ಆಟೋಮೊಬೈಲ್ ಕ್ಷೇತ್ರಕ್ಕೆ ಅದಾನಿ, ಭಾರತದ ಮೊದಲ ಹೈಡ್ರೋಜನ್ ಚಾಲಿತ ಟ್ರಕ್ ಬಿಡುಗಡೆ

Published : May 17, 2025, 08:17 PM IST

ಭಾರತದ ಮೊದಲ ಹೈಡ್ರೋಜನ್ ಟ್ರಕ್ ಬಿಡುಗಡೆಯಾಗಿದೆ. ವಿಶೇಷ ಅಂದರೆ ಅದಾನಿ ಗ್ರೂಪ್ ಈ ಟ್ರಕ್ ಬಿಡುಗಡೆ ಮಾಡಿದೆ.  ಗಣಿಗಾರಿಕೆ ಸಾಗಣೆಗೆ ಉಪಯೋಗವಾಗಲಿರುವ ಈ ಟ್ರಕ್, ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆ ಮಾಡುತ್ತದೆ. ಪರಿಸರ ಸ್ನೇಹಿ, ದಕ್ಷತೆಯ ಈ ಹೈಡ್ರೋಜನ್ ಟ್ರಕ್ ಹೊಸ ಸಾಧನೆ.

PREV
14
ಆಟೋಮೊಬೈಲ್ ಕ್ಷೇತ್ರಕ್ಕೆ ಅದಾನಿ, ಭಾರತದ ಮೊದಲ ಹೈಡ್ರೋಜನ್ ಚಾಲಿತ ಟ್ರಕ್ ಬಿಡುಗಡೆ
ಭಾರತದ ಮೊದಲ ಹೈಡ್ರೋಜನ್ ಟ್ರಕ್

ಭಾರತದ ಮೊದಲ ಹೈಡ್ರೋಜನ್ ಟ್ರಕ್ ಅನ್ನು ಅದಾನಿ ಸಮೂಹ ಬಿಡುಗಡೆ ಮಾಡಿದೆ. ಗಣಿಗಾರಿಕೆ ಸಾಗಣೆಗೆ ಈ ಟ್ರಕ್ ಉಪಯೋಗಿಸಲಾಗುವುದು ಎಂದು ಅದಾನಿ ಸಮೂಹ ತಿಳಿಸಿದೆ. ಇದರಿಂದ ಪೆಟ್ರೋಲ್, ಡೀಸೆಲ್ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಛತ್ತೀಸ್‌ಗಢದಲ್ಲಿ ಈ ಟ್ರಕ್ ಬಿಡುಗಡೆಯಾಗಿದೆ. ೪೦ ಟನ್ ಸಾಮರ್ಥ್ಯದ ಈ ಟ್ರಕ್‌ಗೆ ಛತ್ತೀಸ್‌ಗಢ ಮುಖ್ಯಮಂತ್ರಿ ಚಾಲನೆ ನೀಡಿದರು. ಕರೆ ಪಾಲ್ಮಾ ಗಣಿಯಿಂದ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲು ಸಾಗಿಸಲು ಈ ಟ್ರಕ್ ಬಳಕೆಯಾಗಲಿದೆ.

24
ಹೈಡ್ರೋಜನ್ ಟ್ರಕ್

ಈಗಿರುವ ಡೀಸೆಲ್ ಟ್ರಕ್‌ಗಳ ಬದಲು ಹಂತ ಹಂತವಾಗಿ ಹೈಡ್ರೋಜನ್ ಟ್ರಕ್‌ಗಳನ್ನು ಬಳಸುತ್ತೇವೆ, ಮುಂದೆ ಇವುಗಳ ಸಂಖ್ಯೆ ಹೆಚ್ಚಿಸುತ್ತೇವೆ ಎಂದು ಅದಾನಿ ಸಮೂಹ ಹೇಳಿದೆ. ಒಮ್ಮೆ ಚಾರ್ಜ್ ಮಾಡಿದರೆ 200 ಕಿ.ಮೀ. ಓಡಬಲ್ಲದು. ಮೂರು ಹೈಡ್ರೋಜನ್ ಟ್ಯಾಂಕ್‌ಗಳಿವೆ. ಡೀಸೆಲ್ ಟ್ರಕ್‌ಗಳಷ್ಟೇ ಸಾಮರ್ಥ್ಯ, ದೂರ ಓಡುವ ಶಕ್ತಿ ಇದಕ್ಕಿದೆ.

34
ಅದಾನಿ

ಈ ಹೈಡ್ರೋಜನ್ ಟ್ರಕ್, ಇಂಗಾಲದ ಹೊರಸೂಸುವಿಕೆ ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಅದಾನಿ ಸಮೂಹ ಹೇಳಿದೆ. ಇಂಗಾಲದ ಡೈಆಕ್ಸೈಡ್, ಇತರೆ ಹೊಗೆ ಬಿಡುವ ಡೀಸೆಲ್ ಟ್ರಕ್‌ಗಳಿಗಿಂತ ಭಿನ್ನವಾಗಿ, ಹೈಡ್ರೋಜನ್ ಟ್ರಕ್‌ಗಳು ನೀರಾವಿ, ಬಿಸಿ ಗಾಳಿ ಮಾತ್ರ ಹೊರಗೆ ಬಿಡುತ್ತವೆ. ವಾಣಿಜ್ಯ ವಾಹನಗಳಲ್ಲಿ ಅತ್ಯಂತ ಸ್ವಚ್ಛ ಆಯ್ಕೆ ಇದು. ಇದರಿಂದ ಪರಿಸರ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗುತ್ತದೆ.

44
ಹೈಡ್ರೋಜನ್ ಟ್ರಕ್

ಹೈಡ್ರೋಜನ್ ಇಂಧನ ಕೋಶಗಳು, ವಿದ್ಯುತ್ ರಾಸಾಯನಿಕ ಪ್ರಕ್ರಿಯೆಯಿಂದ ಕೆಲಸ ಮಾಡುತ್ತವೆ. ಹೈಡ್ರೋಜನ್, ಆಮ್ಲಜನಕ ವಿದ್ಯುತ್ತಾಗಿ ಪರಿವರ್ತನೆಯಾಗುತ್ತವೆ. ಇದರಲ್ಲಿ ನೀರು, ಶಾಖ ಮಾತ್ರ ಉಪ ಉತ್ಪನ್ನಗಳಾಗಿ ಹೊರಬರುತ್ತವೆ. ಹೈಡ್ರೋಜನ್ ಇಂಧನ ಕೋಶದ ಒಳಗೆ ಹೋದಾಗ, ಅದು ಪ್ರೋಟಾನ್‌ಗಳು ಮತ್ತು ಎಲೆಕ್ಟ್ರಾನ್‌ಗಳಾಗಿ ವಿಭಜನೆಯಾಗುತ್ತದೆ. ಪ್ರೋಟಾನ್‌ಗಳು ಪೊರೆ ಮೂಲಕ ಹಾದು ಹೋದಾಗ, ಎಲೆಕ್ಟ್ರಾನ್‌ಗಳು ಸರ್ಕ್ಯೂಟ್ ಮೂಲಕ ಹಾದು ವಿದ್ಯುತ್ ಉತ್ಪಾದಿಸುತ್ತವೆ. ಈ ವಿದ್ಯುತ್, ವಾಹನದ ಮೋಟಾರ್‌ಗೆ ಶಕ್ತಿ ನೀಡುತ್ತದೆ. ಈ ಪ್ರಕ್ರಿಯೆಯಲ್ಲಿ ವಾಹನದಿಂದ ನೀರು ಮಾತ್ರ ಹೊರಬರುತ್ತದೆ.

Read more Photos on
click me!

Recommended Stories