ಏರ್ ಇಂಡಿಯಾದಿಂದ ಭರ್ಜರಿ ಆಫರ್; ಟಿಕೆಟ್ ದರದಲ್ಲಿ ಶೇ.50ರಷ್ಟು ವಿನಾಯಿತಿ, 1 ಕಂಡೀಷನ್!

First Published | Dec 17, 2020, 3:29 PM IST

ಏರ್ ಇಂಡಿಯಾ ವಿಶೇಷ ಆಫರ್ ಘೋಷಿಸಿದೆ. ದೇಶಿ ವಿಮಾನ ಹಾರಾಟಕ್ಕೆ ನೂತನ ಆಫರ್ ಅನ್ವಯವಾಗಲಿದೆ. ಈ ಆಫರ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳುವವರಿಗೆ ಶೇಕಡಾ 50 ರಷ್ಟು ವಿನಾಯಿತಿ ಸಿಗಲಿದೆ. ಆದರೆ ಈ ಆಫರ್ ಪಡೆದುಕೊಳ್ಳಲು ಒಂದು ಕಂಡೀಷನ್ ವಿಧಿಸಿದೆ.
 

ಏರ್ ಇಂಡಿಯಾ ವಿಶೇಷ ಆಫರ್ ಘೋಷಿಸಿದೆ. ಈ ಮೂಲಕ ಟಿಕೆಟ್ ದರದಲ್ಲಿ ಶೇಕಡಾ 50 ರಷ್ಟು ವಿನಾಯಿತಿ ನೀಡುವುದಾಗಿ ಘೋಷಿಸಿದೆ.
ಈ ಆಫರ್ ಪಡೆಯಲು ಏರ್ ಇಂಡಿಯಾ ಒಂದು ಕಂಡೀಷನ್ ಹಾಕಿದೆ. ಹೌದು, ಟಿಕೆಟ್ ದರದಲ್ಲಿ ಶೇಕಡಾ 50 ರಷ್ಟು ವಿನಾಯಿತಿ ನೀಡಿರುವುದು ಹಿರಿಯ ನಾಗರೀಕರಿಗೆ ಮಾತ್ರ.
Tap to resize

60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರೀಕರು ಏರ್ ಇಂಡಿಯಾ ಟಿಕೆಟ್ ಬುಕ್ ಮಾಡಿಕೊಳ್ಳುವಾಗ ಶೇಕಡಾ 50 ರಷ್ಟು ವಿನಾಯಿತಿ ಸಿಗಲಿದೆ.
ದೇಶಿಯ ವಿಮಾನ ಹಾರಾಟಕ್ಕೆ ಮಾತ್ರ ಈ ಆಫರ್ ಅನ್ವಯವಾಗಲಿದೆ. ಇಷ್ಟೇ ಅಲ್ಲ ಭಾರತೀಯ ನಾಗರೀಕರಾಗಿರಬೇಕು. ಹೀಗಿದ್ದಲ್ಲಿ ದೇಶದೊಳಗಿನ ಯಾವುದೇ ಏರ್ ಇಂಡಿಯಾ ಪ್ರಯಾಣಕ್ಕೆ ಶೇಕಡಾ 50ರಷ್ಟು ಮಾತ್ರ ಪಾವತಿಸಿದರೆ ಸಾಕು.
ಆಫರ್ ಮೂಲಕ ಟಿಕೆಟ್ ಬುಕ್ ಮಾಡಲು ಬಯಸುವ ಹಿರಿಯ ನಾಗರೀಕರು ತಮ್ಮ ಜನನ ದಿನಾಂಕ ನಮೂದಿಸಿರುವ ಗುರುತಿನ ಚೀಟಿ ನೀಡಿ ಈ ಆಫರ್ ಪಡೆದುಕೊಳ್ಳಬಹುದು.
ಚುನಾವಣಾ ಗುರುತಿನ ಚೀಟಿ, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಅಥವಾ ಏರ್ ಇಂಡಿಯಾ ನೀಡಿರುವ ಹಿರಿಯ ನಾಗರೀಕರ ಗುರುತಿನ ಚೀಟಿ ಪ್ರತಿ ನೀಡಿ ಈ ಸೌಲಭ್ಯ ಪಡೆದುಕೊಳ್ಳಬಹುದು.
ಹಿರಿಯ ನಾಗರೀಕರ ಜೊತೆ ಮಕ್ಕಳ ಪ್ರಯಾಣಕ್ಕೆ ಯಾವುದೇ ಡಿಸ್ಕೌಂಟ್ ಲಭ್ಯವಿಲ್ಲ. ಆದರೆ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿದ್ದರೆ ರಿಯಾಯಿತಿ ಲಭ್ಯವಿದೆ.
ಶೇಕಡಾ 50 ರಷ್ಟು ವಿನಾಯಿತಿ ಆಫರ್ ಪಡೆದುಕೊಳ್ಳಲು ಹಿರಿಯ ನಾಗರೀಕರು ತಮ್ಮ ಪ್ರಯಾಣದ ದಿನಾಂಕಕ್ಕಿಂತ 3 ದಿನ ಮೊದಲು ಏರ್ ಇಂಡಿಯಾ ಟಿಕೆಟ್ ಬುಕ್ ಮಾಡಿರಬೇಕು.

Latest Videos

click me!