ಅಲ್ಟಿಗ್ರೀನ್ ಸ್ಟಾರ್ಟ್ ಅಪ್ ಕಂಪನಿ ಬಿಡುಗಡೆ ಮಾಡಿರುವ ತ್ರಿಚಕ್ರ ವಾಹನ ಕೇವಲ 15 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ. ಶೂನ್ಯದಿಂದ ಸಂಪೂರ್ಣ ಚಾರ್ಜ್‌ಗೆ ಕೇವಲ 15 ನಿಮಿಷ ಮಾತ್ರ.
ಇದು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ಕಾರ್ಗೋ ವಾಹನವಾಗಿದೆ. ಅಲ್ಟಿಗ್ರೀನ್ ಸ್ಟಾರ್ಟ್ ಅಪ್ ಕಂಪನಿ ಲೋ ಡೆಕ್, ಹೈಡೆಕ್, neEV ತೆಜ್ ಎಂಬ ವೇರಿಯೆಂಟ್ ಕಾರ್ಗೋಗಳನ್ನು ಬಿಡುಗಡೆ ಮಾಡಿದೆ.
ಅಲ್ಟಿಗ್ರೀನ್ ಕಂಪನಿಯ ಎಲ್ಲಾ ಕಾರ್ಗೋ ವಾಹನಗಳು ಕೇವಲ 15 ನಿಮಿಷದಲ್ಲಿ ಚಾರ್ಜ್ ಆಗಲಿದೆ. 8.2kWh ಬ್ಯಾಟರಿ ಪ್ಯಾಕ್ ಹೊಂದಿರುವ ಕಾರ್ಗೋ ವಾಹನಗಳು ದೇಶದ ಯಾವುದೇ ಮೂಲೆಯಲ್ಲೂ ಬುಕ್ ಮಾಡಿದರೂ ಡೆಲವರಿ ಆಗಲಿದೆ.
ಅಲ್ಟಿಗ್ರೀನ್ ಸ್ಟಾರ್ಟ್‌ಅಪ್ ಕಾರ್ಗೋ ಎಲೆಕ್ಟ್ರಿಕ್ ವಾಹನದ ಬೆಲೆ 3.55 ಲಕ್ಷ ರೂಪಾಯಿ ಬೆಲೆಯಿಂದ ಆರಂಭಗೊಳ್ಳುತ್ತಿದೆ. ನೂತನ ಕಾರ್ಗೋ ವಾಹನ ಚಾರ್ಜಿಂಗ್ ಸಮಸ್ಯೆಗೆ ಪರಿಹಾರ ನೀಡಿದೆ.
ಸದ್ಯ ಲಭ್ಯವಿರುವ ಕಾರ್ಗೋ ಅಥವಾ ಯಾವುದೇ ಎಲೆಕ್ಟ್ರಿಕ್ ವಾಹನಗಳು ಕನಿಷ್ಠ 1 ಗಂಟೆ ಚಾರ್ಜಿಂಗ್ ಸಮಯ ತೆಗೆದುಕೊಳ್ಳಲಿದೆ. ಈ ಸಮಸ್ಯೆಯಿಂದಾಗಿ ಹಲವರು ಎಲೆಕ್ಟ್ರಿಕ್ ಕಾರುಗಳತ್ತ ಮುಖ ಮಾಡುತ್ತಿಲ್ಲ.
ಅಲ್ಟಿಗ್ರೀನ್ ಕಾರ್ಗೋ ವಾಹನಗಳ ಸುರಕ್ಷತೆಯನ್ನು ಪರೀಕ್ಷೆ ಮಾಡಲಾಗಿದೆ. ಉರಿಬಿಸಿಲ ವಾತಾವರ, ತಂಪು ಹಾಗೂ ಮಳೆಗಾಲದಲ್ಲೂ ವಾಹನ ಪರೀಕ್ಷಿಸಲಾಗಿದೆ.
ಬೆಂಗಳೂರು ಮೂಲಕ ಅಲ್ಟಿಗ್ರೀನ್ ಸ್ಟಾರ್ಟ್ ಅಪ್ ಕಂಪನಿ ಇದೀಗ ಎಲೆಕ್ಟ್ರಿಕ್ ಆಟೋರಿಕ್ಷಾ ಬಿಡುಗಡೆ ಮಾಡಿದೆ. ಎನರ್ಜಿ ಸ್ಟಾರ್ಟ್‌ಅಪ್ ಕಂಪನಿ ಜೊತೆ ಸೇರಿ ಈ ತ್ರಿಚಕ್ರ ವಾಹನ ಬಿಡುಗಡೆ ಮಾಡಲಾಗಿದೆ.