ಧರಿಸುವುದು ಮಿಸ್ ಮಾಡಲ್ಲ

ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ (HELMET) ಮಿಸ್ ಮಾಡಿಕೊಳ್ಳುವಂತಿಲ್ಲ. ದ್ವಿಚಕ್ರ ವಾಹನ ರೈಡ್ ಮಾಡುವವರು ಮಾತ್ರವಲ್ಲ, ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯವಾಗಿದೆ. ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಜೀವ ಉಳಿಸುತ್ತದೆ. ಆದರೆ ಹಲವು ಸಂದರ್ಭದಲ್ಲಿ ಹೆಲ್ಮೆಟ್ ಇದ್ದರೂ ಧರಿಸದೆ ಅಪಾಯ ಆಹ್ವಾನ ಮಾಡಿದ ಘಟನೆಗಳು ನಡೆದಿದೆ. ವಿಶೇಷ ಅಂದರೆ ಹೆಲ್ಮೆಟ್ ಪದದ ಪೂರ್ಣ ರೂಪ (Full form) ಗೊತ್ತಾದರೆ ನೀವು ಹೆಲ್ಮೆಟ್ ಧರಿಸುವುದು ಯಾವತ್ತೂ ಮಿಸ್ ಮಾಡೋದಿಲ್ಲ.

26

ಕೂದಲು ಹಾಳಾಗುತ್ತದೆ, ಲುಕ್ ಕಡಿಮೆಯಾಗುತ್ತದೆ ಅನ್ನೋ ಕಾರಣಕ್ಕೆ ಹಲವರು ಹೆಲ್ಮೆಟ್ ಧರಿಸುವುದಿಲ್ಲ. ಇನ್ನು ಇಲ್ಲೀವರೆಗೆ, ಪೋಲೀಸ್ ಇರಲ್ಲ ಅನ್ನೋ ಕಾರಣಕ್ಕೆ ಹೆಲ್ಮೆಟ್‌ನಿಂದ ದೂರ ಉಳಿಯುವ ಮಂದಿ ಮತ್ತಷ್ಟು. ಹೆಲ್ಮೆಟ್ ಪ್ರಯೋಜನದ ಬಗ್ಗೆ ತಿಳಿಸಿ ಹೇಳಬೇಕಾದ ಅಗತ್ಯವಿಲ್ಲ. ಆದರೆ ಇದರ ಫುಲ್ ಫಾರ್ಮ್ ನಿಮಗೆ ಗೊತ್ತಿರಬೇಕು. 

36

HELMET (ಹೆಲ್ಮೆಟ್) ಪದದ ಪೂರ್ಣ ರೂಪ
H: ಹೆಡ್ (ತಲೆ)
E: ಐಯ್ಸ್ (ಕಣ್ಣು)
L: ಲಿಪ್ಸ್ (ತುಟಿ)
M: ಮೌಥ್ (ಬಾಯಿ) 
E: ಇಯರ್ಸ್ (ಕಿವಿ)
T: ಟೀಥ್ (ಹಲ್ಲು)

46

ಹೆಲ್ಮೆಟ್ ಹೇಗೆ ಸವಾರರು ಪ್ರಾಣ ಉಳಿಸುತ್ತದೋ, ಹಾಗೆ ಈ ಪದದಲ್ಲಿ ಬರವು ಅಕ್ಷರಶಗಳು ಅಷ್ಟೇ ಮುಖ್ಯವಾಗಿದೆ. ಇದು ಸವಾರರ ಪ್ರತಿ ಭಾಗವನ್ನು ರಕ್ಷಿಸುತ್ತದೆ. ಹೆಲ್ಮೆಟ್ ತಲೆಗೆ ಧರಿಸವು ಸಾಧನ. ಹೀಗಾಗಿ ತಲೆಯ ಪ್ರತಿಯೊಂದು ಭಾಗವನ್ನು ಇದು ರಕ್ಷಿಸುತ್ತದೆ. ಇದೇ ಕಾರಣದಿಂದ ಹೆಲ್ಮೆಟ್ ಪದ ಬಳಕೆ ಮಾಡಲಾಗಿದೆ.

56

ತಲೆ, ಕಣ್ಣು, ತುಟಿ ಬಾಯಿ, ಕಿವಿ, ಹಲ್ಲು ಸೇರಿ ಸಂಪೂರ್ಣ ತಲೆಗೆ ರಕ್ಷಣೆ ಒದಗಿಸುವ ಸಾಧನೆವೆ ಹೆಲ್ಮೆಟ್. ಮನಷ್ಯನ ಜೀವಕ್ಕೆ ಹಾಗೂ ಜೀವನಕ್ಕೆ ತಲೆ ಅತ್ಯಂತ ಮುಖ್ಯ. ಇದರಲ್ಲಿ ಯಾವುದೇ ಒಂದು ಭಾಗಕ್ಕೂ ಸಮಸ್ಯೆಯಾದರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಹೆಲ್ಮೆಟ್ ಪದದ ಗಂಭೀರ ಅರ್ಥವನ್ನು ಕಲ್ಪಿಸುತ್ತದೆ. ಹೀಗಾಗಿ ಹೆಲ್ಮೆಟ್ ಧರಿಸುವುದನ್ನು ಮಿಸ್ ಮಾಡಿಕೊಳ್ಳಬೇಡಿ.

66

ಸವಾರಿ ದೂರವಿರಲಿ, ಹತ್ತಿರವಿರಲಿ, ಹೆಲ್ಮೆ ಧರಿಸುವುದು ಮರೆಯಬೇಡಿ, ನಿರ್ಲಕ್ಷಿಸಬೇಡಿ. ಇನ್ನು ಪೊಲೀಸರು ಹಿಡಿಯುತ್ತಾರೆ ಅನ್ನೋ ಕಾರಣಕ್ಕೆ ಹೆಲ್ಮೆಟ್ ಖರೀದಿಸಬೇಡಿ. ಉತ್ತಮ ಗುಣಮಟ್ಟದ, ಪ್ರಮಾಣೀಕೃತ ಹೆಲ್ಮೆಟ್ ಖರೀದಿಸಿ. ಈ ಮೂಲಕ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ. 

Read more Photos on
click me!

Recommended Stories