ಹೊಸ ಇವಿ ನೀತಿ, ಮೂರನೇ ಕಾರು ಎಲೆಕ್ಟ್ರಿಕ್ ಆಗಿರಬೇಕು, ಪೆಟ್ರೋಲ್ ದ್ವಿಚಕ್ರಕ್ಕೆ ಅವಕಾಶವಿಲ್ಲ

Published : May 07, 2025, 09:43 PM IST

ಹೊಸ ಇವಿ ಪಾಲಿಸಿ ಸರ್ಕಾರ ಜಾರಿಗೆ ತರುತ್ತಿದೆ. ಈ ಪಾಲಿಸಿ ಪ್ರಕಾರ ಪೆಟ್ರೋಲ್ ಬೈಕ್ ಸ್ಕೂಟರ್ ರಿಜಿಸ್ಟ್ರೇಶನ್ ಮಾಡಲು ಸಾಧ್ಯವಿಲ್ಲ, ಇನ್ನು 2 ಕಾರು ಇರುವವರು ಮೂರನೇ ಕಾರು ಖರೀದಿಸುತ್ತಿದ್ದರೆ ಅದು ಎಲೆಕ್ಟ್ರಿಕ್ ಆಗಿರಬೇಕು. ಹೊಸ ನೀತಿಯಲ್ಲಿ ಎನೆಲ್ಲಾ ಬದಲಾವಣೆ ಇದೆ.

PREV
14
ಹೊಸ ಇವಿ ನೀತಿ, ಮೂರನೇ ಕಾರು ಎಲೆಕ್ಟ್ರಿಕ್ ಆಗಿರಬೇಕು, ಪೆಟ್ರೋಲ್ ದ್ವಿಚಕ್ರಕ್ಕೆ ಅವಕಾಶವಿಲ್ಲ
ಹೊಸ ಇವಿ ಪಾಲಿಸಿ 2.0

ದೆಹಲಿಯಲ್ಲಿ ಹೊಸ ಇವಿ ಪಾಲಿಸಿ ಜಾರಿಗೆ ತರಲಾಗುತ್ತಿದೆ. ಹಲುವು ಬದಲಾವಣೆಗಳನ್ನು ಈ ಪಾಲಿಸಿಯಲ್ಲಿ ಮಾಡಲಾಗಿದೆ. ಪ್ರಮುಖವಾಗಿ  ಮಾಲಿನ್ಯ ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಈಗ ದೆಹಲಿಯಲ್ಲಿ ಕಾರುಗಳ ಸಂಖ್ಯೆ ಜಾಸ್ತಿ ಆಗ್ತಿದೆ. ಎಲ್ಲೆಲ್ಲೂ ಕಾರುಗಳೇ. ಒಂದು ಮನೆಯಲ್ಲಿ 3-4 ಕಾರುಗಳು ಇರುತ್ತವೆ. ರಸ್ತೆಯಲ್ಲಿ ಟ್ರಾಫಿಕ್ ಜಾಮ್. ಕಾರುಗಳ ಸಂಖ್ಯೆ ಜಾಸ್ತಿಯಿಂದ ಪೊಲ್ಯೂಷನ್ ಕೂಡ ಜಾಸ್ತಿ ಆಗ್ತಿದೆ. ಪಾರ್ಕಿಂಗ್ ಸಮಸ್ಯೆ ಕೂಡ ಹೆಚ್ಚಾಗ್ತಿದೆ. ಹೀಗಾಗಿ, ದೆಹಲಿ ಸರ್ಕಾರ ಹೊಸ ಇವಿ ಪಾಲಿಸಿ ತರಲು ಮುಂದಾಗಿದೆ. ಈ ಪಾಲಿಸಿಯ ಡ್ರಾಫ್ಟ್ ಈಗ ರಿಲೀಸ್ ಆಗಿದೆ.
 

24
ಇವಿ ಪಾಲಿಸಿ 2.0 - ಪೆಟ್ರೋಲ್, ಡೀಸೆಲ್ ಕಾರುಗಳಿಗೆ ನಿರ್ಬಂಧ

ಈ ಡ್ರಾಫ್ಟ್‌ನಲ್ಲಿ ಇವಿಗಳನ್ನು ಪ್ರೋತ್ಸಾಹಿಸುವ ಮತ್ತು ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಕಾರುಗಳಿಗೆ ನಿರ್ಬಂಧ ಹಾಕುವ ಬಗ್ಗೆ ಚರ್ಚೆ ಇದೆ. ಹೊಸ ಇವಿ ಪಾಲಿಸಿ ಕಾರುಗಳಿಗೆ ಫ್ಯಾಮಿಲಿ ಪ್ಲಾನಿಂಗ್ ತರಹ ಇದೆ. ಈ ಡ್ರಾಫ್ಟ್ ಪ್ರಕಾರ, ಮನೆಯಲ್ಲಿ ಮೂರನೇ ಕಾರು ಖರೀದಿಸಿದರೆ ಅದು ಇವಿ ಆಗಿರಬೇಕು.
 

34
ಇವಿ ಪಾಲಿಸಿ 2.0 - ಮೂರನೇ ಕಾರು ಇವಿ!

ಅಂದರೆ, ಎರಡು ಕಾರುಗಳು ಇದ್ದವರು ಮೂರನೇ ಕಾರನ್ನು ಖರೀದಿಸಬೇಕೆಂದರೆ ಅದು ಇವಿ ಆಗಿರಬೇಕು. ಆದರೆ ಈಗಾಗಲೇ ಮೂರು ಅಥವಾ ನಾಲ್ಕು ಕಾರುಗಳು ಇದ್ದವರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ಮುಂದೆ ಅವರು ಹೊಸ ಕಾರನ್ನು ಖರೀದಿಸಿದರೆ ಅದು ಇವಿ ಆಗಿರಬೇಕು. 2027ರ ವೇಳೆಗೆ ದೆಹಲಿಯಲ್ಲಿ 95% ಹೊಸ ಕಾರುಗಳು ಇವಿ ಆಗಿರಬೇಕು ಎಂಬುದು ಈ ಪಾಲಿಸಿಯ ಉದ್ದೇಶ.
 

44
ಇವಿ ಪಾಲಿಸಿ 2.0 - ಪೆಟ್ರೋಲ್, ಡೀಸೆಲ್ ವಾಹನಗಳಿಗೆ ನಿರ್ಬಂಧ

2030ರ ವೇಳೆಗೆ ಈ ಪ್ರಮಾಣ 98%ಕ್ಕೆ ಏರಿಕೆಯಾಗಲಿದೆ. ಈ ಡ್ರಾಫ್ಟ್ ಪ್ರಕಾರ, ಆಗಸ್ಟ್ 2026ರಿಂದ ಪೆಟ್ರೋಲ್, ಡೀಸೆಲ್ ಬೈಕ್ ಮತ್ತು ಸ್ಕೂಟರ್‌ಗಳ ನೋಂದಣಿಗೂ ನಿರ್ಬಂಧ ಹೇರಲಾಗುತ್ತದೆ. ಮುಂದಿನ ವರ್ಷ ಆಗಸ್ಟ್‌ನಿಂದ ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಬೈಕ್ ಮತ್ತು ಸ್ಕೂಟರ್‌ಗಳನ್ನು ದೆಹಲಿಯಲ್ಲಿ ನೋಂದಾಯಿಸಲು ಸಾಧ್ಯವಿಲ್ಲ. ಆಗಸ್ಟ್ 2025ರಿಂದ ಸಿಎನ್‌ಜಿ ಆಟೋಗಳ ನೋಂದಣಿಗೂ ನಿರ್ಬಂಧ ಹೇರಲಾಗುತ್ತದೆ.

Read more Photos on
click me!

Recommended Stories